Advertisement

ಪಿಎಸ್ಐ ನೇಮಕಾತಿ ಅಕ್ರಮ: ತರಬೇತಿ ಪಿಎಸ್ಐ ಸಿಐಡಿ ವಶಕ್ಕೆ

12:40 PM May 04, 2022 | Team Udayavani |

ಕಲಬುರಗಿ:  545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಪೊಲೀಸ್ ಪೇದೆಗಳು ಭಾಗಿಯಾಗಿರುವ ನಡುವೆ ಈಚೆಗೆ ನೇಮಕಾತಿಯಾಗಿ ತರಬೇತಿ ಪಡೆಯುತ್ತಿದ್ದ ಸಬ್ ಇನ್ಸ್‌ಪೆಕ್ಟರ್‌ರೊಬ್ಬರನ್ನು ಸಿಐಡಿ ವಶಪಡಿಸಿಕೊಂಡಿದೆ.

Advertisement

ಇಲ್ಲಿನ ನಾಗನಹಳ್ಳಿ ಪೊಲಿಸ್ ತರಬೇತಿ ಮಹಾವಿದ್ಯಾಲಯದಲ್ಲಿ ಕೆಸ್ಐಎಸ್ಎಫ್ ಸಬ್ ಇನ್ಸ್‌ಪೇಕ್ಟರ್ ತರಬೇತಿ ಪಡೆಯುತ್ತಿರುವ ಯಶವಂತಗೌಡ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಬೆಂಗಳೂರಿನಲ್ಲಿ ಯಶವಂತಗೌಡ ಪಾಸಾಗಿ ಆಯ್ಕೆಯಾಗಿದ್ದ. ಕಳೆದ 22 ರಂದು ಬೆಂಗಳೂರಿನ ಸಿಐಡಿ ಕಚೇರಿಗೆ ದಾಖಲಾತಿ ಪರಿಶೀಲನೆಗೆ ತೆರಳಿದ್ದ. ದಾಖಲಾತಿ ಪರಿಶೀಲನೆ ಮುಗಿಸಿ ವಾಪಸ್ ತರಬೇತಿ ಕೇಂದ್ರಕ್ಕೆ ವಾಪಸ್ಸಾಗಿದ್ದ. ಸಿಐಡಿ ತಂಡ ಬೆಂಗಳೂರಿನಿಂದ ನಾಗನಹಳ್ಳಿ ಪಿಟಿಸಿ ತರಬೇತಿ ಕೇಂದ್ರಕ್ಕೆ ಆಗಮಿಸಿ ಈತನನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ತೆರಳಿದೆ.

ಇದನ್ನೂ ಓದಿ:ಪಿಎಸ್‌ಐ ಪರೀಕ್ಷೆ ಅಕ್ರಮ: ಸ್ಫೋಟಕ ಅಂಶ ಬಯಲು ಮಾಡಿದ ಹೆಚ್.ಡಿ.ಕುಮಾರಸ್ವಾಮಿ

ಕೈಗಾರಿಕಾ ತರಬೇತಿ ವಿಭಾಗದಲ್ಲಿ ಪಿಎಸ್ಐ ಆಗಿ ಆಯ್ಕೆಯಾಗಿದ್ದ ಯಶವಂತಗೌಡ ಸಿವಿಲ್ ಪಿಎಸ್ಐ ಆಗಬೇಕೆಂದು ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದಾನೆ. ತೀವ್ರ ಶೋಧನಾ ನಡೆಯುತ್ತಿದ್ದು, ಇತರ ಭಾಗದ ಮತ್ತಷ್ಟು ಜನಪ್ರತಿನಿಧಿಗಳ ಹೆಸರು ಸಹ ಕೇಳಿ ಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next