Advertisement

ಪದವಿಪೂರ್ವ ಕಾಲೇಜುಗಳಲ್ಲಿ ಸೂಕ್ತ ಸೌಲಭ್ಯ ಸಿಗಲಿ

11:20 PM May 19, 2022 | Team Udayavani |

ರಾಜ್ಯದ ಇತಿಹಾಸದಲ್ಲೇ ಈ ಬಾರಿ ದಾಖಲೆಯ ರೀತಿಯಲ್ಲಿ ಎಸ್ಸೆಸೆಲ್ಸಿ ಫ‌ಲಿತಾಂಶ ಬಂದಿದೆ. ಶೇ. 85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದು ತೀರಾ ಗರ್ವದಿಂದಲೇ ಹೇಳುವ ವಿಚಾರ. ಕೊರೊನಾ ಸಂಕಷ್ಟದ ನಡುವೆಯೂ ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶ ನೀಡಿದ್ದಾರೆ ಎಂದು ಶ್ಲಾ ಸಬಹುದು. ಕಳೆದ ವರ್ಷ ಶೇ.99.99ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೂ ಪರೀಕ್ಷೆ ಇಲ್ಲದೇ ಪಾಸ್‌ ಮಾಡಲಾಗಿತ್ತು. ಹೀಗಾಗಿ ದಾಖಲೆಗೆ ಸೇರ್ಪಡೆಯಾಗುವುದಿಲ್ಲ. ಆದರೆ ಪರೀಕ್ಷೆ ಬರೆದು ಇಷ್ಟೊಂದು ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಮಾತ್ರ ಇದೇ ಮೊದಲು.

Advertisement

ಈ ಬಾರಿ ಇನ್ನೂ ಹೆಮ್ಮೆಪಡಬೇಕಾದ ಮತ್ತೂಂದು ವಿಷಯವೂ ಇದೆ. ಇದೇ ಮೊದಲ ಬಾರಿಗೆ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. ಪ್ರತೀ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮುಂದಿದ್ದು, ಇವರಿಗೆ ಗ್ರಾಮೀಣ ವಿದ್ಯಾರ್ಥಿಗಳು ಸಾಥ್‌ ನೀಡಿರುವುದು ವಿಶೇಷ. ಈ ಪ್ರಮಾಣದ ವಿದ್ಯಾರ್ಥಿಗಳು ಪಾಸಾಗಿ, ರಾಜ್ಯಕ್ಕೆ ಹೆಮ್ಮೆ ತಂದಿರುವ ನಡುವೆಯೇ ಸರಕಾರವೂ ಈ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸೂಕ್ತ ಏರ್ಪಾಡು ಮಾಡಬೇಕಾದ ಅನಿವಾರ್ಯತೆಯೂ ಇದೆ. ಶೇ.85ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದರಿಂದ ಪದವಿಪೂರ್ವ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯೂ ಏರಿಕೆಯಾಗುತ್ತದೆ. ಕಳೆದ ಬಾರಿಯೂ ಶೇ.99.99 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರಿಂದ ಆಗಲೂ ಸೇರುವವರ ಸಂಖ್ಯೆ ಹೆಚ್ಚಾಗಿತ್ತು. ಆದರೆ ಕಳೆದ ಬಾರಿಗಿಂತ ಈ ಬಾರಿ ಫ‌ಲಿತಾಂಶ ಬೇರೆಯೇ ರೀತಿಯಲ್ಲಿ ಬಂದಿರುವುದರಿಂದ ನಿಜವಾಗಿಯೂ ಅಥವಾ ಓದಿಗಾಗಿಯೇ ಕಾಲೇಜು ಸೇರುವವರ ಸಂಖ್ಯೆ ತುಸು ಹೆಚ್ಚೇ ಇದೆ. ಏಕೆಂದರೆ, ಕಳೆದ ಬಾರಿ ಯಾರನ್ನೂ ಅನುತ್ತೀರ್ಣ ಮಾಡದೇ ಇದ್ದುದರಿಂದ ಚೆನ್ನಾಗಿ ಓದದೇ ಇರುವವರೂ ಉತ್ತೀರ್ಣರಾಗಿದ್ದರು.

2017ರ ದಾಖಲೆಯಂತೆ ರಾಜ್ಯದಲ್ಲಿ ಒಟ್ಟು 5,004 ಪದವಿ ಪೂರ್ವ ಕಾಲೇಜುಗಳಿವೆ. 2012ರಲ್ಲಿ ಇವುಗಳ ಸಂಖ್ಯೆ 3,949 ಇತ್ತು. ಇದರಲ್ಲಿ 2,828 ಖಾಸಗಿ, 1,204 ಸರಕಾರಿ, 797 ಅನುದಾನಿತ, 162 ವಿಭಜಿತ ಮತ್ತು 13 ಬಿಬಿಎಂಪಿ ಕಾಲೇಜುಗಳಿವೆ. ಈ ಕಾಲೇಜುಗಳಲ್ಲಿ ಉತ್ತೀರ್ಣರಾಗಿರುವ ಎಲ್ಲ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬೇಕಾಗಿದೆ.

ಖಾಸಗಿ ಕಾಲೇಜುಗಳಲ್ಲಿ ಇಂತಿಷ್ಟೇ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಬೇಕು ಎಂಬ ನಿಯಮ ಅಥವಾ ಇಲ್ಲಿನ ಶುಲ್ಕ ಬಡ ಮತ್ತು ಮಧ್ಯಮ ವಿದ್ಯಾರ್ಥಿಗಳಿಗೆ ಎಟುಕದೇ ಇರಬಹುದು. ಹೀಗಾಗಿ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಅನುದಾನಿತ ಅಥವಾ ಸರಕಾರಿ ಕಾಲೇಜುಗಳಲ್ಲೇ ವ್ಯವಸ್ಥೆ ಮಾಡಬೇಕಾಗುತ್ತದೆ. ಹೀಗಾಗಿ ಸರಕಾರವು ಈಗಲೇ ಎಚ್ಚೆತ್ತು ಹೆಚ್ಚುವರಿ ಕೊಠಡಿ, ಉಪನ್ಯಾಸಕರ ವ್ಯವಸ್ಥೆ, ವಿಜ್ಞಾನ ವಿಷಯವಾದರೆ ಪ್ರಯೋಗಾಲಯಗಳ ಸೌಲಭ್ಯ ಒದಗಿಸಬೇಕು. ಯಾವುದೇ ಕಾರಣಕ್ಕೂ ಮೂಲ ಸೌಕರ್ಯಗಳ ಕೊರತೆಯ ನೆಪವೊಡ್ಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗದಂತೆ ಮಾಡಬಾರದು. ಏಕೆಂದರೆ ಇದು ಅವರ ಭವಿಷ್ಯದ ಅತ್ಯಂತ ಮಹತ್ವದ ಘಟ್ಟ. ಮುಂದಿನ ದಿನಗಳಲ್ಲಿ ಪದವಿಗೆ ಸೇರಬೇಕಾದರೆ ಈ ಪಿಯುಸಿ ಶಿಕ್ಷಣವೇ ಹೆಬ್ಟಾಗಿಲು. ಅವರಿಗೆ ಸೂಕ್ತ ರೀತಿಯಲ್ಲಿ ಶಿಕ್ಷಣ ನೀಡಿದರೆ ಮುಂದಿನ ದಿನಗಳಲ್ಲಿ ಅವರು ಅತ್ಯುತ್ತಮ ಸಾಧನೆಯನ್ನೇ ಮಾಡಬಹುದು. ಹೀಗಾಗಿ ಸರಕಾರ ಇತ್ತ ನೋಡುವುದು ಅತ್ಯಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next