Advertisement

ಪಿಯುಸಿ ‌ಫಲಿತಾಂಶದಲ್ಲಿ‌ ಅನುತ್ತೀರ್ಣ:ಮನನೊಂದ ವಿದ್ಯಾರ್ಥಿನಿ ನೇಣಿಗೆ ಶರಣು

09:33 PM Jul 14, 2020 | sudhir |

ಚಿಕ್ಕಬಳ್ಳಾಪುರ: ಮಂಗಳವಾರ ಪ್ರಕಟಗೊಂಡ ದ್ವೀತಿಯ ಪಿಯುಸಿ ಫಲಿತಾಂಶದಲ್ಲಿ ಅನುತ್ತೀರ್ಣಗೊಂಡ‌ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯೊಬ್ಬರು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ‌ಜಿಲ್ಲೆಯಲ್ಲಿ ನಡೆದಿದೆ.

Advertisement

ಜಿಲ್ಲೆಯ‌ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಏನಿಗದಲೆಯ ಶ್ಬೇತ‌(18) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ‌ ವಿದ್ಯಾರ್ಥಿನಿ.

ಬೆಂಗಳೂರು ಗ್ರಾಮಾಂತರ‌ ಜಿಲ್ಲೆಯ ಹೊಸಕೋಟೆ ತಾಲೂಕಿನ ಖಾಸಗಿ ಕಾಲೇಜೊಂದರಲ್ಲಿ ದ್ವೀತಿಯ ಪಿಯುಸಿ ಓದಿ ಪರೀಕ್ಷೆ ಬರೆದಿದ್ದ‌ ಶ್ವೇತ ಫಲಿತಾಂಶಕ್ಕೆ ಎದುರು ನೋಡುತ್ತಿದ್ದರು.

ಮಂಗಳವಾರ ಫಲಿತಾಂಶದಲ್ಲಿ ಅನುತ್ತೀರ್ಣವಾದ ಹಿನ್ನೆಲೆಯಲ್ಲಿ ‌ಸ್ವಗ್ರಾಮ ಏನಿಗದಲೆಯ ಮನೆಯಲ್ಲಿ ಏನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಈ ಕುರಿತು‌ ವಿಷಯ ತಿಳಿದ‌ ಕೂಡಲೇ ಕೆಂಚಾರ್ಲಹಳ್ಳಿ ಪೊಲೀಸರು ‌ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next