Advertisement

50 ಸಾವಿರ ಮಂದಿಗೆ ಮಾನಸಿಕ ಚಿಕಿತ್ಸೆ

03:04 AM Apr 29, 2020 | Sriram |

ಬೆಂಗಳೂರು: ಕೋವಿಡ್-19 ವೈರಸ್‌ ಸೋಂಕು ಪ್ರಕರಣಗಳು ಬೆಳಕಿಗೆ ಬಂದ ಆರಂಭದಿಂದ ಅಂದರೆ ಮಾ.11ರಿಂದ ಎ.26ರವರೆಗೆ ಐಸೊಲೇಟೆಡ್‌, ಕ್ವಾರಂಟೈನ್‌ ಮತ್ತು ಕೋವಿಡ್‌-19 ಸೋಂಕಿತರ ಸಹಿತ ಒಟ್ಟು 51,266 ಮಂದಿಗೆ ಮಾನಸಿಕ ಆರೋಗ್ಯ ಆರೈಕೆ ಮತ್ತು ಚಿಕಿತ್ಸೆ ನೀಡಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

Advertisement

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠಕ್ಕೆ ಸರಕಾರದ ಪರ ವಕೀಲರು ನೀಡಿದ ಲಿಖೀತ ಹೇಳಿಕೆಯಲ್ಲಿ ಈ ಮಾಹಿತಿ ನೀಡಲಾಗಿದೆ. ಎ. 2ರಿಂದ 26ರ ವರೆಗೆ ಒಟ್ಟು 20,918 ವಲಸೆ ಕಾರ್ಮಿಕರ ಆಪ್ತ ಸಮಾಲೋಚನೆ ನಡೆಸಲಾಗಿದೆ. ಇದಲ್ಲದೆ ಆರೋಗ್ಯ ಸಹಾಯವಾಣಿ 104 ಮೂಲಕವೂ ವಲಸೆ ಕಾರ್ಮಿಕರಿಗೆ ಆಪ್ತ ಸಮಾಲೋಚನೆ ಸೌಲಭ್ಯ ಒದಗಿಸಲಾಗಿದೆ. ಆಯಾ ಜಿಲ್ಲಾ ಮನರೋಗ ತಜ್ಞರ ದೂರವಾಣಿ ಸಂಖ್ಯೆ ಒದಗಿಸಲಾಗಿದೆ ಎಂದು ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next