Advertisement
ಈ ಮೂವರೂ ಸಾಧಕರು ಸಹಕಾರ ಕ್ಷೇತ್ರದ ಮೂಲಕ ಜಿಲ್ಲೆಗೆ ಹೆಸರು ತಂದಿದ್ದಾರೆ. ಈ ಸಹಕಾರಿ ರತ್ನರು ಜಿಲ್ಲೆಯ ಹೆಮ್ಮರಗಳಿದ್ದಂತೆ. ಇವರಿಂದ ಇನ್ನಷ್ಟು ಸಮಾಜಸೇವೆ ಸಾರ್ವಜನಿಕರಿಗೆ ದೊರಕು ವಂತಾಗಲೆಂದು ಕಾರ್ಯಕ್ರಮ ಉದ್ಘಾಟಿಸಿದ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾರೈಸಿದರು. ಸಾಧನೆಗೆ ಲಿಂಗಭೇದ, ವಯೋಭೇದವಿಲ್ಲ. ತಾವೂ ಇಂತಹ ಮಹತ್ಕಾರ್ಯಗಳನ್ನು ಸಾಧಿ ಸಲು ಕಿರಿಯ ತಲೆಮಾರಿನವರಿಗೆ ಪ್ರೇರಣೆ ಸಿಗುವಂತಾಗಬೇಕೆಂದು ಸಾಧಕರನ್ನು ಸಮ್ಮಾನಿ ಸುವ ಪರಂಪರೆ ಬೆಳೆದುಬಂದಿದೆ. ಇವರಿಂದ ಪ್ರೇರಣೆ ಕಿರಿಯರು ಪಡೆದು ಸಮಾಜ ಕಟ್ಟುವ ಕೆಲಸಗಳಾಗಲಿ ಎಂದು ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶುಭ ಕೋರಿದರು.
ನಿಸ್ವಾರ್ಥದಿಂದ ಸಾಧನೆ ಮಾಡಿದರೆ ಸಮಾಜ ಗೌರವಿಸುತ್ತದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿ ಎಂದು ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.ಶಾಸಕ ಕೆ. ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ. ಶಂಕರ್, ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ ಶುಭ ಕೋರಿದರು. ಅಭಿನಂದನೆಗೆ ಸಮ್ಮಾನಿತರು ಕೃತಜ್ಞತೆ ಸಲ್ಲಿಸಿದರು. ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಪದಾಧಿಕಾರಿಗಳಾದ ವಿ.ಜಿ. ಶೆಟ್ಟಿ, ವಸಂತಿ ರಾವ್ ಕೊರಡ್ಕಲ್, ಟಿ.ಜಿ. ಹೆಗ್ಡೆ, ರಂಗನಾಥ ಸಾಮಗ ಉಪಸ್ಥಿತರಿದ್ದರು. ಸಾರ್ವಜನಿಕ ಅಭಿನಂದನ ಸಮಿತಿ ಕಾರ್ಯದರ್ಶಿ ಬಿ.ವಿ. ಲಕ್ಷ್ಮೀನಾರಾಯಣ ಸ್ವಾಗತಿಸಿ, ಜಯಪ್ರಕಾಶ ಕೆದ್ಲಾಯ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು.