Advertisement

8 ಅತ್ಯಾಚಾರ ಪ್ರಕರಣಗಳ ಆರೋಪಿ ಸೈಕೋ ದೊರೆ ಅರೆಸ್ಟ್‌ 

10:01 AM May 29, 2018 | Team Udayavani |

ಬೆಂಗಳೂರು: 8 ಕ್ಕೂ ಹೆಚ್ಚು ಅತ್ಯಾಚಾರಗಳ ಆರೋಪಿ ತಮಿಳುನಾಡು ಮೂಲದ ಸೈಕೋ ದೊರೆಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವೀಯಾಗಿದ್ದಾರೆ. 

Advertisement

ಬೆಂಗಳೂರು ಹೊರವಲಯದ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ದೊರೆಯನ್ನು ವಶಕ್ಕೆ  ಪಡೆದಿರುವ ಬಗ್ಗೆ ವರದಿಯಾಗಿದೆ. 

ಪೀಣ್ಯ, ಯಶವಂತಪುರ ಸೇರಿದಂತೆ ಹಲವೆಡೆ ಮಹಿಳೆಯರ ಮೇಲೆ ಬಂಧಿತ ದೊರೆ ವಿಕೃತಿ ಮೆರೆದಿದ್ದ. 

ಇನ್ಸ್‌ಪೆಕ್ಟರ್‌ ಸತ್ಯನಾರಾಯಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next