ಬೆಂಗಳೂರು: ಇದೇ ಮಾರ್ಚ್ ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವಿದ್ಯಾರ್ಥಿಗಳ ಪ್ರವೇಶ ಪತ್ರ (ಹಾಲ್ ಟಿಕೆಟ್)ಗಳಲ್ಲಿ ಅಗತ್ಯ ವಿದ್ದರೆ ತಿದ್ದುಪಡಿ ಮಾಡಲು ಜ. 30ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
Advertisement
ಕಾಲೇಜುಗಳು ವಿದ್ಯಾರ್ಥಿಗಳ ಹಾಲ್ ಟಿಕೆಟ್‌ಗಳನ್ನು ಮಂಡಳಿಯ ಪಿಯು ಎಕ್ಸಾಂ ಪೋರ್ಟಲ್ ನಲ್ಲಿ ಲಾಗಿನ್ ಆಗುವ ಮೂಲಕ ಡೌನ್ ಲೋಡ್ ಮಾಡಿ ತಿದ್ದುಪಡಿ ಮಾಡಲು ಜ. 25ರ ವರೆಗೆ ಅವಕಾಶವಿತ್ತು. ಆದರೆ ಕೆಲವು ಕಾಲೇಜುಗಳು ತಿದ್ದುಪಡಿಗೆ ಕಾಲಾವಕಾಶ ವಿಸ್ತರಿಸು ವಂತೆ ಮನವಿ ಮಾಡಿದ್ದರಿಂದ ಅವಧಿಯನ್ನು ಜ. 30ರ ವರೆಗೆ ವಿಸ್ತರಿಸಲಾಗಿದೆ.