ಮುಂದಿನ ವಾರದಲ್ಲಿ PUBG ಮೊಬೈಲ್ 2 ಬಿಡುಗಡೆಯಾಗಬಹುದು ಎಂದು ಟಿಪ್ ಸ್ಟರ್ ಹೇಳಿಕೊಂಡಿದೆ. ಈ ಗೇಮ್ ನ ಚೈನೀಸ್ ಡೆವಲಪರ್ ಮೂಲದ ಕಾರಣದಿಂದಾಗಿ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪಬ್ಜಿ ಮೊಬೈಲ್ ಅನ್ನು ಭಾರತ ಸರ್ಕಾರವು 2020 ರ ಸೆಪ್ಟೆಂಬರ್ ನಲ್ಲಿ ಭಾರತದಲ್ಲಿ ನಿಷೇಧಿಸಿತ್ತು.
PUBG ಮೊಬೈಲ್ 2 ಅನ್ನು ದಕ್ಷಿಣ ಕೊರಿಯಾದ ಕಂಪನಿ ಕ್ರಾಫ್ಟನ್ ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ, ಇದು ಚೀನಾದ ಕಂಪನಿ ಟೆನ್ಸೆಂಟ್‌ನಿಂದ ಭಾರತದಲ್ಲಿ ಗೇಮ್ ನ ಪ್ರಕಟಣೆ ಕರ್ತವ್ಯಗಳನ್ನು ವಹಿಸಿಕೊಂಡಿದೆ.
ಪ್ಲೇಯರ್ ಐಜಿಎನ್ (ಐಜಿಎನ್‌ಗೆ ಸಂಯೋಜಿತವಾಗಿಲ್ಲ), ಟಿಪ್ ಸ್ಟರ್ ಮುಂದಿನ ವಾರದಲ್ಲಿ ಪಬ್ಜಿ ಮೊಬೈಲ್ 2 ಬಿಡುಗಡೆಯಾಗಬಹುದು ಎಂದು ಟ್ವೀಟ್ ಮಾಡಿದೆ.
ಓದಿ : ನಂದಿ ಗಿರಿಧಾಮ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿ: ಸಚಿವ ಡಾ.ಕೆ.ಸುಧಾಕರ್
Related Articles
ಡಿಲೀಟ್ ಮಾಡಲಾಗಿದ್ದ ವೀಬೊ ಪೋಸ್ಟ್ ಅನ್ನು ಉಲ್ಲೇಖಿಸಿ ಟಿಪ್ ಸ್ಟರ್, ಆಟವನ್ನು 2051 ರ ಟೆಕ್ನಾಲಾಜಿಗೆ ಹೊಂದಿಸಲಾಗುವುದು ಮತ್ತು ಭವಿಷ್ಯದ ಶಸ್ತ್ರಾಸ್ತ್ರಗಳು, ಗ್ಯಾಜೆಟ್ ಗಳು ಮತ್ತು ಹೊಸ ನಕ್ಷೆಯನ್ನು ತರುತ್ತದೆ ಎಂದು ಹಂಚಿಕೊಂಡಿದೆ. ಇದು ಆಂಡ್ರಾಯ್ಡ್ ಮತ್ತು ಐ ಒ ಎಸ್ ನಲ್ಲಿ ಬಿಡುಗಡೆಯಾಗಲಿದೆ. ಮುಂದಿನ ವಾರ ನಡೆಯಲಿರುವ ಪಬ್ಜಿ ಗ್ಲೋಬಲ್ ಇನ್ವಿಟೇಶನಲ್ ಎಸ್ 2021 ಪಂದ್ಯಾವಳಿಯಲ್ಲಿ ಆಟವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಕ್ರಾಫ್ಟನ್ ಪ್ರಕಟಣೆ ನೀಡುವ ನಿರೀಕ್ಷೆಯಿದೆ. ಟಿಪ್ ಸ್ಟರ್ ಜನವರಿಯಲ್ಲಿ ಕೊರಿಯಾದ ಪ್ರಕಟಣೆಯೊಂದರ ವರದಿಯನ್ನು ಹಂಚಿಕೊಂಡಿದ್ದು, ಅದು PUBG 2 (PC ಮತ್ತು ಕನ್ಸೋಲ್ ಗಳು) ಮತ್ತು PUBG Mobile 2 ನ ಅಭಿವೃದ್ಧಿಯನ್ನು ದೃಢಪಡಿಸಿದೆ ಎಂದು ಉಲ್ಲೇಖಿಸಿದೆ.
ಸೆಪ್ಟೆಂಬರ್ 2020 ರಲ್ಲಿ 117 ಚೀನಿ ಅಪ್ಲಿಕೇಶನ್ ಗಳೊಂದಿಗೆ ಭಾರತದಲ್ಲಿ ಪಬ್ಜಿ ಮೊಬೈಲ್ ಅನ್ನು ನಿಷೇಧಿಸಲಾಗಿತ್ತು ಮತ್ತು ನಂತರ ಅದನ್ನು ಗೂಗಲ್ ಪ್ಲೇ ಮತ್ತು ಆ್ಯಪ್ ಸ್ಟೋರ್ ನಿಂದ ತೆಗೆದುಹಾಕಲಾಗಿತ್ತು. ಚೀನಾದ ಕಂಪನಿ ಟೆನ್ಸೆಂಟ್‌ನ ಒಳಗೊಳ್ಳುವಿಕೆಯಿಂದಾಗಿ, ಗೌಪ್ಯತೆ ಮತ್ತು ಸುರಕ್ಷತೆಯ ಆತಂಕಗಳು ಗೇಮ್ ಮತ್ತು ಇತರ ಅಪ್ಲಿಕೇಶನ್ ಗಳನ್ನು ಭಾರತದಲ್ಲಿ ನಿಷೇಧಿಸಲು ಕಾರಣವಾಯಿತು.
ಅಂದಿನಿಂದ, ಪಬ್ಜಿ ಕಾರ್ಪೊರೇಶನ್ ನ ಅಂಗಸಂಸ್ಥೆಯಾದ ಕ್ರಾಫ್ಟನ್ ಪಬ್ಜಿಯನ್ನು ಭಾರತಕ್ಕೆ ಮರಳಿ ತರಲು ಪ್ರಯತ್ನಿಸುತ್ತಿದೆ. ಕಳೆದ ವರ್ಷ ನವೆಂಬರ್‌ನಲ್ಲಿ, ಕಂಪನಿಯು ಪಬ್ಜಿ ಮೊಬೈಲ್ ಇಂಡಿಯಾ “ಶೀಘ್ರದಲ್ಲೇ ಬರಲಿದೆ” ಎಂದು ಘೋಷಿಸಿತ್ತಾದರೂ , ಇನ್ನೂ ಬಿಡುಗಡೆಯಾಗಿಲ್ಲ.
ಭಾರತದಲ್ಲಿ ವದಂತಿಗಳಲ್ಲಿರುವ PUBG ಮೊಬೈಲ್ 2 ರ ಭವಿಷ್ಯವು ಅನಿಶ್ಚಿತವಾಗಿದ್ದರೂ, ಅದರ ಬಿಡುಗಡೆಯ ಕುರಿತಾದ ಸುದ್ದಿಗಳು ದೇಶದ ಪಬ್ಜಿ ಗೇಮ್ ನ ಅಭಿಮಾನಿಗಳಿಗೆ ಹಾಗೂ ಅದರಲ್ಲೂ ವಿಶೇಷವಾಗಿ ಭಾರತೀಯ ಆಕ್ಷನ್ ಗೇಮ್ ಗೂಗಲ್ ಪ್ಲೇನಲ್ಲಿ FAU-G ಯನ್ನು ಒಪ್ಪಿಕೊಳ್ಳದಿರುವವರಿಗೆ ಈ ಸುದ್ದಿ ಸಂತಸ ಉಂಟು ಮಾಡಬಹುದು.
ಓದಿ : ಪೆಟ್ರೋಲ್-ಡೀಸೆಲ್ ಬೆಲೆ ನಿಯಂತ್ರಣ ಕೇಂದ್ರ ಸರ್ಕಾರದ ಕೈಯಲ್ಲಿಲ್ಲ: ಅಶ್ವಥ್ ನಾರಾಯಣ