Advertisement

ಕೋವಿಡ್‌ ಬಗ್ಗೆ ಸರಿಯಾದ ಮಾಹಿತಿ ನೀಡಿ: ಚೀನಾಗೆ WHO ತರಾಟೆ

01:47 PM Mar 18, 2023 | Team Udayavani |

ಜಿನೇವಾ: 2020ರಲ್ಲಿ ಚೀನಾದ ವುಹಾನ್‌ ಮಾರುಕಟ್ಟೆಯಿಂದ ಸಂಗ್ರಹಿಸಲಾದ ಕೋವಿಡ್‌-19 ಸಂಬಂಧಿತ ಸ್ಯಾಂಪಲ್‌ಗಳ ಬಗ್ಗೆ ಚೀನಾ ಪಾರದರ್ಶಕ ಮಾಹಿತಿಗಳನ್ನು ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಚೀನಾಗೆ ಎಚ್ಚರಿಕೆ ನೀಡಿದೆ.

Advertisement

ಕೋವಿಡ್‌-19 ಬಗ್ಗೆ ಚೀನಾ ನಡೆಸಿದ್ದ ತನಿಖೆಗಳ ಬಗ್ಗೆಯೂ ತಿಳಿಸುವಂತೆ ಡಬ್ಲೂಎಚ್‌ಒ ಸೂಚನೆ ನೀಡಿದೆ. ಕೇಂದ್ರ ಚೀನಾದ ವುಹಾನ್‌ ಮಾರುಕಟ್ಟೆಯ ದಿ ಹುಆನನ್‌ ಮಾರುಕಟ್ಟೆ ಕೋವಿಡ್‌-19 ನ ಮೂಲ ಸ್ಥಾನ ಎಂದು ತಿಳಿದು ಬಂದಿತ್ತು. ಅಲ್ಲಿಂದಲೇ ಕೋವಿಡ್‌ ವೈರಸ್‌ 2019 ರಲ್ಲಿ ಚೀನಾದಾದ್ಯಂತ ಪಸರಿಸಿ ಆ ಬಳಿಕ ವಿಶ್ವದಾದ್ಯಂತ ಹಬ್ಬಿತ್ತು.

ಇದೀಗ ಕೋವಿಡ್‌-19 ಬಗೆಗಿನ ಪ್ರಾಥಮಿಕ ತನಿಖೆಯ ವರದಿಗಳನ್ನು ಚೀನಾ ನೀಡದ್ದಕ್ಕೆ ಚೀನಾ ವಿರುದ್ಧ ತಿರುಗಿ ಬಿದ್ದಿರುವ ವಿಶ್ವ ಆರೋಗ್ಯ ಸಂಸ್ಥೆ,ʻ ಚೀನಾ ತಕ್ಷಣವೇ ಕೋವಿಡ್‌-19 ಬಗೆಗಿನ ಪ್ರತಿಯೊಂದು ಮಾಹಿತಿಯನ್ನೂ ಜಗತ್ತಿಗೆ ನೀಡಬೇಕು.ನಿಜವಾಗಿಯೂ ಈ ಮಾಹಿತಿಗಳನ್ನು ಚೀನಾ ಮೂರು ವರ್ಷದ ಮೊದಲೇ ನೀಡಬೇಕಾಗಿತ್ತುʼ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ. ಟೆಡ್ರಸ್‌ ಆಧನಮ್‌ ಗೇಬ್ರೆಯಾಸಸ್‌ ಶುಕ್ರವಾರ ಜಿನೇವಾದಲ್ಲಿ ಎಚ್ಚರಿಕೆ ನೀಡಿದ್ದಾರೆ.

ವೈರಸ್‌ ಬಗೆಗಿನ ಪ್ರತಿಯೊಂದು ಮಹಿತಿಗಳನ್ನೂ ಅತ್ಯಂತ ಪಾರದರ್ಶಕವಾಗಿ ನೀಡುವಂತೆ ಖಡಕ್‌  ಸೂಚನೆ ನೀಡಿದ್ದಾರೆ. ಕೋವಿಡ್‌-19 ಬಗೆಗಿನ ತನಿಖೆಯಿಂದ ಹೊರಬಿದ್ದಿರುವ ಸತ್ಯಗಳನ್ನೂ ತಿಳಿಸುವಂತೆ ಸೂಚನೆ ನೀಡಿದ್ಧಾರೆ.

ಇದನ್ನೂ ಓದಿ: ವಿಷ್ಣು ರೂಪದ ಅದೃಷ್ಟದ ಕಲ್ಲೆಂದು 2 ಕೋಟಿ ರೂ. ವಂಚನೆಗೆ ಯತ್ನ

Advertisement
Advertisement

Udayavani is now on Telegram. Click here to join our channel and stay updated with the latest news.

Next