Advertisement

ರೈತರಲ್ಲಿ ಸಚಿವ ಖೂಬಾ ಕ್ಷಮೆ ಕೇಳಲು ಆಗ್ರಹಿಸಿ ಪ್ರತಿಭಟನೆ

12:18 PM Jun 18, 2022 | Team Udayavani |

ಕಲಬುರಗಿ: ರೈತರ ಬಗ್ಗೆ ಬೇಜವಾಬ್ದಾರಿ ತೋರಿದ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕು, ಕೂಡಲೇ ಅವರು ರೈತರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ಮಾಡಿದರು.

Advertisement

ಈ ವೇಳೆ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಜಿಲ್ಲೆಯಾದ್ಯಂತ ಮುಂಗಾರು ಬಿತ್ತನೆ ಸಲುವಾಗಿ ರೈತರು ರಸಗೊಬ್ಬರ ಕೊರತೆ ಎದ್ದು ಕಾಣುತ್ತಿದೆ. ಗೊಬ್ಬರಕ್ಕಾಗಿ ರೈತರು ಪರದಾಡುವಂತಾಗಿದೆ. ಎಲ್ಲ ರೈತರಿಗೆ ಗೊಬ್ಬರ ಕೊಡಿಸುವುದನ್ನು ಬಿಟ್ಟು ಉಡಾಫೆ ಮಾತಾಡಿ, ರೈತರಿಗೆ ನಿಂದಿಸುವುದನ್ನು ಮಾಡಿರುವ ಕೇಂದ್ರ ಸಚಿವ ಭಗವಂತ ಖೂಬಾ ವರ್ತನೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರನ್ನು ಹೆದರಿಸುವ ರೀತಿ ಯಲ್ಲಿ ಎಚ್ಚರಿಕೆ ನೀಡಿದ ಸಂಭಾ ಷಣೆಯ ಆಡಿಯೋ ವೈರಲ್‌ ಆಗಿದ್ದು, ಕೇಂದ್ರ ಸಚಿವ ಭಗವಂತ ಖೂಬಾ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದು ರೈತರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಿದ್ಧಯ್ನಾ ಅಲ್ಲಾಪೂರ, ಶಿವಕುಮಾರ ಆರ್‌. ಪಾಟೀಲ, ರಾಮಲಿಂಗ ಕೆ, ಪರಮೇಶ್ವರ ಜಮಾದಾರ, ಶರಣಬಸಪ್ಪಾ ಪೋಲಾ, ರೇವಣಸಿದ್ಧಪ್ಪ ಧರಿ, ಭೀಮಾಶಂಕರ, ಗಂಗಮ್ಮ ಪಾಟೀಲ, ಗುರುಬಾಯಿ ಮಠಪತಿ, ಜಗದೇವಿ ಹರಕಂಚಿ, ಅಂಜಮ್ಮ ಪರೀಟ, ಕಾಶಿಬಾಯಿ ಜಮಾದಾರ, ಸುಶಿಲಾಬಾಯಿ ಚವ್ಹಾಣ, ಜಗದೇವಿ ನರಸಿಂಘ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next