Advertisement

ಗೆರೆ ದಾಟಬೇಡಿ, ಜೈಲು ಪಾಲಾಗಬೇಡಿ

10:50 PM Apr 06, 2020 | Sriram |

ಮುಂಬಯಿ: ಕೋವಿಡ್ 19ದಂತಹ ಮಹಾಮಾರಿ ಇಡೀ ವಿಶ್ವಕ್ಕೇ ಆವರಿಸಿಕೊಂಡು ನುಂಗುತ್ತಿದ್ದರೂ, ಜನರ ಹಾಸ್ಯಪ್ರಜ್ಞೆಗೇನು ಕೊರತೆಯಾಗಿಲ್ಲ. ಉಳಿದಿದ್ದೆಲ್ಲ ಮರೆತು ಪರಸ್ಪರ ಕಾಲೆಳೆಯುವುದನ್ನೇ ಕೆಲವರು ಕೆಲಸ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಈಗ ಅದೇ ಕೆಲಸ. ಇಲ್ಲಿ ಭಾರತ-ಪಾಕಿಸ್ಥಾನದ ವಿಷಯ ಬಂದರಂತೂ ಚರ್ಚೆಗಳೇ ಯುದ್ಧದಂತೆ ನಡೆದುಹೋಗುತ್ತವೆ. ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ.

Advertisement

ಪಾಕಿಸ್ಥಾನ ಸೂಪರ್‌ ಲೀಗ್‌ ಟಿ20 ಕ್ರಿಕೆಟ್‌ನಲ್ಲಿ ಇಸ್ಲಾಮಾಬಾದ್‌ ಯುನೈಟೆಡ್‌ ಎಂಬ ತಂಡವೊಂದಿದೆ. ಬಹುಶಃ ಅದಕ್ಕೀಗ ವಿಪರೀತ ಪುರುಸೊತ್ತಿದೆ ಎಂದು ಕಾಣುತ್ತಿದೆ. ಸುಖಾಸುಮ್ಮನೆ ಭಾರತೀಯ ಅಭಿಮಾನಿಗಳನ್ನು ಕೆಣಕುವ ಕೆಲಸ ಮಾಡಿದೆ. ತಾನು ಮಾಡಿರುವ ಟ್ವೀಟ್‌ ಒಂದರಲ್ಲಿ, ಭಾರತೀಯ ವೇಗಿ ಜಸ್‌ಪ್ರೀತ್‌ ಬುಮ್ರಾ 2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ನೋಬಾಲ್‌ ಹಾಕುತ್ತಿರುವ ಚಿತ್ರ ಪೋಸ್ಟ್‌ ಮಾಡಿದೆ. ಗೆರೆ ದಾಟಬೇಡಿ, ಭಾರೀ ಬೆಲೆ ತೆರಬೇಕಾದೀತು ಎಂದು ಬರೆದುಕೊಂಡಿದೆ.

ವಾಸ್ತವವಾಗಿ ಈ ಪಂದ್ಯದ ಆರಂಭದಲ್ಲೇ ಬುಮ್ರಾ, ಪಾಕ್‌ ಬ್ಯಾಟ್ಸ್‌ಮನ್‌ ಫ‌ಖಾರ್‌ ಜಮಾನ್‌ ಅವರನ್ನು ಔಟ್‌ ಮಾಡಿದ್ದರು. ಆದರೆ ಆ ಎಸೆತ ಬುಮ್ರಾ ಗೆರೆ ದಾಟಿದ್ದರಿಂದ ನೋಬಾಲ್‌ ಆಗಿತ್ತು. ಮುಂದೆ ಜಮಾನ್‌ ಶತಕ ಬಾರಿಸಿ, ಪಾಕ್‌ ಗೆಲ್ಲಲು ಕಾರಣವಾಗಿದ್ದರು. ಇದನ್ನು ಈ ಸಂದರ್ಭದಲ್ಲಿ ಪಾಕ್‌ ಫ್ರಾಂಚೈಸಿ ಬಳಸಿಕೊಂಡಿದೆ. ಅದು ಭಾರತೀಯ ಅಭಿಮಾನಿಗಳನ್ನು ಕೆರಳಿಸಿದೆ.

ಪಾಕ್‌ನ ಈ ಅಣಕಕ್ಕೆ ಭಾರತೀಯ ಅಭಿಮಾನಿ ಯೊಬ್ಬರು ಚುರುಕಾದ ಉತ್ತರ ನೀಡಿದ್ದಾರೆ. ಅವರು 2010ರಂದು ಇಂಗ್ಲೆಂಡ್‌ನ‌ಲ್ಲಿ ನಡೆದ ಲಾರ್ಡ್ಸ್‌ ಟೆಸ್ಟ್‌ಪಂದ್ಯದಲ್ಲಿ ಪಾಕ್‌ ವೇಗಿ ಮೊಹಮ್ಮದ್‌ ಆಮಿರ್‌ ನೋಬಾಲ್‌ ಎಸೆದ ಘಟನೆಯ ಚಿತ್ರ ಪೋಸ್ಟ್‌ ಮಾಡಿದ್ದಾರೆ. ಒಳಗೇ ಇರಿ, ಸುರಕ್ಷಿತವಾಗಿರಿ, ಇಲ್ಲವಾದರೆ 5 ವರ್ಷ ಜೈಲುಶಿಕ್ಷೆಯಾದೀತು ಎಂದು ಅಣಕವಾಡಿದ್ದಾರೆ. ಈ ಟೆಸ್ಟ್‌ನಲ್ಲಿ ಸ್ಪಾಟ್‌ಫಿಕ್ಸಿಂಗ್‌ ಮಾಡಿದ ಆರೋಪದಡಿ ಮುಂದೆ ಆಮಿರ್‌ 5 ವರ್ಷ ಜೈಲುಪಾಲಾಗಿದ್ದರು!

Advertisement

Udayavani is now on Telegram. Click here to join our channel and stay updated with the latest news.

Next