Advertisement

ಕ್ವಾಡ್ರಿಸೈಕಲ್ ಗಳಿಗೆ ಬಿ.ಎಸ್.VI ಮಟ್ಟದ ಮಾಲಿನ್ಯ ತಪಾಸಣೆ: ಸಾರ್ವಜನಿಕ ಅಭಿಪ್ರಾಯ ಆಹ್ವಾನ

10:16 AM Dec 28, 2019 | Hari Prasad |

ನವದೆಹಲಿ: ದೇಶಾದ್ಯಂತ ಮುಂದಿನ ವರ್ಷದ ಎಪ್ರಿಲ್ 01ರಿಂದ ವಾಹನಗಳಿಗೆ ಬಿ.ಎಸ್.VI ಸ್ಟೇಜ್ ಅನ್ವಯಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಕ್ವಾಡ್ರಿ ಸೈಕಲ್ ವಾಹನಗಳಿಗೆ (ನಾಲ್ಕು ಚಕ್ರವನ್ನು ಹೊಂದಿರುವ ಆಟೋ ರಿಕ್ಷಾ ಮಾದರಿಯ ವಾಹನ) ಈ ನೂತನ ಬಿ.ಎಸ್.VI ತಪಾಸಣಾ ಮಟ್ಟವನ್ನು ಅಳವಡಿಸಬೇಕೇ ಬೇಡವೇ ಎಂಬುದರ ಕುರಿತಾಗಿ ರಸ್ತೆ ಸಂಚಾರಿ ಸಚಿವಾಲಯವು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ.

Advertisement

ಸದ್ಯಕ್ಕೆ ಈ ಕ್ವಾಡ್ರಿ ಸೈಕಲ್ ವಾಹನಗಳಿಗೆ ಮೋಟಾರು ವಾಹನಗಳ ಕಾಯ್ದೆ 115ರಡಿಯಲ್ಲಿ ಉಪ-ಕಾಯ್ದೆ 17ಎ ಪ್ರಕಾರ ಭಾರತ್ ಸ್ಟೇಜ್ IV ಅನ್ವಯವಾಗುತ್ತಿದೆ. ಈ ಕಾಯ್ದೆಗೆ ತಿದ್ದುಪಡಿ ತಂದು 17ಬಿ ಕಾನೂನನ್ನು ಅಳವಡಿಸಲು ಸಚಿವಾಲಯವು ಚಿಂತನೆ ನಡೆಸುತ್ತಿದೆ. ಇದೀಗ ಸರಕಾರದ ಮುಂದಿರುವ ಪ್ರಸ್ತಾವಿತ ಮಾಲಿನ್ಯ ನಿಯಮಗಳು ಯುರೋಪಿಯನ್ ನಿಯಮಗಳ ಮಾದರಿಯದ್ದಾಗಿದೆ.

ಈ ಕುರಿತಾಗಿ ಸಾರ್ವಜನಿಕರ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆದುಕೊಳ್ಳಲು ಡಿಸೆಂಬರ್ 13ರಂದು ಗಜೆಟ್ ಪ್ರಕಟಣೆಯನ್ನು ಹೊರಡಿಸಲಾಗಿದ್ದು ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಜಂಟಿ ಕಾರ್ಯದರ್ಶಿಗಳು (ಸಂಚಾರಿ), ರಸ್ತೆ ಸಂಚಾರ ಮತ್ತು ಹೆದ್ದಾರಿ ಸಚಿವಾಲಯ, ಸಂಚಾರಿ ಭವನ, ಪಾರ್ಲಿಮೆಂಟ್ ರಸ್ತೆ, ನವದೆಹಲಿ – 110001 ಇವರಿಗೆ 30 ದಿನಗಳೊಳಗಾಗಿ ಕಳುಹಿಸಿಕೊಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next