Advertisement

ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಮಾದರಿ ವೇತನ ಕೊಡಿ

04:31 PM Nov 05, 2020 | sudhir |

ಬಾಗಲಕೋಟೆ: 2023ರ ವೇಳೆಗೆ ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಸರ್ಕಾರ ನೌಕರರ ವೇತನ ಮಾದರಿಯ ಸಮಾನ ವೇತನ ದೊರಕುವಂತಾಗಬೇಕು ಎಂಬ ದೂರದೃಷ್ಟಿ ಹೊಂದಲಾಗಿದೆ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಹೇಳಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ, ಶಿಕ್ಷಕರು ಮತ್ತು ಸರ್ಕಾರಿ ನೌಕರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆಜಿಐಡಿ ಇಲಾಖೆಯು ಸಂಪೂರ್ಣ ಗಣಕೀಕರಣಗೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದೆ. ಮುಂದಿನ ಮೂರು ತಿಂಗಳಲ್ಲಿ ನೌಕರರು ಇಲಾಖೆಯ ಎಲ್ಲ ವ್ಯವಹಾರಗಳನ್ನು ಮನೆಯಲ್ಲಿಯೇ ಕುಳಿತು ತಮ್ಮ-ತಮ್ಮ ಮೊಬೈಲ್‌ ಗಳಲ್ಲಿಯೇ ವ್ಯವಹರಿಸುವಂತಾಗುತ್ತದೆ. 2020ನೇ ಸಾಲಿನಲ್ಲಿ ಆಯವ್ಯಯದಲ್ಲಿ ಸಂಘದ ಒತ್ತಾಸೆಯ ಮೇರೆಗೆ ನಗದು ರಹಿತ ಆರೋಗ್ಯ ಯೋಜನೆಯನ್ನು ಮುಖ್ಯಮಂತ್ರಿಗಳು
ಘೋಷಣೆ ಮಾಡಿರುತ್ತಾರೆ. ಬರುವ ನಾಲ್ಕು ತಿಂಗಳಲ್ಲಿ ಯೋಜನೆ ಜಾರಿಗೊಳ್ಳಲಿದೆ ಎಂದರು.

ಇದನ್ನೂ ಓದಿ: ರಾಯಚೂರು ನಗರಸಭೆಯ ಅನರ್ಹ ಸದಸ್ಯೆ ವಿರುದ್ಧ ಕ್ರಿಮಿನಲ್ ಕೇಸ್

ನೂತನ ಪಿಂಚಣಿ ಯೋಜನೆ ಸರ್ಕಾರಿ ನೌಕರಿಗೆ ಮಾರಕವಾಗಿದೆ. 2006 ನಂತರ ನೇಮಕಗೊಂಡ ಎಲ್ಲಾ ನೌಕರರನ್ನು ಈ ಪಿಂಚಣಿ ವ್ಯಾಪ್ತಿಗೆ ತರಲಾಗಿದೆ. ಪರಿಣಾಮವಾಗಿ ನಿವೃತ್ತಿ ನಂತರ ನೌಕರರಿಗೆ ಎರಡು ಸಾವಿರ ರೂ. ಸಹ ಪಿಂಚಣಿ ದೊರಕುವುದಿಲ್ಲ. ಇದು ಅವೈಜ್ಞಾನಿಕ ಹಾಗೂ ಅಸಂಬದ್ಧ ಯೋಜನೆಯಾಗಿದೆ. ಕಾರಣ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಪೊಲೀಸ್‌ ಇಲಾಖೆಯು ನೌಕರರ ಸಂಘದ ಚಟುವಟಿಕೆಗೆ ಮಂಚೂಣಿಗೆ ಬರಲು ಸಾಧ್ಯವಿಲ್ಲ. ಹೀಗಾಗಿ ಅವರ ಧ್ವನಿಯಾಗಿ ನಾವು ಸರ್ಕಾರದ ಗಮನ ಸೆಳೆದು ಪೊಲೀಸ್‌ ಇಲಾಖೆಯ ಬೇಡಿಕೆಗಳನ್ನು ಸಹ ಪರಿಹರಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಸಂಘದ ನಿವೇಶನದಲ್ಲಿ ಈಗಾಗಲೇ ರಸ್ತೆಗೆ ಹೊಂದಿಕೊಂಡಂತೆ 12 ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ. ಉಳಿದ ಹತ್ತು ಗುಂಟೆ ಜಾಗೆಯಲ್ಲಿ ಸಮುದಾಯ ಭವನ, ನೌಕರರ ವಸತಿ ಗೃಹಗಳನ್ನು ನಿರ್ಮಿಸಲು ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲು ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದರು. ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜಗದೀಶ ಗೌಡಪ್ಪ ಪಾಟೀಲ ಮಾತನಾಡಿದರು. ಸಮಾರಂಭದಲ್ಲಿ ಕೊರೊನಾ ವಾರಿಯರ್ಸ್‌ ಆಗಿ ಮಹತ್ತರ ಕಾರ್ಯನಿರ್ವಹಿಸಿದ
ಆರೋಗ್ಯ ಮತ್ತು ಪೊಲೀಸ್‌ ಇಲಾಖೆಯ ಎಲ್ಲ ವೃಂದದ ತಲಾ ಒಬ್ಬ ಪ್ರತಿನಿ ಧಿ ನೌಕರರಿಗೆ ಸತ್ಕರಿಸುವುದರ ಜೊತೆಗೆ ಇತರೆ ಇಲಾಖೆಯ ಪ್ರತಿ ವೃಂದದಿಂದ ಕೋವಿಡ್‌-19ಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ಭಾಗಿಗಳಾಗಿ ಗಮನಾರ್ಹ ಸೇವೆ ಸಲ್ಲಿಸಿದ ಸುಮಾರು 60 ಅಧಿಕಾರಿಗಳು/ನೌಕರರಿಗೆ ಆದರದ ಗೌರವದ ಸತ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

Advertisement

ವಿಜಯಪುರ ಜಿಲ್ಲಾಧ್ಯಕ್ಷ ಸುರೇಶ್‌ ಶೆಡಿಶ್ಯಾಳ, ಬೀದರ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗಿ, ಧಾರವಾಡ ಜಿಲ್ಲಾಧ್ಯಕ್ಷ ಸಿದ್ದನಗೌಡ ಪಾಟೀಲ, ಗುಲ್ಬರ್ಗ ಜಿಲ್ಲಾಧ್ಯಕ್ಷ ರಾಜು ಲಿಂಗಟಿ, ಯಾದಗಿರಿ ಜಿಲ್ಲಾಧ್ಯಕ್ಷ ಮಹಿಪಾಲ್‌ ರೆಡ್ಡಿ, ಸಂಜೀವರೆಡ್ಡಿ, ಎಸ್‌.ಕೆ. ಹಿರೇಮಠ, ವಿಠuಲ ವಾಲಿಕಾರ, ಎಸ್‌.ಎಸ್‌. ಇಂಜಗನೇರಿ ಇದ್ದರು. ವಿಠಲ ವಾಲಿಕಾರ ಸ್ವಾಗತಿಸಿದರು. ಹುಚ್ಚೇಶಲಾಯದಗುಂದಿ, ಎಸ್‌.ಎ ಸಾರಂಗಮಠ, ಸೌಮ್ಯಾ ದೇಸಾಯಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next