ಶಿವಮೊಗ್ಗ: ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆಮಾಡುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟ 9ನೇ ವಾರಕ್ಕೆ ಮುಂದುವರಿದಿದೆ. ಅತಿಥಿ ಉಪನ್ಯಾಸಕರು ಉದ್ಯೋಗ ಭದ್ರತೆಗಾಗಿ ಆಗ್ರಹಿಸಿ ಪ್ರತಿ ಮಂಗಳವಾರ ಪ್ರತಿಭಟನೆ ಮಾಡುತ್ತಾ ಬಂದಿದ್ದಾರೆ.
ಆದರೆ ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಾರಿಯ ಶಿಕ್ಷಕ ದಿನಾಚರಣೆಯಂತೂ ನಮ್ಮ ಪಾಲಿಗೆ ಕರಾಳ ದಿನವಾಗಿತ್ತು. ಸರ್ಕಾರ ಕನಿಷ್ಟ ಪಕ್ಷ ನಮ್ಮ ಮಾನವೀಯ ಬೇಡಿಕೆಗಳನ್ನು ಈಡೇರಿಸಿಲ್ಲಎಂದು ಪ್ರತಿಭಟನಾಕಾರರು ತಮ್ಮ ಅಳಲನ್ನು ತೋಡಿಕೊಂಡರು.
ಎಷ್ಟು ವರ್ಷಗಳ ಕಾಲ ನಾವು ಹೋರಾಟಮಾಡಬೇಕು. ನಮಗೆ ಬರಬೇಕಾಗಿರುವ ಬಾಕಿ ವೇತನ, ಲಾಕ್‌ಡೌನ್ ಅವ ಧಿಯ ವೇತನ, ಉದ್ಯೋಗ ಭದ್ರತೆ ಇವೆಲ್ಲವೂಸಿಗುವುದು ಯಾವಾಗ. ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕರ ಗತಿ ಏನು ಎಂದು ಪ್ರತಿಭಟನಾನಿರತ ಉಪನ್ಯಾಸಕರು ಪ್ರಶ್ನೆ ಮಾಡಿದರು.
ಸರ್ಕಾರ ನಮಗೆ ನೀಡಬೇಕಾಗಿರುವ ಭಿಕ್ಷೆಯಲ್ಲ. ದಶಕಗಳಿಂದ ಕನಿಷ್ಟ ವೇತನಕ್ಕೆ ದುಡಿದು ಸಾವಿರಾರು ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಉಳಿತಾಯ ಮಾಡಿಕೊಟ್ಟಿದ್ದೇವೆ. ನಮ್ಮೆಲ್ಲ ನೋವನ್ನು ನುಂಗಿ ಇದುವರೆಗೂ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಲು ಶ್ರಮಿಸುತ್ತಿದ್ದೇವೆ. ಈ ಎಲ್ಲ ಸತ್ಯ ಗೊತ್ತಿರುವ ಸರ್ಕಾರ ಮತ್ತು ಇಲಾಖೆ ನಮ್ಮತ್ತ ಗಮನ ನೀಡುತ್ತಿಲ್ಲ ಎಂದು ದೂರಿದರು. ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆ ರದ್ದುಪಡಿಸಿ ಈಗಾಗಲೇ ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ನೀಡಬೇಕು. ಆತ್ಮಹತ್ಯೆ ಮಾಡಿಕೊಂಡ ಅತಿಥಿ ಉಪನ್ಯಾಸಕರಿಗೆ 10 ಲಕ್ಷ ರೂ. ಪರಿಹಾರಧನ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಇನ್ನಾದರೂ ಕೂಡಲೇ ಅತಿಥಿ ಉಪನ್ಯಾಸಕರ ಸಂಕಷ್ಟಕ್ಕೆ ಧಾವಿಸಿ ಉಪನ್ಯಾಸಕರ ಮಾನವೀಯ ಬೇಡಿಕೆಗಳನ್ನು ಬಗೆಹರಿಸಲು ಮುಂದಾಗದಿದ್ದರೆ ವಿನೂತನ ಮಾದರಿಯ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಸಿದ್ಧವಾಗಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷಡಾ| ಎಸ್. ಸೋಮಶೇಖರ ಶಿಮೊಗ್ಗಿ,ಪ್ರಮುಖರಾದ ಸತೀಶ್, ಧನಂಜಯ, ರೂಪ,ಗಣಪತಿ, ಶಿವಪ್ರಸಾದ್, ವಿವಿಧ ಸಂಘಟನೆಗಳ ಮುಖಂಡರಾದ ಹಾಲೇಶಪ್ಪ, ನಾಗರಾಜ್‌ಕಾಗಿನೆಲ್ಲಿ, ಮಂಜುನಾಥ್, ಹಾಲೇಶ್ ತಮ್ಮಡಿಹಳ್ಳಿ ಮತ್ತಿತರರು ಇದ್ದರು.