Advertisement

ದ್ವಿತೀಯ ಪಿಯು: ಜಿಲ್ಲೆಗೆ ಶೇ. 99.99 ಫ‌ಲಿತಾಂಶ

06:41 PM Jul 22, 2021 | Team Udayavani |

ಚಿಕ್ಕಬಳ್ಳಾಪುರ: ಪಿಯು ಶಿಕ್ಷಣ 2020-21ನೇ ಸಾಲಿನವಾರ್ಷಿಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದ್ದು, ಜಿಲ್ಲೆಗೆ ಶೇ.99.99 ಫಲಿತಾಂಶ ಲಭಿಸಿದೆಯೆಂದು ಪದವಿ ಪೂರ್ವ ಶಿಕ್ಷಣಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಈ ಬಾರಿದ್ವಿತೀಯಪಿಯುಸಿಪರೀಕ್ಷೆಗೆಹೊಸದಾಗಿ12,125 ವಿದ್ಯಾರ್ಥಿಗಳು ಹಾಗೂ ರಿಪೀಟರ್ ಒಟ್ಟು1264 ವಿದ್ಯಾರ್ಥಿಗಳು ಸೇರಿ ಒಟ್ಟು 13,389 ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದು, ಆ ಪೈಕಿ13,388 ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದೆ.ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡಿದ್ದ ಒಟ್ಟು13,389 ವಿದ್ಯಾರ್ಥಿಗಳ ಪೈಕಿ ಉತ್ತೀರ್ಣರಾಗಿರುವ13,388 ವಿದ್ಯಾರ್ಥಿಗಳಲ್ಲಿ6,785 ಬಾಲಕರು ಹಾಗೂ6,603 ಬಾಲಕಿಯರು ಆಗಿದ್ದಾರೆ. ಒಟ್ಟು ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಒಟ್ಟು9,538 ಮಂದಿ ಪೈಕಿ 9,537 ಉತ್ತೀರ್ಣ ಮಾಡಲಾಗಿದೆ.

ಕನ್ನಡ ವಿಭಾಗದಲ್ಲಿ ಒಟ್ಟು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದ 3,851 ವಿದ್ಯಾರ್ಥಿಗಳ ಪೈಕಿ 3,851ವಿದ್ಯಾರ್ಥಿಗಳನ್ನು ಸಹ ಉತ್ತೀರ್ಣಗೊಳಿಸಲಾಗಿದೆ.ಹೊಸದಾಗಿ ಪರೀಕ್ಷೆ ಬರೆದ ಒಟ್ಟು 12,125ವಿದ್ಯಾರ್ಥಿಗಳ ಪೈಕಿ12,124 ಮಂದಿ ವಿದ್ಯಾರ್ಥಿಗಳುಉತ್ತೀರ್ಣರಾದರೆ ರಿಪೀಟರ್ ವಿದ್ಯಾರ್ಥಿಗಳಲ್ಲಿ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದ ಒಟ್ಟು 1,264ವಿದ್ಯಾರ್ಥಿಗಳನ್ನು ಕೂಡ ಪಿಯು ಶಿಕ್ಷಣ ಇಲಾಖೆಉತ್ತೀರ್ಣಗೊಳಿಸುವ ಮೂಲಕ ಶೇ.100 ಫಲಿತಾಂಶನೀಡಲಾಗಿದೆ.

ಕಲಾ ವಿಭಾಗದಲ್ಲಿ ಪರೀಕ್ಷೆ ನೊಂದಾಯಿಸಿಕೊಂಡಿದ್ದ 2,086 ವಿದ್ಯಾರ್ಥಿಗಳು ಉತ್ತೀರ್ಣಗೊಳಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ,ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದ ಒಟ್ಟು 6,431 ವಿದ್ಯಾರ್ಥಿಗಳ ಪೈಕಿ 6,430ವಿದ್ಯಾರ್ಥಿಗಳನ್ನು ಮಾತ್ರ ಉತ್ತೀರ್ಣಗೊಳಿಸಿದೆ.ವಿಜ್ಞಾನ ವಿಭಾಗದಲ್ಲಿ ಒಟ್ಟು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದ ಒಟ್ಟು 4,872 ವಿದ್ಯಾರ್ಥಿಗಳ ಪೈಕಿಎಲ್ಲರೂ ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದವಿದ್ಯಾರ್ಥಿಗಳು ಶೇ.100 ರಷ್ಟು ಉತ್ತೀರ್ಣರಾಗಿದ್ದುನಗರ ಪ್ರದೇಶದಲ್ಲಿ ಶೇ.99.99 ರಷ್ಟು ವಿದ್ಯಾರ್ಥಿಗಳುಮಾತ್ರ ಉತ್ತೀರ್ಣ ಮಾಡಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next