Advertisement

ಮಾಲಿನ್ಯದಿಂದ ತುಂಬಿ ತುಳುಕುತ್ತಿರುವ ಸಾರ್ವಜನಿಕ ಬಾವಿಗಳು

06:00 AM Jul 29, 2018 | Team Udayavani |

ಕುಂಬಳೆ: ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಕೆಲವು ವರ್ಷಗಳಿಂದ ಸಾರ್ವಜನಿಕರು ಉಪಯೋಗಿಸುತ್ತಿದ್ದ ಬಾವಿ ಇದೀಗ ಮಾಲಿನ್ಯದಿಂದ ತುಂಬಿ ತುಳುಕುತ್ತಿದೆ.

Advertisement

ಕುಡಿಯುವ ನೀರಿಗಾಗಿ ಉಪಯೋಗಿಸುತ್ತಿದ್ದ ಸುಮಾರು 50 ರಿಂದ 100 ಆಡಿಗಳಷ್ಟು ಆಳವಿರುವ ಈ ಬಾವಿಯಲ್ಲಿ ತ್ಯಾಜ್ಯ ನಿಕ್ಷೇಷಿಸುವುದರಿಂದ ಆ ಬಾವಿಯ ಸುತ್ತಮುತ್ತಲಿನ ಕಿಲೋ ಮೀಟರ್‌ಗಳಷ್ಟು ದೂರವಿರುವ ಹೆಚ್ಚಿನ ಎಲ್ಲಾ ಬಾವಿ ಕೆರೆಗಳ ನೀರಿನಲ್ಲಿ ಮಾಲಿನ್ಯದ ಸೋಂಕುಗಳು ಹರಡಿದ ನೀರನ್ನು  ಉಪಯೋಗಿಸುವುದರಿಂದ ವಿವಿಧ ಮಾರಕ ರೋಗಳಿಗೆಗೆ ಕಾರಣವಾಗಬಹುದು.

ರಸ್ತೆಬದಿಯಲ್ಲಿ ನಿಕ್ಷೇಪಿಸಿದ ತ್ಯಾಜ್ಯಗಳಿಂದ ಹರಡುವ ಮಾರಕರೋಗಗಳಿಗೆ ಹೋಲಿಸಿದರೆ ಇದು ಹತ್ತು ಪಟ್ಟು ಅಧಿಕವಾಗಿರುತ್ತದೆ ಎಂದು ಅರೋಗ್ಯ ಇಲಾಖೆಯ ಅಧಿಕಾರಿಗಳ ಅನಿಸಿಕೆಯಾಗಿದೆ. ದಿನನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುವ ಕಾಸರಗೋಡು ಜಿಲ್ಲೆಯ ಹೃದಯ ಭಾಗವಾದ ಹೊಸ ಬಸ್‌ನಿಲ್ದಾಣ ಮಂಭಾಗದಲ್ಲಿನ ಆಳವಾಗಿದ್ದ ಪಾಳು ಬಾವಿಯೊಂದರಲ್ಲಿ ಮಾಲಿನ್ಯವು ತುಂಬಿ ಬೆಟ್ಟದೆತ್ತರಕ್ಕೆ ಬೆಳೆದಿರುವುದು. ಇದರ ಮುಂಭಾಗದಲ್ಲೇ ಪ್ರತಿನಿತ್ಯಚುನಾಯಿತರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸಂಚರಿಸಿದರೂ ಈ ಮಾಲಿನ್ಯ ತೆರವಿಗಾಗಲಿ ಅಥವಾ ಮಾಲಿನ್ಯ ನಿಕ್ಷೇಪಿಸುವ ಸಮಾಜಘಾತುಕರನ್ನು ಪತ್ತೆಹಚ್ಚಿ ಕಠಿನ ಕಾನೂನು ಕ್ರಮ ಕೈಗೊಳ್ಳದಿರುವುದು ಮಾಲಿನ್ಯದ ಬೆಟ್ಟ ಮತ್ತಷ್ಟು ಬೆಳೆಯಲು ಕಾರಣವಾಗಿದೆ. ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿ ದ್ದಾರೆ.

ಮುಚ್ಚುವುದನ್ನು ತಡೆಯಲಿ
ಮೂರು ಬರಿದಾದ ಬಾವಿಗಳಲ್ಲಿ ಮಳೆನೀರು ತುಂಬಿ ಇಂಗಿದಲ್ಲಿ ಪರಿಸರದ ಬಾವಿಗಳಲ್ಲಿ ನೀರು ತುಂಬುವುದು.ಅಲ್ಲದೆ ಆ ಪ್ರದೇಶದ ನೀರಿನ ಕೊರತೆ ಯನ್ನು ನಿವಾರಿಸಲು ಅಲ್ಪ ಸಹಕಾರಿಯಾಗಬಲ್ಲುದು.ಆದುದರಿಂದ ಬಾವಿಗಳನ್ನು ಮುಚ್ಚು ವುದನ್ನು ತಡೆಯಲು ಸರಕಾರ ಮುಂದಾಗ ‌ಬೇಕಾಗಿದೆ. ಇಲ್ಲದಿದ್ದಲ್ಲಿ ಇನ್ನಷ್ಟು ನೀರಿನ ಕೊರತೆಯನ್ನು ಎದುರಿಸಬೇಕಾದೀತು.

Advertisement

Udayavani is now on Telegram. Click here to join our channel and stay updated with the latest news.

Next