ನವದೆಹಲಿ: ಪಾಕಿಸ್ಥಾನದ ನೂತನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಅಸೀಮ್ ಮುನೀರ್ ನೇಮಕವಾಗಿದ್ದಾರೆ.ಅವರಿಗೆ ಪುಲ್ವಾಮಾ ದಾಳಿಯ ನಂಟು ಇದೆ ಎಂದು ಹೇಳಲಾಗಿದ್ದು, ಆ ಕುರಿತು ಭಾರತದ ನಿವೃತ್ತ ಅಧಿಕಾರಿಯೊಬ್ಬರು ನೀಡಿರುವ ವಿವರಗಳು ಇಲ್ಲಿದೆ.
ಜನರಲ್ ಕಮರ್ ಜಾವೇದ್ ಬಾಜ್ವಾ ಅವರ ಸ್ಥಾನಕ್ಕೆ ಅಸಿಮ್ ಮುನೀರ್ ಅವರನ್ನು ಹೊಸ ಸೇನಾ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ಪಾಕ್ ನ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಗುರುವಾರ ಘೋಷಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ (ಎನ್‌ಎಸ್‌ಎಬಿ) ಸದಸ್ಯ ಮತ್ತು ಕ್ಯಾಬಿನೆಟ್ ಸೆಕ್ರೆಟರಿಯಟ್‌ನ ವಿಶೇಷ ಕಾರ್ಯದರ್ಶಿಯಾಗಿ ನಿವೃತ್ತರಾಗಿರುವ ತಿಲಕ್ ದೇವಾಶರ್ ಪ್ರಕಾರ, 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಮೇಲ್ವಿಚಾರಣೆ ಮಾಡಿದ ಪಾಕಿಸ್ಥಾನದವರಲ್ಲಿ ಮುನೀರ್ ಸೇರಿದ್ದಾರೆ.
ತಿಲಕ್ ದೇವಾಶರ್ ಅವರ ಪ್ರಕಾರ, ಮುನೀರ್ ಮೇಲ್ವಿಚಾರಣೆಯಲ್ಲಿ ಪುಲ್ವಾಮಾ ದಾಳಿ ನಡೆದಿದೆ ಮತ್ತು ಅವರು ನವೆಂಬರ್‌ನಲ್ಲಿ ಐಎಸ್‌ಐನ ಡಿಜಿ ಆಗಿದ್ದರು ಮತ್ತು ಇದು ಫೆಬ್ರವರಿ 2019 ರಲ್ಲಿ ಸಂಭವಿಸಿತು. ಅವರು ಕಾಶ್ಮೀರವನ್ನು ಕಡೆಗಣಿಸುವ ಅಥವಾ ವ್ಯವಹರಿಸುವ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದರು. ಆದ್ದರಿಂದ ಅವರು ಈ ಪ್ರದೇಶದೊಂದಿಗೆ ಬಹಳ ಪರಿಚಿತರಾಗಿದ್ದಾರೆ” ಎಂದು ಹೇಳಿದ್ದಾರೆ.
Related Articles
”ಇದುವರೆಗೆ ಪಾಕ್ ನ ಯಾವುದೇ ಸೇನಾ ಮುಖ್ಯಸ್ಥರು ಭಾರತದ ಬಗ್ಗೆ ಸ್ನೇಹ ಭಾವವನ್ನು ಹೊಂದಿಲ್ಲ. ಆದ್ದರಿಂದ, ಅಸಿಮ್ ಮುನೀರ್ ಆ ಪರಂಪರೆಯನ್ನು ಮುರಿಯಲು ಹೋಗುವುದಿಲ್ಲ. ಅವರು ಭಾರತದ ಬಗ್ಗೆ ಕಠಿಣ ನಿಲುವು ಹೊಂದಿರಲಿದ್ದಾರೆ” ಎಂದು ತಿಲಕ್ ದೇವಾಶರ್ ಹೇಳಿದ್ದಾರೆ.
ಲೆಫ್ಟಿನೆಂಟ್ ಜನರಲ್ ಮುನೀರ್ ಅವರು ನವೆಂಬರ್ 29 ರಂದು ನಿವೃತ್ತರಾಗಲಿರುವ 61 ವರ್ಷದ ಬಜ್ವಾ ಅವರಿಂದ ಸೇನಾ ಮುಖ್ಯಸ್ಥರಾಗಿ (COAS) ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ.
2019 ರ ಫೆಬ್ರವರಿ 14 ರಂದು ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ನಡೆದ ಉಗ್ರರ ಸಂಚು ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾದ ನಂತರ ಭಾರತ ಮತ್ತು ಪಾಕಿಸ್ಥಾನದ ನಡುವಿನ ಉದ್ವಿಗ್ನತೆ ಉಲ್ಬಣಗೊಂಡಿತ್ತು.