Advertisement

Delhi: ಹಿಂದೂ ಎನ್ನಲು ಹೆಮ್ಮೆಯಾಗುತ್ತಿದೆ; ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ರಿಷಿ ದಂಪತಿ

10:15 AM Sep 10, 2023 | Team Udayavani |

ನವದೆಹಲಿ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಭಾನುವಾರ ಬೆಳಗ್ಗೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

Advertisement

ಎರಡು ದಿನಗಳ G20 ಶೃಂಗಸಭೆಯಲ್ಲಿ ಭಾಗವಹಿಸಲು ಸುನಕ್ ಅವರು ದೆಹಲಿಗೆ ಆಗಮಿಸಿದ್ದು, ಅಲ್ಲಿ ವಿಶ್ವ ನಾಯಕರ ಜೊತೆ ವಿಶ್ವದ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಬ್ರಿಟನ್ ಪ್ರಧಾನಿಯಾದ ನಂತರ ರಿಷಿ ಸುನಕ್ ಅವರ ಮೊದಲ ಅಧಿಕೃತ ಭಾರತ ಭೇಟಿ ಇದಾಗಿದೆ.

ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು ತನ್ನನು ಹಿಂದೂ ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ ತನ್ನ ದೆಹಲಿ ಭೇಟಿ ಮಹತ್ವದ್ದಾಗಿದೆ ಸಮಯಾವಕಾಶ ಹೊಂದಿಸಿಕೊಂಡು ಹಿಂದೂ ದೇವಾಲಯಗಳಿಗೆ ಭೇಟಿ ನೀಡುವ ಇಂಗಿತ ಇದೆ ಎಂದು ಹೇಳಿಕೊಂಡಿದ್ದಾರೆ.

Advertisement

ದೇವಾಲಯದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಇದ್ದ ಸುನಾಕ್ ದಂಪತಿಗೆ ದೇವಾಲಯದ ಸುತ್ತ ಹೆಚ್ಚಿನ ಭದ್ರತೆ ನೀಡಲಾಗಿತ್ತು.

ಕಳೆದ ಶುಕ್ರವಾರ, ಸುನಕ್ ಅವರು ರಕ್ಷಾ ಬಂಧನವನ್ನು ಆಚರಿಸಿಕೊಂಡಿದ್ದರು ಆದರೆ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಅವಕಾಶ ಸಿಗಲಿಲ್ಲ, ಆದ ಕಾರಣ ಅವರು ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ “ಅದನ್ನು ಸರಿದೂಗಿಸಲು” ಆಶಿಸಿದ್ದರು ಎಂದು ಹೇಳಲಾಗಿದೆ.

ಪ್ರಧಾನಿ ಮೋದಿಯವರ ಬಗ್ಗೆ “ಅಗಾಧವಾದ ಗೌರವ” ಹೊಂದಿದ್ದು ಮತ್ತು G20 ಸಭೆ ಅಗಾಧವಾದ ಯಶಸ್ಸನ್ನು ಮಾಡುವಲ್ಲಿ ಅವರನ್ನು ಬೆಂಬಲಿಸಲು ಉತ್ಸುಕರಾಗಿದ್ದೇನೆ ಎಂದು ಸುನಾಕ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next