Advertisement

ವಾರದ 5 ದಿನ ಮಾತ್ರ ಕೆಲಸ!

12:22 AM May 28, 2019 | mahesh |

ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ(ಎಸ್‌ಕೆಎಂ) ಅಧ್ಯಕ್ಷ ಪ್ರೇಮ್‌ ಸಿಂಗ್‌ ತಮಾಂಗ್‌ ಅವರು ಸೋಮವಾರ ಸಿಕ್ಕಿಂನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಿ.ಎಸ್‌.ಗೋಲೆ ಎಂದು ಪ್ರಸಿದ್ಧರಾದ ಅವರು ನೇಪಾಳಿ ಭಾಷೆಯಲ್ಲಿ ಪ್ರಮಾಣ ಸ್ವೀಕರಿಸಿದ್ದಾರೆ. ಮಾಜಿ ಸಿಎಂ ಪವನ್‌ ಕುಮಾರ್‌ ಚಾಮ್ಲಿಂಗ್‌ ಮತ್ತು ಸಿಕ್ಕಿಂ ಡೆಮಾಕ್ರಾಟಿಕ್‌ ಫ್ರಂಟ್‌ನ ಹಿರಿಯ ನಾಯಕರ ಅನುಪಸ್ಥಿತಿಯು ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು. ವಿಶೇಷವೆಂದರೆ, ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಕೂಡಲೇ, ರಾಜ್ಯ ಸರಕಾರ ಉದ್ಯೋಗಿಗಳಿಗೆ ಇನ್ನು ಮುಂದೆ ವಾರದಲ್ಲಿ 5 ದಿನ ಮಾತ್ರ ಕೆಲಸವಿರಲಿದೆ, ಉಳಿದ 2 ದಿನ ರಜೆ ಇರಲಿದೆ ಎಂದು ತಮಾಂಗ್‌ ಘೋಷಿಸಿದ್ದಾರೆ. ಜತೆಗೆ, ತಾವೂ ಸೇರಿದಂತೆ ಎಲ್ಲ ಸಚಿವರು, ಶಾಸಕರು ಫಾರ್ಚೂನರ್‌ ಬದಲಿಗೆ ಸ್ಕಾರ್ಪಿಯೋ ಕಾರನ್ನಷ್ಟೇ ಬಳಸುವುದಾಗಿಯೂ ಘೋಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next