ಪಬ್ಜಿ(PUBG) ಮೊಬೈಲ್ ಇಂಡಿಯಾ ತಂಡವು ಆಟದ(ಗೇಮ್) ಭಾರತೀಯ ಆವೃತ್ತಿಯನ್ನು ದೇಶಕ್ಕೆ ತರುವತ್ತ ಗಮನ ಹರಿಸಿದೆ ಎಂದು ಕ್ರಾಫ್ಟನ್ ಪ್ರತಿನಿಧಿ ಹೇಳಿದ್ದಾರೆ.
ವರದಿಯ ಪ್ರಕಾರ, ಹೊಸ ಆವೃತ್ತಿಯ ಆಟವನ್ನು ಮತ್ತು ಕ್ರಮವಾಗಿ ಗೂಗಲ್ ಪ್ಲೇ ಮತ್ತು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗಾಗಿ ಆಪ್ ಸ್ಟೋರ್ ನಲ್ಲಿ ಪೂರ್ವ ನೋಂದಣಿಗೆ ಸಿದ್ಧವಾಗಿದೆ ಎಂದು ಕ್ರಾಫ್ಟ್ನ್ ಮಾಹಿತಿ ನೀಡಿದೆ.
ಓದಿ : ಅಮೇರಿಕಾದ ಮೇಲೆ ಭಾರತೀಯ ಅಮೇರಿಕನ್ನರು ಹಿಡಿತ ಸಾಧಿಸುತ್ತಿದ್ದಾರೆ : ಬೈಡನ್
ಚೀನಾದ ಕಂಪನಿ ಟೆನ್ಸೆಂಟ್ ನೊಂದಿಗಿನ ಸಂಬಂಧದಿಂದಾಗಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪಬ್ಜಿ ಮೊಬೈಲ್ ನನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು ಮತ್ತು ಅದನ್ನು ಮರಳಿ ತರಲು ಹಲವಾರು ಪ್ರಯತ್ನಗಳನ್ನು ಕೂಡ ಕಂಪೆನಿ ಮಾಡಿತ್ತು. ನಿಷೇಧದ ನಂತರ, ಪಬ್ಜಿ ಮೊಬೈಲ್‌ನ ಪ್ರಕಾಶನ ಮತ್ತು ವಿತರಣಾ ಹಕ್ಕುಗಳನ್ನು ಕೊರಿಯಾದ ಕ್ರಾಫ್ಟನ್ ಸ್ವಾಧೀನಪಡಿಸಿಕೊಂಡಿದೆ.
ಏತನ್ಮಧ್ಯೆ, ಭಾರತದಲ್ಲಿ ಪಬ್ಜಿಗಾಗಿ ತಮ್ಮ ಯೋಜನೆಯ ಕುರಿತು ಸರ್ಕಾರದ ನಿರ್ಧಾರಕ್ಕಾಗಿ ಕಂಪೆನಿ ಕಾಯುತ್ತಿದೆ ಎಂದು ಕ್ರಾಫ್ಟನ್ ಸಂವಹನ ಕಾರ್ಯನಿರ್ವಾಹಕ ಹೇಳಿದ್ದಾರೆ ಎಂದು ಸ್ಪೋರ್ಟ್ಸ್ ಕೀಡಾ ವರದಿ ಮಾಡಿದೆ.
” ಪಬ್ಜಿಯ ನಮ್ಮ ಮುಂದಿನ ಯೋಜನೆಗೆ ಭಾರತ ಸರ್ಕಾರದ ಪರಿಗಣನೆ ಮತ್ತು ನಿರ್ಧಾರಕ್ಕಾಗಿ ನಾವು ಕಾಯುತ್ತಿದ್ದೇವೆ” ಎಂದು ಕ್ರಾಫ್ಟನ್ ಸಂವಹನ ಪ್ರತಿನಿಧಿ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಓದಿ : ಅಮೇರಿಕಾದ ಮೇಲೆ ಭಾರತೀಯ ಅಮೇರಿಕನ್ನರು ಹಿಡಿತ ಸಾಧಿಸುತ್ತಿದ್ದಾರೆ : ಬೈಡನ್