Advertisement

ಪಿಎಸ್ಐ ಪರೀಕ್ಷೆ ಅಕ್ರಮ: ಸಿಐಡಿ ಬಲೆಗೆ ಬಿದ್ದ ಕಿಂಗ್ ಪಿನ್ ಆರ್.ಡಿ ಪಾಟೀಲ್

12:50 PM Apr 23, 2022 | Team Udayavani |

ಕಲಬುರಗಿ: ಪಿಎಸ್ಐ ನೇಮಕದ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ನಡೆಸಿದ ಕಿಂಗ್ ‌ಪಿನ್ ಎನ್ನಲಾಗುತ್ತಿರುವ ಅಫಜಲಪುರದ ಅರ್.ಡಿ.ಪಾಟೀಲ್ ನನ್ನು ಸಿಐಡಿ ಪೊಲೀಸರು ಮಹಾರಾಷ್ಟ್ರದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಪ್ರಕರಣ ಹೊರ ಬರುತ್ತಿದ್ದಂತೆ ಆರ್.ಡಿ.ಪಾಟೀಲ್ ತಲೆ ‌ಮರೆಸಿಕೊಂಡಿದ್ದ. ಶೋಧ ಕಾರ್ಯ ನಡೆಸಿದ್ದರೂ ಸಿಕ್ಕಿರಲಿಲ್ಲ. ನಿನ್ನೆಯಷ್ಟೆ ಅವರ ಸಹೋದರ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಹಾಂತೇಶ ಪಾಟೀಲ್ ಎಂಬುವರನ್ನು ಬಂಧಿಸಲಾಗಿತ್ತು.

ಆರ್.ಡಿ.ಪಾಟೀಲ್ ನನ್ನು ಮಹಾರಾಷ್ಟ್ರದಲ್ಲಿ ವಶಕ್ಕೆ ಪಡೆದುಕೊಂಡ ಸಿಐಡಿ ಅಧಿಕಾರಿಗಳು ಆತನನ್ನು ಕಲಬುರಗಿ ಕಡೆಗೆ ಕರೆದುಕೊಂಡು ಬರುತ್ತಿದ್ದಾರೆ.

ಇದನ್ನೂ ಓದಿ:ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ: ಶಾಸಕ ಡಾ.ಜಿ ಪರಮೇಶ್ವರ್

ಆರ್.ಡಿ.ಪಾಟೀಲ್ ಪಿಎಸ್ಐ ಅಲ್ಲದೇ ಇತರ ನೇಮಕಾತಿಗಳಲ್ಲೂ ಬ್ಲೂಟೂತ್ ಬಳಸಿ ಅಕ್ರಮ ನಡೆಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಬಂಧನದ ನಂತರ ಅನೇಕ ಸ್ಫೋಟಕ ಮಾಹಿತಿ ಹೊರ ಬರುವ ಸಾಧ್ಯತೆಗಳಿವೆ.

Advertisement

ದಿವ್ಯ ಬಂಧನ ಯಾವಾಗ?: ಕಳೆದ ಹತ್ತು ದಿನಗಳಿಂದ ಬಿಜೆಪಿ ನಾಯಕಿ ದಿವ್ಯ ಹಾಗರಗಿ ಬಂಧನವಾಗದಿರುವುದು ಸಾರ್ವಜನಿಕರ ಅದರಲ್ಲೂ ಕಾಂಗ್ರೆಸ್ ಆಕ್ರೋಶ ಕ್ಕೆ ಕಾರಣವಾಗಿದೆ. ಜಾಮೀನು ಸಲುವಾಗಿ ಅರ್ಜಿ ಹಾಕುತ್ತಾರೆ ಎಂದಾದರೆ ಪೊಲೀಸ್ ರಿಗೆ ಸಿಗದಿರುವುದು ಹಾಸ್ಯಾಸ್ಪದವಾಗಿದೆ. ಬಂಧನವಾಗದಂತೆ ಬಿಜೆಪಿ ನಾಯಕರು, ಕೆಲ ಸಚಿವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಮತ್ತೊಂದೆಡೆ ಮುಂದೆ ನಡೆಯಬೇಕಿದ್ದ 404 ಪಿಎಸ್ಐ ಹುದ್ದೆಗಳ ನೇಮಕಾತಿಗೂ ಅಕ್ರಮ ವಾಸನ ಕಂಡು ಬಂದಿದೆ. ಮುಂಗಡವಾಗಿ ಪರೀಕ್ಷೆಯ ಕೇಂದ್ರ, ಹಣ ಪಡೆಯುವ ಕುರಿತಾದ ಆಡಿಯೋವನ್ನು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಬಿಡುಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next