Advertisement

ಮತ್ತೆ ಪಿಎಸ್ಐ ಪರೀಕ್ಷಾ ಅಕ್ರಮದ ಸದ್ದು; ಬ್ಲೂಟೂತ್ ನಲ್ಲಿ ಉತ್ತರ ಹೇಳಿದ್ದಾತನ ಬಂಧನ

03:06 PM Sep 29, 2022 | Team Udayavani |

ಕಲಬುರಗಿ: ಪಿಎಸ್ ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ತಂಡ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಸಹಚರ, ಹಾಸ್ಟೆಲ್ ವಾರ್ಡನ್ ರಾವುತಪ್ಪ‌ ಬಸವಂತ್ರಾಯ ವಾಲೀಕಾರ (35) ಎಂಬಾತನನ್ನು ಗುರುವಾರ ಬಂಧಿಸಿದೆ.

Advertisement

ನಗರದ ಜ್ಞಾನಜ್ಯೋತಿ ಇಂಗ್ಲಿಷ್ ‌ಮಾಧ್ಯಮ ಶಾಲೆಯ ಪಿಎಸ್ಐ ‌ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ರಾವುತಪ್ಪ ಬ್ಲೂಟೂತ್ ಬಳಸಿ ಉತ್ತರ ಹೇಳುವ ಮೂಲಕ ಅಭ್ಯರ್ಥಿಗಳು ಪಾಸ್ ಆಗಲು ಸಹಕರಿಸಿದ್ದ. ಜೊತೆಗೆ ಆರ್.ಡಿ. ಪಾಟೀಲಗೆ ಗಿರಾಕಿಗಳನ್ನು ಹುಡುಕಿ ತರುತ್ತಿದ್ದ. ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವ ತಜ್ಞರ ತಂಡವನ್ನು ಈತನೇ ಗೊತ್ತು ಮಾಡುತ್ತಿದ್ದ. ಒಮ್ಮೊಮ್ಮೆ ಈತನೇ ಉತ್ತರಗಳನ್ನು ಹೇಳುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ:5.20 ಕೋಟಿ ರೂ. ದಂಡ ಕಟ್ಟಿ: ಪಿಎಫ್‌ಐ ಗೆ ಕೇರಳ ಹೈಕೋರ್ಟ್ ಚಾಟಿ

ಆರ್.ಡಿ. ಪಾಟೀಲ ಸ್ವಗ್ರಾಮ, ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ರಾವುತಪ್ಪ ಪಾಟೀಲ ಜೊತೆಗೆ ಸೇರಿಕೊಂಡು ಅಕ್ರಮ ಮಾಡಿರುವ ಆರೋಪಗಳಿವೆ.

ಇದರೊಂದಿಗೆ ಪ್ರಕರಣದಲ್ಲಿ 53 ಜನರ ಬಂಧನವಾದಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next