ರಬಕವಿ-ಬನಹಟ್ಟಿ: ಶಿಕ್ಷಣದ ಮೂಲ ಉದ್ದೇಶ ಒಂದೇ ಆಗಿದ್ದು ರೂಪ ಮಾತ್ರ ಬದಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಯಶಸ್ವಿಯಾಗಬೇಕಾದರೆ ವಿದ್ಯಾರ್ಥಿ, ಆಡಳಿತ ಮಂಡಳಿ, ಅಧ್ಯಾಪಕ ಮತ್ತು ಸರ್ಕಾರದ ಪರಸ್ಪರ ಸಹಕಾರ ಮುಖ್ಯವಾಗಿದೆ. ಇಂದು ಮೂಲ ಸೌಕರ್ಯಗಳ ಜತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ ಎಂದು ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಶ್ರೀನಿವಾಸ ಬಳ್ಳಿ ಹೇಳಿದರು.
ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯ ಉದ್ದೇಶ ಶಿಕ್ಷಕರ ಮಹತ್ವದ ಅರಿವು ಶಿಕ್ಷಕರಿಗಾಗಬೇಕು. ತಮ್ಮ ಕಾರ್ಯದ ಪರಿಕಲ್ಪನೆಯನ್ನು ಶಿಕ್ಷಕರು ಅರಿತುಕೊಳ್ಳುವುದಾಗಿದೆ. ಅಧ್ಯಾಪಕರು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿದರೆ ವಿದ್ಯಾರ್ಥಿಗಳು ಕೂಡಾ ಶ್ರದ್ಧೆಯಿಂದ ಕಲಿಯುತ್ತಾರೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಸಮಾಜ ಶಿಕ್ಷಕರನ್ನು ಗೌರವದ ಸ್ಥಾನದಲ್ಲಿಟ್ಟಿದೆ. ಸಮಾಜ ಕೊಟ್ಟಿರುವ ಗೌರವವನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಎಂದರು.
ಜನತಾ ಶಿಕ್ಷಣ ಸಂಘದ ಕಾರ್ಯಾಧ್ಯಕ್ಷ ಬಸವರಾಜ ಜಾಡಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಶ್ರೀಶೈಲ ಯಾದವಾಡ, ಎಂ.ಜಿ.ಕೆರೂರ, ಓಂಪ್ರಕಾಶ ಕಾಬರಾ, ಡಾ.ವೀರಭದ್ರ ಕುಳ್ಳಿ, ಬಳ್ಳಾರಿಯ ಕೆ.ಎಸ್. ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಜಗದೀಶ ಬಸಾಪೂರ, ಸುರೇಶ ಕೋಲಾರ, ಪ್ರೊ| ವೈ.ಬಿ.ಕೊರಡೂರ ಇದ್ದರು. ಮಧು ಗುರುವ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ| ಜಿ.ಆರ್.ಜುನ್ನಾಯ್ಕರ್ ಸ್ವಾಗತಿಸಿದರು. ಡಾ.ಮಂಜುನಾಥ ಬೆನ್ನೂರ ನಿರೂಪಿಸಿದರು. ಪ್ರಾಚಾರ್ಯ ಬಿ.ಆರ್.ಗೊಡ್ಡಾಳೆ ವಂದಿಸಿದರು.
Related Articles
ಕಾರ್ಯಕ್ರಮದಲ್ಲಿ ಬಸವರಾಜ ಪಟ್ಟಣ, ಮಧುಮಾಲತಿ ಬೂದಿ, ಗಿರಿಜಾ ಬಂಡಿವಾಡ, ಆರತಿ ಅಡವಿತೋಟ, ರಾಜು ಉಕ್ಕಲಿ, ಡಾ| ರಮೇಶ ಮಾಗುರಿ, ಡಾ| ಪ್ರಕಾಶ ಕೆಂಗನಾಳೆ, ಡಾ.ಮನೋಹರ ಶಿರಹಟ್ಟಿ, ಸುರೇಶ ನಡೋಣಿ, ಕಾವೇರಿ ಜಗದಾಳ ಇದ್ದರು.