Advertisement

ಪಿಎಸ್ಐ ಪರೀಕ್ಷೆ ಅಕ್ರಮ : 1974 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

10:45 PM Jul 05, 2022 | Team Udayavani |

ಕಲಬುರಗಿ : 545 ಪಿಎಸ್ಐ ನೇಮಕಾತಿ ಪರಿಚಯ ಅಕ್ರಮಕ್ಕೆ ಸಂಬಂಧಿಸಿದಂತೆ 1974 ಪುಟಗಳ ದೋಷಾರೋಪಣ ಪಟ್ಟಿಯನ್ನು ನ್ಯಾಯಕ್ಕೆ ಸಲ್ಲಿಸಲಾಗಿದೆ .

Advertisement

ನಗರದ ಗೋಕುಲ್ ಬಡಾವಣೆಯಲ್ಲಿರುವ ಬಿಜೆಪಿ ನಾಯಕಿ ದಿವ್ಯ ಹಾಗರಗಿ ಒಡೆತನದ ಜ್ಞಾನಜೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ 34 ಆರೋಪಿಗಳನ್ನು ಒಳಗೊಂಡ ಸುದೀರ್ಘವಾಗಿ ನಡೆದು ಬಂದ ತನಿಖಾ ಹಾದಿಯನ್ನು ಸಾಕ್ಷ್ಯಾ ಧಾರಗಳೊಂದಿಗೆ ಇಲ್ಲಿನ ಮೂರನೇ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಮಂಗಳವಾರ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿದೆ.

ಸಿಐಡಿ ಡಿವೈಎಸ್ಪಿ ಪ್ರಕಾಶ್ ರಾಥೋಡ್ ತನಿಕಾ ಅಧಿಕಾರಿಯಾಗಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.‌ ಬ್ಲೂಟೂತ್ ಬಳಸಿ ಹೇಗೆ ಅಕ್ರಮ ಹೆಸರಾಗಿದೆ ಜೊತೆಗೆ ಯಾರ್ಯಾರು ಅಕ್ರಮದಲ್ಲಿ ತಮ್ಮ ಪಾತ್ರ ನಿರೂಪಿಸಿದ್ದಾರೆ ಹಾಗೂ ಹಣದ ವ್ಯವಾರ ಸೇರಿದಂತೆ ಇತರ ಎಲ್ಲಾ ಆಯಾಮಗಳ ಒಳಗೊಂಡ ಅಂಶಗಳನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.‌

ಕಳೆದ ಏಪ್ರಿಲ್ ತಿಂಗಳಿನ ಮೊದಲ ವಾರದಲ್ಲಿ ಪ್ರಕರಣ ಬಯಲಿಗೆ ಬಂದು ಇಲ್ಲಿನ ಜೋಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next