Advertisement

Pub-G ಹೋಯ್ತು FAU-G ಬಂತು; ಏನಿದು ಅಕ್ಷಯ್ ಕುಮಾರ್ ಅನೌನ್ಸ್ ಮಾಡಿದ ಹೊಸ ಸ್ವದೇಶಿ ಗೇಮ್?

06:24 PM Sep 04, 2020 | Mithun PG |

ಮುಂಬೈ: ಪಬ್ ಜಿ ಬ್ಯಾನ್ ಆದ ಬೆನ್ನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ FAU-G ಎಂಬ ಮಲ್ಟಿಪ್ಲೇಯರ್ ಗೇಮ್ ಒಂದನ್ನು ಪರಿಚಯಿಸಿದ್ದಾರೆ. ಮಾತ್ರವಲ್ಲದೆ ಈ ಅಪ್ಲಿಕೇಶನ್ ಪ್ರಧಾನಿ ಮೋದಿಯವರ ಆತ್ಮನಿರ್ಭರ ಯೋಜನೆಗೆ ಬೆಂಬಲ ನೀಡುತ್ತದೆ ಎಂದಿದ್ದಾರೆ.

Advertisement

ಈ ಅಪ್ಲಿಕೇಷನ್ ಶೀಘ್ರದಲ್ಲಿ ಪ್ಲೇಸ್ಟೋರ್ ಗಳಲ್ಲಿ ಲಭ್ಯವಿರಲಿದ್ದು, ಸೈನಿಕರ ತ್ಯಾಗ ಬಲಿದಾನಗಳ ಕುರಿತು ಈ ಆ್ಯಪ್ ನಲ್ಲಿ ತಿಳಿಸಲಾಗಿದೆ. ಮಾತ್ರವಲ್ಲದೆ ಈ ಗೇಮಿಂಗ್ ಆ್ಯಪ್ ನಿಂದ ಬರುವ 20% ಆದಾಯವನ್ನು ಭಾರತ್ ಕೀ ವೀರ್ ಟ್ರಸ್ಟ್ ಗೆ ದೇಣಿಗೆಯಾಗಿ ನೀಡಲಾಗುವುದು ಎಂದು ಅಕ್ಷಯ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಇನ್ ಸ್ಟಾಗ್ರಾಂನಲ್ಲಿ ಮಾಹಿತಿ ನಿಡಿದ ಅಕ್ಷಯ್, ಪ್ರಧಾನಿ ಮೋದಿಯವರ ಆತ್ಮನಿರ್ಭರ ಯೋಜನೆಯೊಂದಿಗೆ ಕೈಜೋಡಿಸುತ್ತಾ, ಈ ಗೇಮಿಂಗ್ ಆ್ಯಪ್ ಅಭಿವೃದ್ದಿಪಡಿಸಲಾಗಿದೆ. FAU-G  ಎಂದರೇ Fearless and United-Guards. ಇದರಲ್ಲಿ ಮನೋರಂಜನೆ ಮಾತ್ರವಲ್ಲದೆ ಆಟಗಾರರಿಗೆ ಸೈನಿಕರ ತ್ಯಾಗ ಬಲಿದಾನಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು. ಈ ಗೇಮ್ ನಿಂದ ಬರುವ 20% ಆದಾಯವನ್ನು #Bharatkeveer ಟ್ರಸ್ಟ್ ಗೆ ನೀಡಲಾಗುವುದು. ಇದು ನನ್ನ ಮೊದಲ ಗೇಮಿಂಗ್ ಉದ್ಯಮವಾಗಿದೆ ಎಂದಿದ್ದಾರೆ.

FAU-G   ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ಹೊರಬೀಳಬೇಕಾಗಿದೆ. ಕೇಂದ್ರ ಸರ್ಕಾರ 118 ಆ್ಯಪ್ ಗಳನ್ನು ನಿಷೇಧ ಮಾಡಿದ ಬೆನ್ನಲ್ಲೇ FAU-G ಪ್ರಕಟಣೆ ಬಂದಿದ್ದು ಕುತೂಹಲ ಮೂಡಿಸಿದೆ. ಈ ಬಗ್ಗೆ ನೆಟ್ಟಿಗರು ಕೂಡ  ಉತ್ಸಾಹ ವ್ಯಕ್ತಪಡಿಸಿದ್ದು ಪಬ್ ಜಿ ಗೆ FAU-G ಪರ್ಯಾಯ ಆ್ಯಪ್ ಎಂದೇ ಚರ್ಚಿಸುತ್ತಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next