Advertisement

“ವರ್ಗಾವಣೆ ದಂಧೆ ಸಾಬೀತು ಮಾಡಿ’ 

06:00 AM Dec 20, 2018 | Team Udayavani |

ವಿಧಾನಸಭೆ: “”ಮುಖ್ಯಮಂತ್ರಿಯಾದ ನಂತರ ವರ್ಗಾವಣೆ ವಿಚಾರದಲ್ಲಿ ದಂಧೆ ಮಾಡಿರುವ ಬಗ್ಗೆ ಒಂದೇ ಒಂದು ಪ್ರಕರಣ ಸಾಬೀತುಪಡಿಸಿದರೆ ಒಂದು ಕ್ಷಣವೂ ಈ ಸ್ಥಾನದಲ್ಲಿ ಮುಂದುವರಿಯುವುದಿಲ್ಲ” ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸವಾಲು ಹಾಕಿದ್ದಾರೆ.

Advertisement

“”ವೆಸ್ಟೆಂಡ್‌ನ‌ಲ್ಲಿ ಕೊಠಡಿ ಪಡೆದಿದ್ದೇನೆ. ಆದರೆ, ಒಬ್ಬನೇ ಒಬ್ಬ ಸರ್ಕಾರಿ ಅಧಿಕಾರಿಯನ್ನು ಅಲ್ಲಿಗೆ ಕರೆಸಿಕೊಂಡು ಮಾತನಾಡಿಲ್ಲ. ಹಿಂದೆಯೂ ಸಾಕಷ್ಟು ಮುಖ್ಯಮಂತ್ರಿಗಳು ಅಲ್ಲಿ ಕೊಠಡಿ ಇಟ್ಟುಕೊಂಡಿದ್ದರು. ಅದೇ ರೀತಿ ನಾನೂ ಕೊಠಡಿ ಪಡೆದುಕೊಂಡಿದ್ದೇನೆ.
ಅಷ್ಟಕ್ಕೂ, ಸರ್ಕಾರಿ ಖಜಾನೆಯ ಹಣವನ್ನು ಅದಕ್ಕೆ ಬಳಕೆ ಮಾಡಿಕೊಳ್ಳುತ್ತಿಲ್ಲ” ಎಂದು ಸಮರ್ಥಿಸಿ ಕೊಂಡಿದ್ದಾರೆ.

“”ಬರ ಕುರಿತ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ನಾನು ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ತಂಗುತ್ತೇನೆ ಎಂದು ಯಡಿಯೂರಪ್ಪ ಸಹಿತ ಬಿಜೆಪಿಯ  ಕೆಲವರು ಆರೋಪ ಮಾಡಿದ್ದಾರೆ. ಆದರೆ, ನಾನು ಜೆ.ಪಿ.ನಗರದ ಮನೆಯಲ್ಲೇ ವಾಸವಾಗಿದ್ದೇನೆ. ಹಿಂದೆ
ಯಾರ್ಯಾರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಿದ್ದರು ಎನ್ನುವುದು ಗೊತ್ತಿದೆ” ಎಂದು ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.

ರೇವಣ್ಣ… ತಮ್ಮನಿಗೆ ಬುದ್ಧಿ ಹೇಳಪ್ಪಾ: ಕುಮಾರ ಸ್ವಾಮಿ ಅವರ ಹೇಳಿಕೆಗೆ ಗರಂ ಆದ ಯಡಿಯೂರಪ್ಪ, “”ನಾನು ಮುಖ್ಯಮಂತ್ರಿಯಾಗಿದ್ದಾಗ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಇದ್ದ ಬಗ್ಗೆ ದಾಖಲೆ ಕೊಟ್ಟರೆ ಈ ಕ್ಷಣದಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗುತ್ತೇನೆ. ಯಾಕೆ ಸುಳ್ಳು ಹೇಳುತ್ತೀರಿ, ಯೇ… ರೇವಣ್ಣ , ನಿಮ್ಮ ತಮ್ಮನಿಗೆ ಬುದಿಟಛಿ ಹೇಳಪ್ಪಾ” ಎಂದು ಲೇವಡಿ ಮಾಡಿದರು. 

ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, “”ಬೇಡ ಬೇಡ ನೀವು ಇನ್ನೂ ಈ ಸದನದಲ್ಲಿ ಇರಬೇಕು. ಆದರೆ, ನಾನು ವೆಸ್ಟೆಂಡ್‌ ಹೋಟೆಲ್‌ನಲ್ಲಿ ಬೇರೆ ಉದ್ದೇಶಕ್ಕೆ ಉಳಿದುಕೊಂಡಿಲ್ಲ” ಎಂದರು. ಮಾತು ವಾಪಸ್‌ ಪಡೆಯುವೆ: ಪ್ರತಿಭಟನಾನಿರತ
ರೈತ ಮಹಿಳೆ ಬಗ್ಗೆ ನೀಡಿದ್ದ ಹೇಳಿಕೆ ಕುರಿತು ಟೀಕೆಗಳು ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “”ರೈತ ಮಹಿಳೆಯೊಬ್ಬರ ಬಗ್ಗೆ ನಾನು ಯಾವುದೇ ಕೆಟ್ಟ ಉದ್ದೇಶದಿಂದ ಮಾತನಾಡಲಿಲ್ಲ. ತಾಯಿ ಎಂಬ ಪದ ಬಳಕೆ ಮಾಡಿದೆ. ಇಷ್ಟು ವರ್ಷ ಎಲ್ಲಿದ್ಯಮ್ಮಾ ಎನ್ನುವ ಬದಲು ಎಲ್ಲಿ ಮಲಗಿದ್ದೆ ಎಂದು ಲೋಕಾರೂಢಿಯಾಗಿ ಮಾತನಾಡಿದೆ. ಆದರೆ, ಅದಕ್ಕೆ ಬೇರೆ, ಬೇರೆ ರೀತಿ ಅರ್ಥ ಕಲ್ಪಿಸಲಾಯಿತು. ಸದನದಲ್ಲೂ ಅದೇ ವಿಚಾರ ಪದೇ ಪದೆ ಪ್ರಸ್ತಾಪಿಸಲಾಗುತ್ತಿದೆ. ನಾನು ಎಂದೂ ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತನಾಡಿಲ್ಲ. ಆ ಸಂಸ್ಕೃತಿಯಿಂದ ಬಂದವ ನಾನಲ್ಲ. ಒಂದೊಮ್ಮೆ ಆ ಹೇಳಿಕೆ ಬಗ್ಗೆ ಆಕ್ಷೇಪ ಇದ್ದರೆ ನಾನು ವಾಪಸ್‌ ಪಡೆದು
ಕೊಳ್ಳುತೇ¤ನೆ. ನನಗೇನೂ ಪ್ರತಿಷ್ಠೆ ಇಲ್ಲ” ಎಂದರು. “”ಜನಸಾಮಾನ್ಯರು, ಬಡವರಿಗೆ ಲಭ್ಯವಿರುವ ವಿಚಾರದಲ್ಲಿ ನಾನು ಬೇರೆಯವರಿಂದ ಹೇಳಿಸಿ ಕೊಳ್ಳಬೇಕಿಲ್ಲ. ಏಳು ತಿಂಗಳಲ್ಲಿ ಎಷ್ಟು ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ ಎಂಬುದು ನನಗೆ ಗೊತ್ತಿದೆ. ಸಾವಿರಾರು ದಾಹರಣೆಗಳನ್ನೂ ನಾನು ಹೇಳಬಲ್ಲೆ” ಎಂದು ಹೇಳಿದರು.

Advertisement

ಬರ ಕುರಿತ ಚರ್ಚೆಯಲ್ಲಿ ಬಿಜೆಪಿ ಸದಸ್ಯರ ತೀಕ್ಷ್ಣ ಮಾತುಗಳಿಗೆ ತಮ್ಮದೇ ಆದ ಧಾಟಿಯಲ್ಲಿ ತಿರುಗೇಟು ನೀಡಿದ ಮುಖ್ಯಮಂತ್ರಿ, “”ಹಿಂದೆ ಬಿಜೆಪಿ ಜತೆ ಸೇರಿ ಸರ್ಕಾರ ನಡೆಸಿದಾಗ ಅಧಿಕಾರ ಹಸ್ತಾಂತರ ಪ್ರಸಂಗ ಹೊರತುಪಡಿಸಿದರೆ, ಉಳಿದ ಸಂದರ್ಭಗಳಲ್ಲಿ ನಾನು ಯಾವ ರೀತಿ ನಡೆದುಕೊಂಡಿದ್ದೆ ಎಂಬುದು ಎಲ್ಲ ಬಿಜೆಪಿಯವರಿಗೂ ಗೊತ್ತಿದೆ. ಆದರೆ, ನನ್ನ ನಡವಳಿಕೆ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಸರ್ಕಾರ ಸತ್ತಿದೆ, ಸರ್ಕಾರ ಇದೆಯಾ ಎಂದು ಕೇಳುವವರಿಗೆ ಸರ್ಕಾರದ ಕೆಲಸಗಳು ಕಾಣುತ್ತಿಲ್ಲವೇ”
ಎಂದು ಪ್ರಶ್ನಿಸಿದರು. 

ರಾಷ್ಟ್ರೀಕೃತ ಬ್ಯಾಂಕ್‌ ಗಳು ಇವರ ಸಾಲಮನ್ನಾ ಯೋಜನೆ ಒಪ್ಪಿದ್ದಾರೋ ಇಲ್ಲವೇ ಎಂಬುದನ್ನು ಸದನದ ಮುಂದಿಡಲಿ. ಸುಳ್ಳು ಹೇಳಿ ಜನರನ್ನು ತಪ್ಪು ದಾರಿಗೆ ಎಳೆಯುವುದು ಬೇಡ.
● ಜಗದೀಶ್‌ ಶೆಟ್ಟರ್‌, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next