Advertisement

ಛಾಯಾಗ್ರಾಹಕರಿಗೆ ಭದ್ರತೆ ಒದಗಿಸಿ: ತೇಗಲತಿಪ್ಪಿ

11:26 AM Aug 20, 2022 | Team Udayavani |

ಕಲಬುರಗಿ: ಒಂದು ಚಿತ್ರ ಸಾವಿರ ಪದಗಳಿಗೆ ಸಮ. ಪದಗಳಲ್ಲಿ ವರ್ಣಿ ಸಲು ಸಾಧ್ಯವಾಗದ ಅದೆಷ್ಟೋ ಮಾತುಗಳನ್ನು ಕೇವಲ ಒಂದು ಚಿತ್ರ ಬಿಡಿಸಿಡುತ್ತದೆ. ಛಾಯಾಗ್ರಾಹಕರು ಸದಾ ಕ್ರಿಯಾಶೀಲರಾಗಿ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಸಮಾಜ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿರುವ ಛಾಯಾಗ್ರಾಹಕರಿಗೆ ಭದ್ರತೆ ಇಲ್ಲದಂತಾಗಿದೆ. ಅವರ ಭದ್ರತೆಗೆ ಸರಕಾರ ಮುಂದಾಗಬೇಕೆಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಆಗ್ರಹಿಸಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭವಾನಿಸಿಂಗ್‌ ಠಾಕೂರ ಉದ್ಘಾಟಿಸಿದರು. ಜಿಲ್ಲಾ ಫೋಟೋಗ್ರಾಫರ್ ಅಸೋಸಿಯೇಶನ್‌ ಅಧ್ಯಕ್ಷ ಬಸವರಾಜ ತೋಟದ್‌, ರೈತ ಮುಖಂಡ ಮಲ್ಲಿನಾಥ ಪಾಟೀಲ ಕಾಳಗಿ, ಕಸಾಪ ದಕ್ಷಿಣ ವಲಯ ಅಧ್ಯಕ್ಷ-ಪತ್ರಕರ್ತ ಶಾಮಸುಂದರ ಕುಲಕರ್ಣಿ, ಜಿಲ್ಲಾ ಕಸಾಪ ಸದಸ್ಯರಾದ ಶಿವರಾಜ ಅಂಡಗಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಪ್ರಮುಖರಾದ ಶಿವಶರಣ ಹಡಪದ, ರವಿಕುಮಾರ ಶಹಾಪುರಕರ್‌, ಶಿವಕುಮಾರ ಸಿ.ಎಚ್‌., ವಿಶ್ವನಾಥ ತೊಟ್ನಳ್ಳಿ, ಮಲ್ಲಿನಾಥ ಸಂಗಶೆಟ್ಟಿ, ಸುರೇಶ, ಪ್ರಕಾಶ ಎಂ.ಶೇರಖಾನೆ, ಅನಿಲಕುಮಾರ ಗಣೇಶಕರ್‌, ಅರುಣಕುಮಾರ ಬಿ.ತೆಗನೂರ ಹಾಗೂ ಛಾಯಾಗ್ರಾಹಕರು, ಸಾಹಿತ್ಯ ಪ್ರೇರಕರು ಭಾಗವಹಿಸಿದ್ದರು.

ಫೋಟೋಗ್ರಾಫಿಯಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ಹಾವಣಿ, ಗಂಗಾರಾಮ ರಾಠೊಡ, ನಂದಕಿಶೋರ ಚವ್ಹಾಣ, ವೆಂಕಟೇಶ ಪುಕಾಳೆ, ಸೋಮನಾಥ ಕಾಳಗಿ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸತ್ಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next