Advertisement

ಕರಾವಳಿ ಕಾವಲು ಪಡೆಗೆ: ರಕ್ಷಣಾ ಬೋಟ್‌, ಸಮುದ್ರ ಆ್ಯಂಬುಲೆನ್ಸ್‌ ಒದಗಿಸಿ: ರಘುಪತಿ ಭಟ್‌ ಮನವಿ

07:50 PM Sep 20, 2022 | Team Udayavani |

ಬೆಂಗಳೂರು: ಕರಾವಳಿ ಕಾವಲು ಪಡೆಗೆ 20 ಮೀಟರ್‌ನ “ರೆಸ್ಕೂé ಅಪರೇಷನ್‌ ಬೋಟ್‌’ ಹಾಗೂ “ಸೀ ಆ್ಯಂಬುಲೆನ್ಸ್‌ ‘ ಒದಗಿಸುವಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್‌ ಸರ್ಕಾರಕ್ಕೆ ಮನವಿ ಮಾಡಿದರು.

Advertisement

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸಿದ ರಘುಪತಿ ಭಟ್‌, ಆಳ ಸಮುದ್ರದಲ್ಲಿ ಏನಾದರೂ ದುರಂತ ಸಂಭವಿಸಿದರೆ ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಸಾಮರ್ಥಯದ ಬೋಟ್‌ ಬೇಕು. ಅದಕ್ಕಾಗಿ 20 ಮೀಟರ್‌ನ ರೆಸ್ಕೂé ಅಪರೇಷನ್‌ ಬೋಟ್‌ ಒದಗಿಸಬೇಕು. ಜೊತೆಗೆ, ಸೀ ಆ್ಯಂಬುಲೆನ್ಸ್‌ ಸಹ ಒದಗಿಸಬೇಕು ಎಂದು ಮನವಿ ಮಾಡಿದರು.

ಶಾಸಕರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, 370 ಕಿ.ಮೀ ಕರಾವಳಿ ಇದೆ. ಕರಾವಳಿ ಕಾವಲು ಪೊಲೀಸ್‌ ಘಟಕದಲ್ಲಿ ಒಟ್ಟು 15 ಬೋಟ್‌ಗಳಿದ್ದು, 2 ಬೋಟ್‌ಗಳು ದುರಸ್ತಿಗೆ ಬಂದಿದ್ದು, 13 ಬೋಟ್‌ಗಳು 9 ಠಾಣೆಗಳಲ್ಲಿ ಕಾರ್ಯಾಚರಿಸುತ್ತಿವೆ. ಬೋಟುಗಳ ಮಿಡ್‌ ಲೈಫ್ ಅಪ್‌ಗೆÅàಡೇಷನ್‌ ಕಾರ್ಯಕ್ಕೆ 2022ರ ಜು.29ರಂದು 22 ಕೋಟಿ ರೂ. ಒದಗಿಸಲಾಗಿದ್ದು, ಅಪ್‌ಗೆÅàಡೇಷನ್‌ ಕಾರ್ಯ ಪ್ರಗತಿಯಲ್ಲಿದೆ.

ರಾಜ್ಯ ಸರ್ಕಾರದ ಅನುದಾನದಲ್ಲಿ ಪ್ರತಿ ಬೋಟ್‌ಗೆ ಎಐಎಸ್‌, ಎಕೋ-ಸೌಂಡರ್‌ ಉಪಕರಣ ಅಳವಡಿಸಲಾಗಿದೆ. 2021-22ನೇ ಆರ್ಥಿಕ ವರ್ಷದಲ್ಲಿ 40 ಲೈಫ್ಬೋಯ್‌, 100 ಲೈಫ್ ಜಾಕೆಟ್‌, 25 ಸರ್ಚ್‌ ಲೈಟ್‌, 75 ಲೈಫ್ ಜಾಕೆಟ್‌, 45 ಫೆಂಡರ್‌, 15 ಫೈರ್‌ ಆ್ಯಕ್ಸ್‌, 15 ಫೈರ್‌ ಏಡ್‌ ಬಾಕ್ಸ್‌ ಮತ್ತಿತರ ಜೀವ ರಕ್ಷಣಾ ಸಾಮಾಗ್ರಿಗಳನ್ನು ಖರೀದಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ದಂಡ ಹೆಚ್ಚಿಸಿ:

Advertisement

ಸಮುದ್ರದಲ್ಲಿ 12 ನಾಟಿಕಲ್‌ ಮೈಲ್‌ ದಾಟಿ ಬರುವ ಹೊರರಾಜ್ಯದ ಬೋಟ್‌ಗಳಿಗೆ ಮೀನಿನ 5 ಪಟ್ಟು ಹೆಚ್ಚು ದಂಡ ವಿಧಿಸಲು ಕಾನೂನಿಗೆ ತಿದ್ದುಪಡಿ ತರಬೇಕು. ಇದರಿಂದ ಅಕ್ರಮ ನುಸುಳುವಿಕೆಯನ್ನು ತಡೆಗಟ್ಟಬಹುದು ಎಂದು ರಘುಪತಿ ಭಟ್‌ ಸಚಿವರು ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಸಚಿವ ಅರಗ ಜ್ಞಾನೇಂದ್ರ, 12 ನಾಟಿಕಲ್‌ ಮೈಲ್‌ ದಾಟಿ ಬರಬೇಕೆಂದರೆ ಕೋಸ್ಟ್‌ಗಾರ್ಡ್‌ ದಾಟಿ ಬರಬೇಕು. ಅದಕ್ಕೆ ಕೋಸ್ಟ್‌ಗಾರ್ಡ್‌ ಬಿಡಲ್ಲ. ಅದಾಗ್ಯೂ ಶಾಸಕರ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದರು.

ಜೊತೆಗೆ, ಕಳ್ಳ ಸಾಗಾಣಿಕೆ, ಮಾದಕ ದ್ರವ್ಯ ಸಾಗಾಣಿಕೆ ಇನ್ನಿತರ ಚಟುವಟಿಕೆಗಳನ್ನು ನಿರ್ಬಂಧಿಸುವಲ್ಲಿ ನಿರಂತರವಾಗಿ ಗುಪ್ತಚರ ಮಾಹಿತಿ ವಿನಿಮಯ ಸಭೆಯನ್ನು ಇಂಡಿಯನ್‌ ಕೋಸ್ಟ್‌ ಗಾರ್ಡ್‌ ಮತ್ತು ಇತರೆ ಏಜೆನ್ಸಿಯವರೊಂದಿಗೆ ಆಯೋಜಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಏಜೆನ್ಸಿಗಳು ತಂತ್ರಜ್ಞಾನ ಬಳಸಿಕೊಂಡು, ಗುಪ್ತಚರ ಮಾಹಿತಿ ವಿನಿಮಯ ನಿರಂತರವಾಗಿ ಮಾಡಿಕೊಳ್ಳಲಾಗುತ್ತಿದೆ. ಈ ದಿಸೆಯಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳ ಸಂಪುರ್ಣ ಸಹಕಾರದೊಂದಿಗೆ ಕರ್ತವ್ಯ ನಿರ್ವಹಿಸಲಾಗುತ್ತಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next