Advertisement
ಇಲಾಖೆಯ ಆಯುಕ್ತೆ ಸೌಜನ್ಯ ಹಾಗೂ ನಿರ್ದೇಶಕಿ ಫಿಲೋಮಿನಾ ಲೋಬೊ ಸೇರಿ ವಿವಿಧ ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿ ಈ ಮಾರ್ಗದರ್ಶಿಯನ್ನು ರಚಿಸಿದೆ.
ಮಾಡಲಾಗಿದೆ. ಈ ವರ್ಷದಲ್ಲಿ ಒಟ್ಟು 317 ಶೈಕ್ಷಣಿಕ ದಿನ ಬರಲಿದ್ದು, 72 ಸರ್ಕಾರಿ ರಜೆ ಹಾಗೂ 4 ವಿವೇಚನಾ ರಜೆ
ಸೇರಿ 76 ರಜೆಗಳಿದ್ದು, 241 ದಿನ ಮಾತ್ರ ಶಾಲಾ ಚಟುವಟಿಕೆ ನಡೆಯಲಿದೆ. ಶಾಲಾ ಶೈಕ್ಷಣಿಕ ವರ್ಷ ಆರಂಭದಿಂದ ಏಪ್ರಿಲ್ ನ ಮುಕ್ತಾಯದ ತನಕ ಯಾವೆಲ್ಲ ಚಟುವಟಿಕೆ ಮಾಡಬೇಕು ಮತ್ತು ಎಷ್ಟು ದಿನಾಚರಣೆಗಳನ್ನು ಆಚರಿಸಬೇಕು ಎಂಬಿತ್ಯಾದಿ ಮಾಹಿತಿಯನ್ನು ತಿಂಗಳು ಹಾಗೂ ದಿನಾಂಕದ ಸಮೇತ ವಿವರಿಸಲಾಗಿದೆ. 8ನೇ ತರಗತಿಗೆ 53 ರೂ. ಹಾಗೂ 9 ಮತ್ತು 10ನೇ ತರಗತಿಗೆ 198ರೂ. ಶುಲ್ಕವಿರುತ್ತದೆ. ಎಸ್ಸಿ, ಎಸ್ಟಿ, ಪರಿಶಿಷ್ಟ ವರ್ಗ ಮತ್ತು ವಿದ್ಯಾರ್ಥಿನಿಯರಿಗೆ ಶುಲ್ಕ ರಿಯಾಯ್ತಿ ಇದೆ ಎಂಬುದನ್ನು ಉಲ್ಲೇಖೀಸಲಾಗಿದೆ. ಎಲ್ಲಾ ಪ್ರೌಢಶಾಲೆಗಳಿಗೆ ಇದನ್ನು ತಲುಪಿಸಲಾಗುತ್ತದೆ.