Advertisement

ನರ್ಸಿಂಗ್‌ ಮಾಡುವವರಿಗೂ ವೈದ್ಯ ಶಿಕ್ಷಣಕ್ಕೆ ಅವಕಾಶ ಕೊಡಿ

09:06 AM Jun 07, 2019 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರಕ್ಕೆ ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್‌ ನೇತೃತ್ವದ ಸಮಿತಿ ಸಲ್ಲಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವೈದ್ಯಕೀಯ ಶಿಕ್ಷಣದಲ್ಲೂ ಆಮೂಲಾಗ್ರ ಬದಲಾವಣೆಗೆ ಶಿಫಾರಸು ಮಾಡಲಾಗಿದೆ. ವೈದ್ಯ ಶಿಕ್ಷಣ ಕೋರ್ಸ್‌ಗೆ ದಂತ ವೈದ್ಯ, ನರ್ಸಿಂಗ್‌ ಕೋರ್ಸ್‌ ಮಾಡುವವ ರಿಗೆ ಲ್ಯಾಟರಲ್ ಎಂಟ್ರಿಗೆ (ನೇರಪ್ರವೇಶ)ಅವಕಾಶ ಮಾಡಿಕೊಡಬಹುದು ಎಂದು ಸಲಹೆ ಮಾಡಲಾಗಿದೆ.

Advertisement

ಶಿಕ್ಷಣ ನೀತಿಯ ಪ್ರಕಾರ ನರ್ಸಿಂಗ್‌, ದಂತ ವೈದ್ಯ, ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆವ ಮುನ್ನ ಮೊದಲ 2 ವರ್ಷಗಳಲ್ಲಿ ಸಮಾನವಾಗಿರುವ ಶಿಕ್ಷಣ ಇರಬೇಕು. ಅನಂತರ ಅವರಿಗೆ ಬೇಕಾದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ.

ಇದರ ಜತೆಗೆ ಎಂಬಿಬಿಎಸ್‌ ಪದವಿ ಮುಕ್ತಾಯಕ್ಕಾಗಿ ಇರುವ ಪರೀಕ್ಷೆ (ಎಕ್ಸಿಟ್ ಎಕ್ಸಾಮ್‌), ಸ್ನಾತಕೋತ್ತರ ವೈದ್ಯ ಕೋರ್ಸ್‌ಗೆ ಪ್ರವೇಶ ಪಡೆಯಲು ಇರುವ ಪರೀಕ್ಷೆಯೂ ಆಗಬೇಕು ಎಂದು ಸಲಹೆ ಮಾಡಲಾಗಿದೆ. ನಾಲ್ಕನೇ ವರ್ಷದ ಮುಕ್ತಾಯದಲ್ಲಿ ಈ ಪರೀಕ್ಷೆ ನಡೆಸಬೇಕು. ಈ ಮೂಲಕ ಪ್ರತ್ಯೇಕವಾಗಿ ಪರೀಕ್ಷೆಗೆ ಸಿದ್ಧತೆ ನಡೆಸುವ ಹೊರೆ ತಪ್ಪಿಸಿದಂತಾಗುತ್ತದೆ. ಈ ಅವಧಿಯನ್ನು ಪ್ರಾಯೋಗಿಕ ತರಬೇತಿ ಪಡೆಯಲು ಬಳಕೆ ಮಾಡಬಹುದು. ದೇಶದಲ್ಲಿ ವೈದ್ಯರ ಕೊರತೆ ಹಿನ್ನೆಲೆಯಲ್ಲಿ ಈ ಅಂಶವನ್ನು ಸಮಿತಿ ಸಲಹೆ ಮಾಡಿದೆ. ಶಿಕ್ಷಣ ಸಂಸ್ಥೆಗಳು ಸರಕಾರ ಸಿದ್ಧಪಡಿಸಿದ ಸೂಚಿಗೆ ಅನುಗುಣವಾಗಿ ತಮ್ಮದೇ ಆಗಿರುವ ಪಠ್ಯಕ್ರಮ ಸಿದ್ಧಪಡಿಸಲೂ ಅನುಮತಿ ನೀಡಬಹುದಾಗಿದೆ ಎಂದು ‘ದ ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next