Advertisement

ಪಿಎಸ್‌ಐ ಪರೀಕ್ಷಾ ಅಕ್ರಮ: ಆರೋಪಿ ಕಾರು, ಚಿನ್ನ, ದಾಖಲೆ ವಶ

12:02 AM May 17, 2022 | Team Udayavani |

ಕಲಬುರಗಿ: ಪಿಎಸ್‌ಐ ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ಮಂಜುನಾಥ ಮೇಳಕುಂದಿ ಆಸ್ತಿ ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಂಡಿರುವ ಸಿಐಡಿ ಅಧಿಕಾರಿಗಳು ಸೋಮವಾರ ಮೇಳಕುಂದಿ ಅಕ್ರಮ ನಡೆಸಲು ಬಳಸಿರುವ ಕಾರನ್ನು ಜಪ್ತಿ ಮಾಡಿಕೊಂಡಿದ್ದಾರೆ.

Advertisement

ಇದೇ ವೇಳೆ ಹಲವು ಆರೋಪಿತರ ಮನೆಗಳಲ್ಲಿ ಮತ್ತು ಬ್ಯಾಂಕ್‌ ಲಾಕರ್‌ಗಳನ್ನು ಶೋಧ ಮಾಡಿದಾಗ ಚಿನ್ನ ಮತ್ತು ಜಮೀನು ದಾಖಲೆಗಳು ಪತ್ತೆಯಾಗಿವೆ. ಅಲ್ಲದೆ, ಅಕ್ರಮ ಹಣದಿಂದ ಖರೀದಿ ಮಾಡಿರುವ ಐಷಾರಾಮಿ ವಸ್ತುಗಳು ಕೂಡ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ 2ನೇ ಬಾರಿಗೆ ಸಿಐಡಿ ಅಧಿಕಾರಿಗಳ ವಶದಲ್ಲಿರುವ ಜ್ಞಾನಜ್ಯೋತಿ ಶಾಲೆ ಮುಖ್ಯ ಶಿಕ್ಷಕ ಕಾಶಿನಾಥ, ಎಂಎಸ್‌ಐ ಕಾಲೇಜಿನಲ್ಲಿ ನಡೆದ ಹಗರಣದಲ್ಲಿ ಪಾಲ್ಗೊಂಡಿರುವ ಹಿನ್ನಲೆಯಲ್ಲಿ ಅಲ್ಲಿನ ಅಕ್ರಮದಲ್ಲಿ ಇತರ ಪಾತ್ರದ ಕುರಿತು ವಿಚಾರಣೆ ಮಾಡಿದ್ದಾರೆ. ಕೆಲವು ಸ್ಫೋಟಕ ಮಾಹಿತಿ ನೀಡಿದ್ದು, ಅದರ ಆಧಾರದಲ್ಲಿ ಮಂಗಳವಾರ ಇನ್ನಷ್ಟು ಜನರ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.

ಪಾಟೀಲ್‌, ಹಾಗರಗಿ ವಿರುದ್ಧ ಸಾಕ್ಷ್ಯ ಲಭ್ಯ
ಈ ಎಲ್ಲ ಬೆಳವಣಿಗೆಯ ಮಧ್ಯೆ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ ಮತ್ತು ದಿವ್ಯಾ ಹಾಗರಗಿ ಪರೀಕ್ಷೆಯಲ್ಲಿ ಪಾಸ್‌ ಮಾಡಲು ಅಭ್ಯರ್ಥಿಗಳೊಂದಿಗೆ ಡೀಲ್‌ ಮಾಡಿದ ಕುರಿತು ಸಿಐಡಿ ಅಧಿಕಾರಿಗಳಿಗೆ ಸಾಕ್ಷ್ಯ ಲಭ್ಯವಾಗಿದೆ. ಒಟ್ಟು 9 ಅಭ್ಯರ್ಥಿಗಳ ಮಾಹಿತಿ ಈಗ ಸಿಐಡಿ ಬಳಿ ಇದೆ. ಈ ಮಧ್ಯೆ ಪಿಎಸ್‌ಐ ಪರೀಕ್ಷೆ ಬರೆದು ಹಣ ನೀಡಿ ಪಾಸಾಗಿರುವ ಕೆಲವು ಅಭ್ಯರ್ಥಿಗಳು ಊರು ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next