Advertisement

ಬೆಳಗಿನ ವಾಕಿಂಗ್‌ಗೆ ಹೋದಾಗ ಇಹಲೋಕ ತ್ಯಜಿಸಿದ ದೇವಸ್ಥಾನದ ಆನೆ ಲಕ್ಷ್ಮಿ

08:05 PM Nov 30, 2022 | Team Udayavani |

ಪುದುಚೇರಿ: ಇಲ್ಲಿನ ಪ್ರಸಿದ್ಧ ಮನಕುಲ ವಿನಾಯಕರ್ ದೇವಸ್ಥಾನದ ಆನೆ ಲಕ್ಷ್ಮಿ ಬುಧವಾರ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿ ಕೊನೆಯುಸಿರೆಳೆದಿದೆ.

Advertisement

1995 ರಲ್ಲಿ ತನ್ನ ಐದನೇ ವಯಸ್ಸಿನಲ್ಲಿ ವಿನಾಯಕರ್ ದೇವಸ್ಥಾನಕ್ಕೆ ಆಗಮಿಸಿದ ಆನೆ ಅಂದಿನಿಂದ ಭಕ್ತರ ಪ್ರೀತಿಗೆ ಪಾತ್ರವಾಗಿತ್ತು. ಲಕ್ಷ್ಮಿ ಸೌಮ್ಯ ವರ್ತನೆಗೆ ಹೆಸರುವಾಸಿಯಾಗಿದ್ದಳು.

ಲಕ್ಷ್ಮಿಯನ್ನು ತನ್ನ ಮಾವುತನು ಬೆಳಗಿನ ನಡಿಗೆಗೆ ಕರೆದೊಯ್ದಾಗ ಆನೆಯು ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಮೂರ್ಛೆ ಹೋಯಿತು. ಪಶುವೈದ್ಯಕೀಯ ವೈದ್ಯರು ವೈದ್ಯಕೀಯ ಸಹಾಯವನ್ನು ಒದಗಿಸಲು ಧಾವಿಸಿದರು ಆದರೆ ಲಕ್ಷ್ಮಿ ಕೊನೆಯುಸಿರೆಳೆದಿದ್ದರು. 32 ವರ್ಷ ದ ಲಕ್ಷ್ಮಿ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿರುವುದು ಖಚಿತವಾಗಿದೆ.

ಲಕ್ಷ್ಮಿ ಅವರ ಕೊನೆಯುಸಿರೆಳೆದ ಸುದ್ದಿ ತಿಳಿಯುತ್ತಿದ್ದಂತೆ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು, ಸಾವಿರಾರು ಭಕ್ತರು ದೌಡಾಯಿಸಿ ಕಣ್ಣೀರಿಟ್ಟು ಅಂತಿಮ ನಮನ ಸಲ್ಲಿಸಿದರು.

ಆರೋಪ
ಕಳೆದ ಕೆಲವು ದಿನಗಳಿಂದ ಆನೆಗೆ ಸಾಮಾನ್ಯ ಪಶುವೈದ್ಯರ ಬದಲಿಗೆ ಪೇಟಾ ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ಲಕ್ಷ್ಮಿಗೆ ಯಾವುದೋ ಚುಚ್ಚುಮದ್ದು ನೀಡಲಾಗಿದೆ ಎಂಬ ಆರೋಪವೂ ಇದೆ. ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಎಂದು ಕರೆಯಲ್ಪಡುವವರ ಒತ್ತಡದಿಂದಾಗಿ ಹೀಗಾಗಿದೆ. ಇದರಿಂದ ಆಕೆಯ ಆರೋಗ್ಯ ಹದಗೆಟ್ಟಿದೆ ಎಂದು ಜನರು ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next