ಶಿಡ್ಲಘಟ್ಟ: ಬೆಳಗಾವಿಯಲ್ಲಿ ಎಂಇಎಸ್, ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ಖಂಡಿಸಿ ನಗರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಸಮಾನ ಮನಸ್ಕರ ಒಕ್ಕೂಟ ಪ್ರತಿಭಟನೆ ನಡೆಸಿತು.
ನಗರದ ಸಾರಿಗೆ ಬಸ್ ನಿಲ್ದಾಣದಿಂದ 150 ಅಡಿ ಉದ್ದದ ಕನ್ನಡ ಧ್ವಜದೊಂದಿಗೆಪ್ರತಿಭಟನಾ ಮೆರವಣಿಗೆ ನಡೆಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು,ಎಂಇಎಸ್ ಮತ್ತು ಶಿವಸೇನೆಯಪುಂಡಾಟಿಕೆಯನ್ನು ತೀವ್ರವಾಗಿ ಖಂಡಿಸಿಸಂಘಟನೆಗಳನ್ನು ನಿಷೇಧಿ ಸಿ ಕಾನೂನುಕ್ರಮ ಜರುಗಿಸಬೇಕೆಂದು ತಹಶೀಲ್ದಾರ್‌ಕಚೇರಿ ಮೂಲಕ ಸಿಎಂಗೆ ಮನವಿಸಲ್ಲಿಸಲಾಯಿತು.
ಸಮಾನ ಮನಸ್ಕರ ಒಕ್ಕೂಟದ ಅಧ್ಯಕ್ಷ ರಾಮಾಂಜಿ ಮಾತನಾಡಿ, ಬೆಳಗಾವಿವಿಧಾನಸಭಾ ಅ ಧಿವೇಶನದ ಸಮಯದಲ್ಲಿ ನಾಡ ದ್ರೋಹಿ ಎಂಇಎಸ್,ಶಿವಸೇನೆ ಕನ್ನಡನಾಡಿನ ಹೆಮ್ಮೆಯಸ್ವಾಭಿಮಾನ ಪ್ರತೀಕವಾದ ಕನ್ನಡ ಧ್ವಜಕ್ಕೆ ಬೆಕ್ಕಿ ಹಚ್ಚಿದ್ದು, ಸ್ವಾತಂತ್ರ್ಯ ಹೋರಾಟಗಾರಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಭಗ್ನಗೊಳಿಸಿದ್ದಾರೆ. ಜಗಜ್ಯೋತಿಬಸವೇಶ್ವರ ಭಾವಚಿತ್ರ ವಿರೋಪಗೊಳಿಸಿ,ಶಾಂತಿಪ್ರಿಯ ಕನ್ನಡಿಗರ ಸ್ವಾಭಿಮಾನಕ್ಕೆಧಕ್ಕೆ ತಂದಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿಬೈರೇಗೌಡ ಮಾತನಾಡಿ, ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿ ವೇಶನದ ಸಮಯದಲ್ಲಿ ಎಂಇಎಸ್,ಶಿವಸೇನೆ ಕಾರ್ಯಕರ್ತರು ಕನ್ನಡಿಗರ ಭಾವನಗಳಿಗೆ ಧಕ್ಕೆ ತರುವ ಕೆಲಸವನ್ನುಮಾಡಿದ್ದಾರೆ. ಸರ್ಕಾರ ಈ ಕೂಡಲೇ ಎರಡೂ ಸಂಘಟನೆಯನ್ನು ನಿಷೇಧಿಸಿ ಸಾಮರಸ್ಯವನ್ನು ಹಾಳು ಮಾಡಲು ಮತ್ತು ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಪ್ರಧಾನಿಗೆ ಸಿಎಂ ಒತ್ತಾಯಿಸಬೇಕೆಂದರು.
ಸಂಘಟನೆ ಪದಾಧಿಕಾರಿಗಳಾದ ಅಫ್ರಿದ್‌ಪಾಷ, ರಾಮಾಂಜಿ, ರೈತ ಸಂಘಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷಬೆಳ್ಳೂಟಿ ಮುನಿಕೆಂಪಣ್ಣ, ಭಕ್ತರಹಳ್ಳಿ ಪ್ರತೀಶ್, ಚೀಮನಹಳ್ಳಿ ಕೆಂಪಣ್ಣ, ವೀರಾಪುರ ಮುನಿನಂಜಪ್ಪ, ಟಿಪ್ಪು ಸೆಕ್ಯುಲರ್ ಸೇನೆಯ ಮೌಲಾ, ಬೀದಿಬದಿವ್ಯಾಪಾರಿ ಗಳ ಸಂಘದ ಅಧ್ಯಕ್ಷ ಶ್ರೀರಾಮ್, ಕಾರ್ಪೇಂಟರ್ ಸಂಘದಅಧ್ಯಕ್ಷ ಪ್ರದೀಪ್, ಕರವೇ ಸಂಘಟನೆಯ ಸುನೀಲ್, ಗೊರಮಡುಗು ಮಂಜುನಾಥ್, ತಮೀಮ್ ಅನ್ಸಾರಿ, ಡಾಲಿಧೀನ್ ಸಂಸ್ಥೆಯ ಅಶೋಕ್, ವಾಸವಿ ಸಂಸ್ಥೆಯ ಗೋಪಿನಾಥ್ ಉಪಸ್ಥಿತರಿದ್ದರು.