Advertisement

ಪಿಎಸ್‌ಐ ಅಕ್ರಮ ಪರೀಕ್ಷೆ: 11 ಕಡೆ ಇ.ಡಿ. ದಾಳಿ

10:43 PM Nov 10, 2022 | Team Udayavani |

ಬೆಂಗಳೂರು: ಪಿಎಸ್‌ಐ ಅಕ್ರಮ ಪರೀಕ್ಷೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಅಮೃತ್‌ ಪೌಲ್‌, ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್‌ ಹಾಗೂ ಇತರ ಆರೋಪಿಗಳಿಗೆ ಸೇರಿದ ಮನೆ ಹಾಗೂ ಅವರ ಸಂಬಂಧಿಕರ ಮನೆಗಳು ಸಹಿತ 11 ಕಡೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿ ಶೋಧಿಸಿದ್ದಾರೆ.

Advertisement

ಬೆಳಗ್ಗೆ 11 ಗಂಟೆ ಸುಮಾರಿಗೆ ಆಗಮಿಸಿ ಸುಮಾರು 25 ಮಂದಿ  ಅಧಿಕಾರಿಗಳು ತಡರಾತ್ರಿವರೆಗೂ ದಾಳಿ ನಡೆಸಿದರು. ಸಹಕಾರ ನಗರದಲ್ಲಿರುವ ಅಮೃತ್‌ ಪೌಲ್‌ ಮನೆ,  ಚಿಕ್ಕಬಳ್ಳಾಪುರದಲ್ಲಿರುವ ತೋಟದ ಮನೆ, ಆಡುಗೋಡಿ ಪೊಲೀಸ್‌ ಕ್ವಾಟ್ರಸ್‌ನಲ್ಲಿರುವ ಡಿವೈಎಸ್ಪಿ ಶಾಂತಕುಮಾರ್‌ ಮನೆ, ನಾಗರಬಾವಿಯಲ್ಲಿರುವ ನೇಮಕಾತಿ ವಿಭಾಗದ ಸಿಬಂದಿ ಶ್ರೀನಿವಾಸ್‌ ಮನೆ, ಕಾಮಾಕ್ಷಿಪಾಳ್ಯದಲ್ಲಿ ಶ್ರೀಧರ್‌ ಮನೆ, ನಂದಿನಿ ಲೇಔಟ್‌ನ ಹರ್ಷನ ಮನೆ ಹಾಗೂ ಇತರ ಆರೋಪಿಗಳಿಗೆ ಸೇರಿದ ಬಸವೇಶ್ವರನಗರ, ರಾಜಾಜಿನಗರ  ಹಾಗೂ ಇತರೆ ಕಡೆ ದಾಳಿ ನಡೆಸಲಾಗಿದೆ.

ದಾಳಿಯಲ್ಲಿ ಚಿನ್ನಾಭರಣ, ಸಣ್ಣ ಪ್ರಮಾಣದಲ್ಲಿ ನಗದು ಪತ್ತೆಯಾಗಿದೆ. ಜತೆಗೆ ಕೆಲ ದಾಖಲೆಗಳು ಸಿಕ್ಕಿವೆ ಎಂದು ಇ.ಡಿ. ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next