Advertisement

ಆದ್ಯತೆ ಮೇರೆಗೆ ಸುಲಭ ಸಾಲ ಸೌಲಭ್ಯ ಕಲ್ಪಿಸಿ

11:50 AM Jun 23, 2022 | Team Udayavani |

ಧಾರವಾಡ: ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿ ಸ್ವಸಹಾಯ ಗುಂಪುಗಳಿಗೆ ಅದರಲ್ಲೂ ಮಹಿಳಾ ಸ್ವ-ಸಹಾಯ ಗುಂಪು ಹಾಗೂ ಜಂಟಿ ಬಾಧ್ಯತಾ ಗುಂಪುಗಳಿಗೆ ಆದ್ಯತೆಯ ಮೇರೆಗೆ ಸುಲಭ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ (ನಬಾರ್ಡ್‌) ಅಧ್ಯಕ್ಷ ಡಾ|ಜಿ.ಆರ್‌.ಚಿಂತಾಲ ಹೇಳಿದರು.

Advertisement

ನಗರದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಹಮ್ಮಿಕೊಂಡಿದ್ದ ಸ್ವಸಹಾಯ ಸಂಘಗಳ ಸಾಲ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯಾಂಕ್‌ಗಳು ಬಡ ಜನರೆಂದ ಮಾತ್ರಕ್ಕೆ ಸಾಲ ನೀಡಲು ಹಿಂಜರಿಯಬಾರದು. ಸ್ವ ಸಹಾಯ ಸಂಘ ಅಥವಾ ಜಂಟಿ ಬಾಧ್ಯತಾ ಗುಂಪುಗಳ ಮೂಲಕ ಅವರೆಲ್ಲರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಪಿ.ಗೋಪಿಕೃಷ್ಣ ಮಾತನಾಡಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು 30750 ಕೋಟಿ ರೂ. ವಹಿವಾಟು ನಡೆಸುತ್ತಲಿದೆ ಎಂದರು.

ಇದೇ ಸಂದರ್ಭದಲ್ಲಿ ಅವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಪರವಾಗಿ 7216 ಸ್ವಸಹಾಯ ಮತ್ತು ಜಂಟಿ ಬಾಧ್ಯತಾ ಗುಂಪುಗಳ ಫಲಾನುಭವಿಗಳಿಗೆ 193 ಕೋಟಿ ರೂ. ಸಾಲ ಹಣದ ಚೆಕ್‌ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಪರವಾಗಿ 49686 ರೈತರಿಗೆ ಸಂಬಂಧಿಸಿ ಕಿಸಾನ್‌ ಕ್ರಡಿಟ್‌ ಕಾರ್ಡ್‌ ಅಡಿಯಲ್ಲಿ 701 ಕೋಟಿ ರೂ. ಸಾಲ ಹಣದ ಚೆಕ್‌ ಗಳನ್ನು ವಿತರಿಸಲಾಯಿತು.

Advertisement

ಇದಲ್ಲದೇ ಆರ್ಥಿಕ ಶಿಕ್ಷಣ ಹಾಗೂ ಜಂಟಿ ಬಾಧ್ಯತಾ ಗುಂಪುಗಳ ರಚನೆಗೆ ಸಂಬಂ ಧಿಸಿದಂತೆ ನಬಾರ್ಡ್‌ ಪರವಾಗಿ 34ಲಕ್ಷ ರೂ. ಗಳ ಸಹಾಯಧನ ವಿತರಿಸಲಾಯಿತು.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಅಧ್ಯಕ್ಷ ಶ್ರೀನಾಥ ಜೋಶಿ, ಕೆನರಾ ಬ್ಯಾಂಕ್‌ ಮಹಾ ಪ್ರಬಂಧಕ ಭಾಸ್ಕರ್‌ ಚಕ್ರವರ್ತಿ, ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ, ಬ್ಯಾಂಕ್‌ ಮಹಾ ಪ್ರಬಂಧಕ ಚಂದ್ರಶೇಖರ ಡಿ. ಮೋರೂ, ಸ್ಥಳೀಯ ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ಪ್ರಬಂಧಕ ವೈ. ಮಯೂರ ಕಾಂಬ್ಳೆ ಸೇರಿದಂತೆ ಹಲವರು ಇದ್ದರು.

ಕೆನರಾ ಬ್ಯಾಂಕ್‌ ಜತೆ ಒಡಂಬಡಿಕೆ

ಜಂಟಿ ಬಾಧ್ಯತಾ ಗೊಪುಗಳ ರಚನೆ ಮತ್ತು ಸಾಲ ಸಂಪರ್ಕಕ್ಕೆ ಸಂಬಂಧಿ ಸಿ ನಬಾರ್ಡ್‌, ಕೆನರಾ ಬ್ಯಾಂಕ್‌ ಜತೆ ಮಹತ್ವದ ಒಡಂಬಡಿಕೆಗೆ ಸಹಿ ಹಾಕಿತು. ಕೆನರಾ ಬ್ಯಾಂಕ್‌ ಪರವಾಗಿ ಬ್ಯಾಂಕಿನ ಮಹಾಪ್ರಬಂಧಕ ದೇಬಾನಂದ ಸಾಹು ಮತ್ತು ನಬಾರ್ಡ್‌ನ ಮುಖ್ಯ ಮಹಾಪ್ರಬಂಧಕ ಟಿ. ರಮೇಶ ಒಡಂಬಡಿಕೆಗೆ ಪರಸ್ಪರ ಸಹಿ ಹಾಕಿದರು. ಈ ಒಡಂಬಡಿಕೆಯ ಅನುಸಾರ ಕೆನರಾ ಬ್ಯಾಂಕ್‌ ರಾಜ್ಯದಲ್ಲಿ 2510 ಜಂಟಿ ಬಾಧ್ಯತಾ ಗುಂಪುಗಳನ್ನು ರಚಿಸಿ ಸಾಲ ಸಂಪರ್ಕಕ್ಕೆ ತರಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next