Advertisement

ಕಮರವಾಡಿ-ಹಳಕರ್ಟಿಗೆ ಮೌಲಸೌಕರ್ಯ ಒದಗಿಸಿ

04:39 PM Sep 08, 2022 | Team Udayavani |

ವಾಡಿ: ಕನಿಷ್ಟ ಮೂಲ ಸೌಕರ್ಯ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ಶುದ್ಧ ನೀರಿನಿಂದ ಗ್ರಾಮಗಳನ್ನು ವಂಚಿಸಿರುವ ವಿವಿಧ ಗ್ರಾಪಂ ಆಡಳಿತಗಳಿಗೆ ರೈತ ಸಂಘ ಎಐಕೆಕೆಎಂಎಸ್‌ ಹಾಗೂ ಎಸ್‌ಯುಸಿಐ (ಸಿ) ಪಕ್ಷದ ಕಾರ್ಯಕರ್ತರು ಮನವಿ ಸಲ್ಲಿಸುವ ಮೂಲಕ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Advertisement

ಅಖೀಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆಯ ಕಮರವಾಡಿ ಗ್ರಾಮ ಘಟಕದ ಕಾರ್ಯಕರ್ತರು ಕಮರವಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಣಮಂತರಾಯ ಹೊಸಮನಿ ಅವರಿಗೆ ಮನವಿ ಸಲ್ಲಿಸುವ ಮೂಲಕ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿದ್ದಾರೆ.

ಸ್ಮಶಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿಪಡಿಸಿ ಕಾಂಪೌಂಡ್‌ ನಿರ್ಮಿಸಬೇಕು. ಗ್ರಂಥಾಲಯಕ್ಕೆ ಕೂಡುವ ದಾರಿ ದುರಸ್ತಿಗೊಳಿಸಬೇಕು. ದಲಿತರ ಓಣಿಗೆ ನೀರಿನ ಪೈಪ್‌ಲೈನ್‌ ಅಳವಡಿಸಿ ಸಿಸಿ ರಸ್ತೆ ನಿರ್ಮಿಸಬೇಕು. ಅಗಸಿ ಬಾಗಿಲಿನಿಂದ ದಲಿತರ ಕೇರಿಗೆ ಹರಿಯುತ್ತಿರುವ ಬಚ್ಚಲು ನೀರಿಗೆ ಪರ್ಯಾಯ ಮಾರ್ಗ ಕಲ್ಪಿಸಬೇಕು. ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಪ್ರತಿನಿತ್ಯ ಬ್ಲೀಚಿಂಗ್‌ ಪೌಡರ್‌ ಸಿಂಪಡಿಸಬೇಕು. ಅಂಬೇಡ್ಕರ್‌ ಭವನದ ಸುತ್ತಲೂ ಬೆಳೆದ ಗಿಡಗಂಟಿ ಕತ್ತರಿಸಬೇಕು. ಬೀದಿ ದೀಪ ಅಳವಡಿಸಬೇಕು. ಮಹಿಳಾ ಶೌಚಾಲಯ ನಿರ್ವಹಣೆಗೆ ಕ್ರಮಕೈಗೊಳ್ಳಬೇಕು. ಕೆಟ್ಟುನಿಂತ ಬೋರ್‌ವೆಲ್‌ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಎಐಕೆಕೆಎಂಎಸ್‌ ತಾಲೂಕು ಕಾರ್ಯದರ್ಶಿ ಶಿವುಕುಮಾರ ಆಂದೋಲಾ, ಗ್ರಾಮ ಘಟಕದ ಅಧ್ಯಕ್ಷ ಬಸವರಾಜ ಕರದಳ್ಳಿ, ಮುಖಂಡರಾದ ಹಣಮಂತ ತಳವಾರ, ಈರಣ್ಣ ಇಸಬಾ, ರಾಯಪ್ಪ ಕೊಟಗಾರ, ಮರೆಪ್ಪ ಕರಕನೋರ, ಸಾಬಣ್ಣ ಅಮಕಾರ, ದೊಡ್ಡ ಮಹಾದೇವಪ್ಪ ಕರಕನೋರ, ಮರೆಪ್ಪ ಮಾಂಗ್‌, ಮಲ್ಲಪ್ಪ ಮಾಂಗ್‌ ಈ ಸಂದರ್ಭದ್ಲಲಿದ್ದರು.

ಹಳಕರ್ಟಿ ಗ್ರಾಪಂಗೆ ಮನವಿ: ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಸೋಷಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ) ಪಕ್ಷದ ವತಿಯಿಂದ ಹಳಕರ್ಟಿ ಗ್ರಾಪಂ ಆಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಗ್ರಾಮಸ್ಥರಿಗೆ ಕುಡಿಯಲು ಶುದ್ಧ ನೀರು ಪೂರೈಸಲು ಶುದ್ಧೀಕರಣ ಘಟಕ ಸ್ಥಾಪಿಸಬೇಕು. ಹದಗೆಟ್ಟ ನೈರ್ಮಲ್ಯ ವ್ಯವಸ್ಥೆ ಸರಿಪಡಿಸಿ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ವಿವಿಧ ಬಡಾವಣೆಗಳಲ್ಲಿ ಒಡೆದಿರುವ ಕುಡಿಯುವ ನೀರಿನ ಪೈಪ್‌ಗ್ಳನ್ನು ದುರಸ್ತಿ ಮಾಡಬೇಕು. ಅಂಬೇಡ್ಕರ್‌ ನಗರ, ಮಲ್ಲಯ್ಯ ಅಗಸಿ ಮತ್ತು ವಾರ್ಡ್‌-1ರಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಿಸಬೇಕು. ಶಿಥಿಲ ನೀರಿನ ಟ್ಯಾಂಕ್‌ ತೆರವುಗೊಳಿಸಬೇಕು. ಹೊಸದಾಗಿ ಮಿನಿ ನೀರಿನ ಟ್ಯಾಂಕ್‌ ನಿರ್ಮಿಸಬೇಕು. ವೀರಭದ್ರೇಶ್ವರ ದೇವಸ್ಥಾನದಿಂದ ಮಠದ ವರೆಗೆ ಸಿಸಿ ರಸ್ತೆ ನಿರ್ಮಿಸಬೇಕು. ಗುರೂಜಿ ನಗರಕ್ಕೆ ರಸ್ತೆ ಸೌಲಭ್ಯ ಒದಗಿಸಬೇಕು. ಜೋತುಬಿದ್ದ ವಿದ್ಯುತ್‌ ತಂತಿ ಎತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಪಿಡಿಒ ರುದ್ರಗೌಡ ಹಾಗೂ ಗ್ರಾಪಂ ಅಧ್ಯಕ್ಷ ಸೋಮು ಚವ್ಹಾಣ ಮನವಿ ಸ್ವೀಕರಿಸಿದರು. ಎಸ್‌ಯುಸಿಐ ಮುಖಂಡರಾದ ಗೌತಮ ಪರತೂರಕರ, ಈರಣ್ಣ ಇಸಬಾ, ಶಿವುಕುಮಾರ ಅಂದೋಲಾ, ಚೌಡಪ್ಪ ಗಂಜಿ, ವೀರೇಶ್‌ ನಾಲವಾರ, ಗ್ರಾಮಸ್ಥರಾದ ಹೇಮಂತ ವಾಕೋಡೆ, ಈರಣ್ಣ ನೆಲೋಗಿ, ಬಸಪ್ಪ ಇಸಬಾ, ಮಹಾಂತೇಶ ಹುಳಗೋಳ, ವೀರೇಶ್‌ ಜೀವುಣಗಿ, ಸಿದ್ಧಾರ್ಥ ತಿಪ್ಪನೋರ, ಮಹಾದೇವ ಕೊಲ್ಲೂರ, ವೀರೇಶ್‌ ಕೊಟಗಿ, ಅಂಬ್ರೇಶ್‌ ಕೋಲಕುಂದಿ, ಭೀಮರಾಯ ಭಂಕೂರ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next