ತುಮಕೂರು: ಕಳೆದ 10 ವರ್ಷಗಳಲ್ಲಿ ನಡೆದಿರುವ ಪಿ.ಎಸ್.ಐ ನೇಮಕಾತಿ ಪ್ರಕ್ರಿಯೆಯನ್ನುನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಜನತಾಪಾರ್ಟಿಯ ರಾಜ್ಯಾಧ್ಯಕ್ಷೆ ಬಿ.ಟಿ.ಲಲಿತಾನಾಯಕ್ ರಾಜ್ಯ ಸರ್ಕಾರವನ್ನು ಒತ್ತಾಯಿದರು.
ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿಯನ್ನು ಹಗರಣ ನಡೆದಿರುವುದಕ್ಕೆಹೈಕೋರ್ಟ್ ಪ್ರಕರಣದ ಆರೋಪಿಗಳಿಗೆ ಜಾಮೀನುನಿರಾಕರಿಸಿರುವುದೇ ಸಾಕ್ಷಿಯಾಗಿದೆ ಎಂದರು.
ಅವ್ಯವಹಾರ: ಈ ಹಿಂದಿನ ವರ್ಷಗಳಲ್ಲಿ ನಡೆದಿರುವ ಪೊಲೀಸ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿಯೂ ಅವ್ಯವಹಾರ ನಡೆದಿದೆ ಎಂಬ ಗುಮಾನಿಗಳಿದ್ದು, ಸರ್ಕಾರ ಜನತೆಗೆ ಸತ್ಯ ತಿಳಿಸುವ ನಿಟ್ಟಿನಲ್ಲಿಕಳೆದ 10 ವರ್ಷಗಳ ನೇಮಕಾತಿ ಪ್ರಕ್ರಿಯೆಯನ್ನೇ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.
ಭ್ರಷ್ಟಾಚಾರವೆಂಬುದು ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸೇರಿದಂತೆ ಸರ್ಕಾರದಎಲ್ಲಾ ಅಂಗಗಳಲ್ಲಿಯೂ ತುಂಬಿ ತುಳುಕುತ್ತಿದೆ.ಎಲ್ಲಾ ಪಕ್ಷದವರು ಒಂದಲ್ಲೊಂದು ಹಗರಣದಲ್ಲಿಭಾಗಿಯಾಗಿರುವುದು ಕಂಡುಬರುತ್ತಿದೆ ಎಂದರು.
Related Articles
ಭ್ರಷ್ಟಾಚಾರವೆಂಬ ವಿಷವೃಕ್ಷ: ಪೊಲೀಸ್ ಎಂಬುದುಜನರು ತಪ್ಪು ದಾರಿ ತುಳಿಯದಂತೆ, ಸಮಾಜಘಾತುಕ ಕೆಲಸಗಳನ್ನು ಮಾಡದಂತೆ ತಡೆಯಲುಇರುವ ವ್ಯವಸ್ಥೆ. ಇಂತಹ ವ್ಯವಸ್ಥೆಯನ್ನೇ ಭ್ರಷ್ಟಾಚಾರವೆಂಬ ವಿಷವೃಕ್ಷ ಸುತ್ತಿಕೊಂಡಿರುವಾಗ, ಭ್ರಷ್ಟಾಚಾರದಿಂದ ಪೊಲೀಸ್ ಹುದ್ದೆ ಗಿಟ್ಟಿಸಿಕೊಂಡವರು ಕಾನೂನು ಸುವ್ಯವಸ್ಥೆ ಸರಿದಾರಿಗೆ ತರಲು ಕೆಲಸ ಮಾಡುತ್ತಾರೆಯೇ ಎಂಬ ಪ್ರಶ್ನೆ ನಮ್ಮದು ಎಂದರು.
ಸಮೀಕ್ಷೆಗೆ ಆಗ್ರಹ: ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆಯಿಂದ ಸಾಕಷ್ಟು ಬೆಳೆಹಾನಿ ಸಂಭವಿಸಿ, ಅಪಾರ ಬೆಳೆ ಹಾನಿಯಾಗಿದೆ. ಆದರೆಸರ್ಕಾರ ಇದುವರೆಗೂ ಬೆಳೆ ಹಾನಿ ಸಮೀಕ್ಷೆಗೆಮುಂದಾಗಿಲ್ಲ. ರೈತರು ಅರ್ಜಿ ನೀಡಲು ಹೋದರೆಹಾನಿ ಬಗ್ಗೆ ದಾಖಲೆ ನೀಡಿ ಎಂದು ರೈತರನ್ನೇ ಕೇಳುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಸರ್ಕಾರ ಕೂಡಲೇ ಬೆಳೆ ಹಾನಿ ಸಮೀಕ್ಷೆ ಮಾಡಿ, ರೈತರಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಕುಣಿಗಲ್ ನ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಶಿವಣ್ಣ ಅವರು ಜನತಾ ಪಾರ್ಟಿಗೆ ಸೇರ್ಪಡೆಯಾದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್,ಎನ್., ಸದಸತ್ವ ಸಮಿತಿ ಅಧ್ಯಕ್ಷ ಕೆ.ಎಂ.ಪಾಲಾಕ್ಷ, ಅಲ್ಪಸಂಖ್ಯಾತರಘಟಕದ ಅಬ್ದುಲ್ ರೌಫ್, ಸಂಘಟನಾಕಾರ್ಯದರ್ಶಿ ಅಂಜನಮೂರ್ತಿ, ರಾಜ್ಯಉಪಾಧ್ಯಕ್ಷ ಹೊನ್ನೇಗೌಡ, ರಾಜ್ಯ ಕಾರ್ಯದರ್ಶಿಗುರುಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಲಪಂಥೀಯ ಪಠ್ಯಗಳನ್ನು ತುಂಬಿ ಮಕ್ಕಳ ಮನಸ್ಸನ್ನು ಕೆಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ವಿರೋಧಿಸಿ ಈಗಾಗಲೇ 197ಕ್ಕೂ ಹೆಚ್ಚುಸಾಹಿತಿಗಳು ಸರ್ಕಾರಕ್ಕೆ ಪತ್ರ ಬರೆದು ನಿಲ್ಲಿಸುವಂತೆ ಗಡುವು ನೀಡಲಾಗಿದೆ.ಸರ್ಕಾರ ಮುದ್ರಣಕ್ಕೂ ಮುನ್ನವೇ ಅನಪೇಕ್ಷಿತ ಪಠ್ಯಗಳನ್ನು ತೆಗೆಯದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. –ಬಿ.ಟಿ.ಲಲಿತಾನಾಯಕ್, ಜನತಾ ಪಾರ್ಟಿಯ ರಾಜ್ಯಾಧ್ಯಕ್ಷೆ