Advertisement

ಪಿಯುಸಿ: ಮಂಗಳೂರಿಗೆ ಹೆಚ್ಚುವರಿ ಮೌಲ್ಯಮಾಪನ ಕೇಂದ್ರ

01:10 AM Apr 21, 2022 | Team Udayavani |

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಎಲ್ಲ ವಿಷಯಗಳ ಮೌಲ್ಯಮಾಪನ ಕೇಂದ್ರಗಳನ್ನು ತೆರೆಯಬೇಕೆಂಬ ಬೇಡಿಕೆಗೆ ಆಂಶಿಕವಾಗಿ ಸ್ಪಂದಿಸಿರುವ ಸರಕಾರ, ಹೆಚ್ಚುವರಿಯಾಗಿ 5 ವಿಷಯಗಳು ಹಾಗೂ 3 ಕೇಂದ್ರಗಳನ್ನು ಸೇರಿಸಿದೆ. ಆ ಮೂಲಕ ಜಿಲ್ಲೆಯಲ್ಲಿ ಈ ಬಾರಿ ಒಟ್ಟು 12 ವಿಷಯಗಳ ಮೌಲ್ಯಮಾಪನವು 9 ಕೇಂದ್ರಗಳಲ್ಲಿ ನಡೆಯಲಿವೆ. ಇದರಿಂದಾಗಿ ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ 2 ಸಾವಿರಕ್ಕೂ ಮಿಕ್ಕಿದ ಉಪನ್ಯಾಸಕರು ಮೌಲ್ಯಮಾಪನಕ್ಕಾಗಿ ಬೆಂಗಳೂರಿಗೆ ಹೋಗುವುದು ತಪ್ಪಿದೆ.

Advertisement

ರಾಜ್ಯದಲ್ಲಿ ಎ.22ರಿಂದ ಮೇ 18ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ ಹಾಗೂ ಮಂಗಳೂರಿನಲ್ಲಿ ಮೌಲ್ಯಮಾಪನ ನಡೆಯಲಿದೆ.

ಈವರೆಗೆ ವಿಜ್ಞಾನ, ಹಿಂದಿ, ಸಮಾಜಶಾಸ್ತ್ರ, ಗಣಕ ವಿಜ್ಞಾನ, ಅರೆಬಿಕ್‌, ಸಂಖ್ಯಾಶಾಸ್ತ್ರ ಪತ್ರಿಕೆಗಳ ಮೌಲ್ಯಮಾಪನವು ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿತ್ತು. ಇದ ರಿಂದಾಗಿ ಉಪನ್ಯಾಸಕರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸು ವಂತಾಗಿತ್ತು. ದ.ಕ. ಪ.ಪೂ. ಕಾಲೇಜು ಪ್ರಾಂಶುಪಾಲರ ಸಂಘವು ಎಲ್ಲ ವಿಷಯಗಳ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರಗಳನ್ನು ದ.ಕ.ದಲ್ಲೇ ತೆರೆಯಲು ಬೇಡಿಕೆ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪ.ಪೂ. ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚಿಸಿದ್ದಾರೆ.

9 ಕಡೆ ಮೌಲ್ಯಮಾಪನ
ನಿರ್ದೇಶಕರಾದ ರಾಮಚಂದ್ರನ್‌ ಆರ್‌. ಅವರು ಸಮಾಜಶಾಸ್ತ್ರ, ಹಿಂದಿ, ಗಣಕ ವಿಜ್ಞಾನ ಹಾಗೂ ಸಂಖ್ಯಾಶಾಸ್ತ್ರ ವಿಷಯಗಳ ಮೌಲ್ಯಮಾಪನ ಕೇಂದ್ರ ಗಳನ್ನು ತೆರೆಯಲು ಆದೇಶಿಸಿದ್ದು, ಮಂಗಳೂರಿನಲ್ಲಿ ಈ ಬಾರಿ ಹೆಚ್ಚುವರಿ ಮೂರು ಕೇಂದ್ರಗಳು ಸೇರಿ ಒಟ್ಟು 9 ಕಡೆಗಳಲ್ಲಿ ಮೌಲ್ಯಮಾಪನ ನಡೆಯಲಿದೆ.

ವಿಜ್ಞಾನ ಕೇಂದ್ರಕ್ಕೂ ಬೇಡಿಕೆ
ದ್ವಿತೀಯ ಪಿಯುಸಿಯ 18 ವಿಷಯ ಗಳ ಪೈಕಿ ವಿಜ್ಞಾನ ಪತ್ರಿಕೆಯ ಮೌಲ್ಯಮಾಪನ ಬೆಂಗಳೂರಿನಲ್ಲೇ ನಡೆಯಲಿದ್ದು, ಅದಕ್ಕೂ ದಕ್ಷಿಣ ಕನ್ನಡದಲ್ಲಿ ಅವಕಾಶ ನೀಡಬೇಕು ಎಂಬ ಆಗ್ರಹವಿದೆ. ಈ ಬಗ್ಗೆ ಪೂರಕ ಅನುಕೂಲಗಳು ಹೊಂದಾಣಿಕೆಯಾದಲ್ಲಿ ಮುಂದಿನ ವರ್ಷವೇ ಅವಕಾಶ ನೀಡುವ ಭರವಸೆಯನ್ನು ಶಿಕ್ಷಣ ಇಲಾಖೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

Advertisement

ಹೊಸ 5 ವಿಷಯಗಳ ಮೌಲ್ಯಮಾಪನ
ದ.ಕ.ದಲ್ಲಿ 200ಕ್ಕೂ ಅಧಿಕ,ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ 170ಕ್ಕೂ ಅಧಿಕ ಪ.ಪೂ. ಕಾಲೇಜುಗಳಿವೆ. ಪಿಯುಸಿಯ 12 ವಿಷಯಗಳಿಗೆ ಸಂಬಂಧಿಸಿ ದ.ಕ., ಉಡುಪಿ, ಉತ್ತರ ಕನ್ನಡದ 2,000ಕ್ಕೂ ಅಧಿಕ ಮಂದಿ ಶಿಕ್ಷಕರು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಈವರೆಗೆ ಮಂಗಳೂರಿನಲ್ಲಿ 7 ವಿಷಯಗಳ ಮೌಲ್ಯಮಾಪನ ನಡೆಯುತ್ತಿದ್ದು, ಈ ವರ್ಷ ಹೆಚ್ಚುವರಿಯಾಗಿ 5 ವಿಷಯಗಳ ಮೌಲ್ಯಮಾಪನಕ್ಕೂ ಅನುಮತಿ ದೊರೆತಿದೆ.

ಮಂಗಳೂರಿನಲ್ಲಿ ಪಿಯುಸಿಗೆ 6 ಮೌಲ್ಯಮಾಪನ ಕೇಂದ್ರವಿತ್ತು. ಪ್ರಸಕ್ತ ವರ್ಷ ಶಿಕ್ಷಣ ಇಲಾಖೆ 3 ಹೆಚ್ಚು ವರಿ ಕೇಂದ್ರ ತೆರೆಯಲಿದೆ. ಈ ಮೂಲಕ ವಿಜ್ಞಾನ ಹೊರತುಪಡಿಸಿ ಉಳಿದ ಎಲ್ಲ ವಿಷಯಗಳ ಮೌಲ್ಯಮಾಪನವೂ ಮಂಗಳೂರಿ ನಲ್ಲೇ ನಡೆಯಲಿದೆ.
-ಜಯಣ್ಣ, ಉಪ ನಿರ್ದೇಶಕ,
ಪ.ಪೂ. ಶಿಕ್ಷಣ ಇಲಾಖೆ, ದ.ಕ. ಜಿಲ್ಲೆ

ಜಿಲ್ಲೆಯ ಉಪನ್ಯಾಸಕರ ಬೇಡಿಕೆಗೆ ಸ್ಪಂದಿಸಿ ಮಂಗಳೂರಿ ನಲ್ಲಿ ಹೆಚ್ಚುವರಿ ಮೌಲ್ಯಮಾಪನ ಕೇಂದ್ರ ತೆರೆಯಲು ಶಿಕ್ಷಣ ಸಚಿವರ ಅನುಮತಿ ನೀಡಿದೆ.
– ಕೆ.ಎನ್‌. ಗಂಗಾಧರ್‌ ಆಳ್ವ ,
ದ.ಕ. ಜಿಲ್ಲಾ ಪ.ಪೂ.
ಪ್ರಾಚಾರ್ಯರ ಸಂಘದ ಅಧ್ಯಕ್ಷ

- ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next