ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತಮ್ಮ ನಾಲ್ಕನೇ ಬಜೆಟ್ ಮಂಡಿಸಿದ್ದಾರೆ. 2022-23ನೇ ಸಾಲಿನ ಕೇಂದ್ರ ಅಯವ್ಯಯ ಪತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
‘ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಿಲ್ಲ’ ಎನ್ನುವ ನೋವಿನ ಹೊರತು ಇದೊಂದು ಒಳ್ಳೆಯ ಬಜೆಟ್ ಎಂದು ಅನೇಕರು ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ:ಇನ್ನು ಮುಂದೆ ಎಲೆಕ್ಟ್ರಾನಿಕ್ ಚಿಪ್ ಒಳಗೊಂಡ ಇ-ಪಾಸ್ ಪೋರ್ಟ್ ವಿತರಣೆ: ಬಜೆಟ್ ನಲ್ಲಿ ಘೋಷಣೆ
‘ಆದಾಯ ತೆರಿಗೆ ಸ್ಲ್ಯಾಬ್ನಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾರಾದರೂ ಮಧ್ಯಮ ವರ್ಗದವರ ಬಗ್ಗೆಯೂ ಸ್ವಲ್ಪ ಯೋಚಿಸಿ’ ಎಂದು ತರುಣ್ ದೀಪ್ ಎನ್ನುವರು ಕೂ ಮಾಡಿದ್ದಾರೆ.
‘ಬಜೆಟ್ ಬಂತೆಂದರೆ ಅನುಕೂಲ, ವಿನಾಯತಿ ಅಂತ ಎಷ್ಟೊಂದು ನಿರೀಕ್ಷೆ ಇಟ್ಟುಕೊಂಡಿರುತ್ತೇವೆ, ಅನುಕೂಲವಾಗದಿದ್ದರೆ ನಿರಾಸೆ ಅಷ್ಟಿಷ್ಟಲ್ಲ. ತೆರಿಗೆ, ಭ್ರಷ್ಟಾಚಾರ ಇಲ್ಲದಿದ್ದರೆ ಭಾರತದಲ್ಲಿ ಗರಿಷ್ಠ ಅಭಿವೃದ್ಧಿಯಾಗುತ್ತಿತ್ತು. ಯಾರ ಮೇಲೂ ತೆರಿಗೆ ಹೊರೆಯಾಗುತ್ತಿರಲಿಲ್ಲ.ಈ ಬಜೆಟ್ ಅನ್ನು ನಾನು ವೈಯಕ್ತಿಕವಾಗಿ ಪ್ರಶಂಸಿಸುತ್ತೇನೆ’ ಎಂದು ಮಹೇಂದ್ರನಾಥ್ ಎನ್ನುವವರು ಹೇಳಿದ್ದಾರೆ.
ಇದನ್ನೂ ಓದಿ: ಬಜೆಟ್ 2022-23 : 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್ಗಳು
‘ಈ ಬಜೆಟ್ ಶ್ರೀಮಂತರು, ಕೈಗಾರಿಕೆಗಳು ಮತ್ತು ಬಡವರಿಗೆ ಒಳ್ಳೆಯದು ಆದರೆ ಮಧ್ಯಮ ವರ್ಗದ ಜನರಿಗೆ ಏನೂ ಇಲ್ಲ’ ಎಂದು ರವಿ ಎನ್ನುವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಡಿಜಿಟಲ್ ಶಿಕ್ಷಣ ಕ್ರಾಂತಿ: ಏನಿದು ‘ಒನ್ ಕ್ಲಾಸ್- ಒನ್ ಟಿವಿ ಚಾನೆಲ್’ ಯೋಜನೆ
‘ಕೇಂದ್ರ ಬಜೆಟ್ ನಲ್ಲಿ ಕಾವೇರಿ ಪೆನ್ನಾರ್ ನದಿ ಜೋಡಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಗೋದಾವರಿ-ಕೃಷ್ಣ, ಕೃಷ್ಣ-ಪೆನ್ನಾರ್, ಪೆನ್ನಾರ್-ಕಾವೇರಿ ನದಿ ಜೋಡಣೆಗೆ ಅನುಮತಿ ನೀಡಲಾಗಿದೆ’ ಯಲಗೂರ್ ಕುಲಕರ್ಣಿ ಎಂದು ಹೇಳಿದ್ದಾರೆ.
ಮಧ್ಯಮ ವರ್ಗದ ತೆರಿಗೆದಾರರಿಗೆ ಒಂದು ಉಪಯೋಗವಿಲ್ಲದ ಅಂಶವಾಗಿದ್ದು, ಕನಿಷ್ಠ ನಿರ್ಮಲಾ ಸೀತಾರಾಮನ್ ಅವರು ಸ್ಟ್ಯಾಂಡರ್ಡ್ ಕಡಿತವನ್ನು ಪ್ರಸ್ತುತ ₹50000 ರಿಂದ ₹100000 ಕ್ಕೆ ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿಟ್ಟು ಈ 2 ವರ್ಷಗಳಲ್ಲಿ ವಿದ್ಯುಚ್ಛಕ್ತಿ ಮತ್ತು ಮನೆಯ ವೆಚ್ಚಗಳಿಗೆ ಸಂಬಂಧಿಸಿದ ವೆಚ್ಚಗಳು ದುಪ್ಪಟ್ಟಾಗಿದೆ ಎಂದು ಮಧುಕುಮಾರ್ ಹೇಳಿದ್ದಾರೆ.