ನವ ದೆಹಲಿ : ನಿಮ್ಮ ಜಾಬ್ ಬದಲಾವಣೆಯ ನಂತರ ನಿಮ್ಮ ಪಿ ಎಫ್ ಹಣ ಹಿಂಪಡೆಯುವ ಬದಲಾಗಿ ಪಿಎಫ್ ಹಾಗೂ ಎಂಪ್ಲಾಯಿಸ್ ಪೆನ್ಷನ್ ಸ್ಕೀಮ್ (EPS) ಹಣವನ್ನು ಹೊಸ ಪಿಎಫ್ ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳುವುದು ಉತ್ತಮ.
ಇದನ್ನೂ ಓದಿ : ಪುತ್ತೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ
ಒಂದು ವೇಳೆ 5 ವರ್ಷಗಳ ಕೊಡುಗೆ ಪೂರ್ಣಗೊಳ್ಳುವ ಮೊದಲು ನೀವು ಇಪಿಎಫ್ ನ ಸಂಪೂರ್ಣ ಮೊತ್ತವನ್ನು ಹಿಂತೆಗೆದುಕೊಂಡರೆ, ತೆರಿಗೆ ಪ್ರಯೋಜನವನ್ನು ಕಳೆದುಕೊಳ್ಳುವಿರಿ. ಇಪಿಎಫ್ ಗೆ ನೀಡುವ ಕೊಡುಗೆಯ ಮೇಲೆ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ಲಭ್ಯವಿರುವ ತೆರಿಗೆ ವಿನಾಯಿತಿ ನಿಮಗೆ ಸಿಗುವುದಿಲ್ಲ. ಪಿಎಫ್ ಖಾತೆಯಲ್ಲಿ ಠೇವಣಿ ಇರಿಸಿದ ಮೊತ್ತವನ್ನು ಒಂದು ಪಿಎಫ್ ಖಾತೆಯಿಂದ ಮತ್ತೊಂದು ಪಿಎಫ್ ಖಾತೆಗೆ ವರ್ಗಾಯಿಸಿದರೆ, ತೆರಿಗೆ ವಿನಾಯಿತಿಯ ಲಾಭವನ್ನು ನೀವು ಪಡೆಯಬಹುದಾಗಿದೆ.
ಇ ಪಿ ಎಫ್ ಒ (EPFO) ನಿಯಮಗಳ ಪ್ರಕಾರ, ಇಪಿಎಸ್ ಮೆಂಬರ ಶಿಪ್ ಹೊಂದಿದವರು 10 ವರ್ಷಗಳ ಕೊಡುಗೆಯನ್ನು ಪೂರ್ಣಗೊಳಿಸಿದರೆ, ಅವರಿಗೆ 58 ವರ್ಷದ ನಂತರ ಪಿಂಚಣಿ ದೊರಕುತ್ತದೆ. ಒಬ್ಬ ಉದ್ಯೋಗಿ 58 ವರ್ಷಕ್ಕಿಂತ ಮುಂಚೆಯೇ ನಿವೃತ್ತಿ ಹೊಂದಿದ್ದರೆ ಮತ್ತು EPSನಲ್ಲಿ 10 ವರ್ಷಗಳ ಕೊಡುಗೆ ಹೊಂದಿದ್ದರೆ, ಅವನಿಗೆ ಪಿಂಚಣಿ ಕೂಡ ಲಭ್ಯವಾಗುತ್ತದೆ.
ಇದನ್ನೂ ಓದಿ : ರೈತರಿಗೆ ಕೃಷಿ ಸೌಲಭ್ಯದ ಅರಿವು ಮೂಡಿಸಿ