Advertisement

ದೆಹಲಿಯ ಪ್ರತಿಭಟನೆಕಾರರು ರೈತರಲ್ಲ, ಅರ್ಬನ್ ನಕ್ಸಲರು: ಶೋಭಾ ಕರಂದ್ಲಾಜೆ

12:12 PM Dec 22, 2020 | keerthan |

ಕಾರ್ಕಳ: ಕೇಂದ್ರದ ಪೌರತ್ವ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ ‘ತುಕುಡೇ ಗ್ಯಾಂಗ್’ ಇಂದು ಕೇಂದ್ರದ ಕೃಷಿ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ನಿರತರೆಲ್ಲ ರೈತರಲ್ಲ, ಅರ್ಬನ್ ನಕ್ಸಲರು ಎಂದು ಉಡುಪಿ ಮತ್ತು ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ ವಾಗ್ಧಾಳಿ ನಡೆಸಿದರು.

Advertisement

ಕಾರ್ಕಳದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಹರಿಯಾಣ ಮತ್ತು ಪಂಜಾಬಿನ ರೈತರು ದೆಹಲಿಯಲ್ಲಿ ರೈತ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರೆಲ್ಲ ನಿಜವಾದ ರೈತರಲ್ಲ ಎಂದರು.

ಇದನ್ನೂ ಓದಿ:ಪ್ರಧಾನಿ ಮೋದಿಗೆ ಪ್ರತಿಷ್ಠಿತ “ಲೀಜನ್ ಆಫ್ ಮೆರಿಟ್ ಪ್ರಶಸ್ತಿ” ನೀಡಿ ಗೌರವಿಸಿದ ಟ್ರಂಪ್

ರಾಜ್ಯದಲ್ಲಿ ಕೂಡ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಅಧಿವೇಶನ ಸಂದರ್ಭ ಹೋರಾಟ ನಡೆಸಿದ್ದರು. ಕೋಡಿಹಳ್ಳಿ ನೇತೃತ್ವದ ರೈತ ಹೋರಾಟ ರಾಜಕೀಯ ಪ್ರೇರಿತ. ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್, ಸಿದ್ಧರಾಮಯ್ಯ ಇವರೆಲ್ಲ ಸೇರಿಕೊಂಡು ಸರಕಾರದ ವಿರುದ್ಧ ನಡೆಸಿದ ಪಿತೂರಿ ಎಂದು ಸಂಸದೆ ಹೇಳಿದರು.

ಶಾಸಕ ವಿ.ಸುನೀಲ್ ಕುಮಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಉಪಾಧ್ಯಕ್ಷೆ ಪಲ್ಲವಿ, ಅನಂತಕೃಷ್ಣ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next