Advertisement

ಪಿಯುಸಿ ಪರೀಕ್ಷೆ: ಕಲಾ ವಿಭಾಗದಲ್ಲಿ 561 ಅಂಕ ಗಳಿಸಿ ಅಂಧ ವಿದ್ಯಾರ್ಥಿನಿಯ ಸಾಧನೆ

11:15 PM Jun 18, 2022 | Team Udayavani |

ಮಂಗಳೂರು: ಈಕೆ ಬೆಳಕು ಕಂಡಿಲ್ಲ. ಆದರೆ ಅಕ್ಷರ ಬೆಳಕಿನ ಮೂಲಕ ಬದುಕು ಬೆಳಗಿಸುವ ಆಸೆ.

Advertisement

ಅಂಧ ವಿದ್ಯಾರ್ಥಿನಿ ಯಾಗಿರುವ ಅಪೂರ್ವಾ ಇತರರಿಗೆ ಸ್ಫೂರ್ತಿಯಾಗುವಂತಹ ಸಾಧನೆ ಮಾಡಿದ್ದಾರೆ. ಅವರು ಈ ಬಾರಿಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ 561 ಅಂಕ ಗಳಿಸಿದ್ದಾರೆ.

ಬೆಳಗಾವಿಯ ಕಾಗ್ವಾಡ್‌ ತಾ| ಮೋಳೆ ಗ್ರಾಮದ ಅಪೂರ್ವಾ ನಗರದ ಸೈಂಟ್‌ ಆ್ಯಗ್ನೆಸ್‌ ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ. ಬ್ರೈಲ್‌ ಲಿಪಿ ಯಲ್ಲೇ ಅಭ್ಯಾಸ ಮಾಡಿ ಪರೀಕ್ಷೆ ಬರೆದಿದ್ದಾರೆ. ಅಪೂರ್ವಾಳ ತಂದೆ ಬಾಹುಬಲಿ ಟೊಪಗಿ ಕೃಷಿಕ. ತಾಯಿ ರೋಹಿಣಿ ಟೊಪಗಿ ಶಿಕ್ಷಕಿ. ಅವರ ಮೂವರು ಮಕ್ಕಳು ಕೂಡ ಅಂಧರು. ಅಪೂರ್ವಾಳ ಸಹೋದರಿ ಬಿಎಡ್‌, ಸಹೋದರ ಬಿಎ ಓದುತ್ತಿದ್ದಾರೆ.

ಐಎಎಸ್‌ ಅಧಿಕಾರಿ ಆಗುವಾಸೆ
“ಉದಯವಾಣಿ’ಯೊಂದಿಗೆ ಮಾತನಾಡಿದ ಅಪೂರ್ವಾ, “ನನಗೆ ಕನಿಷ್ಠ 580 ಅಂಕಗಳ ನಿರೀಕ್ಷೆ ಇತ್ತು. ಆದ್ದರಿಂದ ಮರುಮೌಲ್ಯಮಾಪನಕ್ಕೆ ಹಾಕುತ್ತೇನೆ. ಐಎಎಸ್‌ ಅಧಿಕಾರಿಯಾಗುವ ಆಸೆ ಇದೆ. ಬೆಂಗಳೂರಿನ ಎಂ.ಎಸ್‌. ರಾಮಯ್ಯ ಕಾಲೇಜಿನಲ್ಲಿ ಬಿಎ ಮಾಡಲಿದ್ದೇನೆ’ ಎಂದು ಹೇಳಿದ್ದಾರೆ.

ಹಿಂಜರಿಕೆ ಬೇಡ
ನಾನು ಅಂಧಳಾಗಿದ್ದರೂ ಶಾಪ ಅಥವಾ ವರ ಎಂದು ಭಾವಿಸಿಲ್ಲ. ಧೈರ್ಯದಿಂದ ಮುನ್ನುಗ್ಗಿದರೆ ಯಾರು ಕೂಡ ಸಾಧನೆ ಮಾಡಬಹುದು. ಪಾಠವನ್ನು ಸರಿಯಾಗಿ ಓದುತ್ತಿದ್ದೆ. ಸಂದೇಹವಿದ್ದರೆ ಶಿಕ್ಷಕರಲ್ಲಿ ಕೇಳಿ ಪರಿಹರಿಸಿಕೊಳ್ಳುತ್ತಿದ್ದೆ. ಪ್ರಶ್ನೆಪತ್ರಿಕೆಗಳನ್ನು ಅಭ್ಯಸಿಸುತ್ತಿದ್ದೆ. ತಂದೆ, ತಾಯಿ ತುಂಬಾ ಪ್ರೋತ್ಸಾಹ ಮಾಡುತ್ತಿ ದ್ದಾರೆ. ಏನಾದರೂ ಸ್ವಲ್ಪ ವಿಫ‌ಲವಾದರೂ ಹುರಿದುಂಬಿಸುತ್ತಿದ್ದಾರೆ ಎಂದು ಅಪೂರ್ವಾ ಹೇಳಿದ್ದಾರೆ.

Advertisement

ಮಗಳ ಸಾಧನೆಯಿಂದ ತುಂಬಾ ಖುಷಿಯಾಗಿದೆ. ಆಕೆಗೆ ಇನ್ನಷ್ಟು ಅಂಕದ ನಿರೀಕ್ಷೆ ಇತ್ತು. ಆಕೆ ವಿಶೇಷವಾಗಿ ಅಭ್ಯಾಸ ಮಾಡುತ್ತಿರಲಿಲ್ಲ. ಆದರೆ ಆಡಿಯೋ ಮೂಲಕ ಗಮನವಿಟ್ಟು ಅಧ್ಯಯನ ಮಾಡುತ್ತಿದ್ದಳು ಎಂದು ಅಪೂರ್ವಾಳ ತಾಯಿ ರೋಹಿಣಿ ಟೊಪಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next