Advertisement

ಕಬ್ಬಿಗೆ  ಬೆಂಬಲ ಬೆಲೆಗಾಗಿ 22ರಂದು ಪ್ರತಿಭಟನೆ

02:47 PM Aug 09, 2022 | Team Udayavani |

ಕಲಬುರಗಿ: ಕೇಂದ್ರ ಸರಕಾರ ಕಬ್ಬಿಗೆ ನಿಗದಿಪಡಿಸಿದ ಎಫ್‌ಆರ್‌ಪಿ ಬೆಲೆ ಅವೈಜ್ಞಾನಿಕವಾಗಿದ್ದು ಮರು ಪರಿಶೀಲಿಸಬೇಕು. ರಾಜ್ಯ ಸರಕಾರ ಎಸ್‌ಎಪಿ ಕಾನೂನಿನ ಅಡಿಯಲ್ಲಿ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಸಂಯುಕ್ತ ಕಿಸಾನ್‌ ಮೋರ್ಚಾ, ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಆ.22ರಂದು ದೆಹಲಿಯ ಸಂಸತ್‌ ಎದುರು ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ಪಾಟೀಲ್‌ ರಾಜಾಪುರ ತಿಳಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಸಕ್ತ ಸಾಲಿಗೆ ವಿಧಿಸಿರುವ 3050 ರೂ. ಬೆಂಬಲ ಬೆಲೆ ಅವೈಜ್ಞಾನಿಕವಾಗಿದೆ. ಇದು ಕಬ್ಬು ಬೆಳೆಗಾರರ ಬೆನ್ನಿಗೆ ಕೇಂದ್ರ ಸರಕಾರ ಹಾಕಿರುವ ಬರೆ. ರೈತರ ಖರ್ಚು ವೆಚ್ಚಗಳನ್ನು ಲೆಕ್ಕಾ ಹಾಕಿ ಲಾಭ ಬರುವಷ್ಟಾದರೂ ಕಬ್ಬು ದರ ನಿಗದಿ ಮಾಡಬೇಕಿತ್ತು. ಆದರೆ, ಅದನ್ನು ಮಾಡುವ ಗೋಜಿಗೆ ಕೇಂದ್ರ ಸರಕಾರ ಹೋಗದೇ ಇರುವುದು ಸೇಡಿನ ಕ್ರಮವಾಗಿದೆ. ರಾಜ್ಯ ಸರಕಾರವಾದರೂ ಕಬ್ಬು ಬೆಳೆಗಾರರ ಬೆಂಬಲಕ್ಕೆ ಬರಬೇಕಿತ್ತು. ತನ್ನ ಪಾಲಿನ ಎಸ್‌ ಎಪಿ ಬೆಲೆಯನ್ನಾದರೂ ಹೆಚ್ಚಿಸಬೇಕಿತ್ತು. ಕೂಡಲೇ ಸರಕಾರ ವೈಜ್ಞಾನಿಕ ಸಮೀಕ್ಷೆ ನಡೆಸಿ ಅತಿವೃಷ್ಟಿ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಜಿಎಸ್‌ಟಿ ರದ್ದು ಮಾಡಿ: ರೈತರ ಮೊಸರು, ಮಜ್ಜಿಗೆ, ಕೃಷಿ ಉಪಕರಣಗಳು, ಹನಿ ನೀರಾವರಿ ಉಪಕರಣಗಳು, ಕೀಟನಾಶಕಗಳ ಮೇಲೆ ವಿ ಸಿರುವ ಜಿಎಸ್‌ಟಿ ರದ್ದುಗೊಳಿಸಬೇಕು. ಯೂರಿಯಾ, ಡಿಎಪಿ, ಎಂಒಪಿ ರಸಗೊಬ್ಬರ ಬೆಲೆ ರೈತರಿಗೆ ಕೊಂಡುಕೊಳ್ಳದಷ್ಟು ಹೆಚ್ಚಾಗಿದೆ. ಬೆಲೆ ಇಳಿಕೆಗಾಗಿ ಸರಕಾರ ಕ್ರಮ ಕೈಗೊಳ್ಳಬೇಕು. ಫಸಲ್‌ ಬಿಮಾ ಯೋಜನೆಯ ಹಣ ರೈರಿಗೆ ಹೆಚ್ಚಾಗುತ್ತಿದೆ. ರೈತರಿಗೆ ಸಮರ್ಪಕ ಅನುಕುಲವಾಗುವಂತೆ ತಿದ್ದುಪಡಿ ತರಬೇಕು ಮತ್ತು ರಸಗೊಬ್ಬುರದ ಅಭಾವ ತಪ್ಪಿಸಿ ಪೂರೈಕೆಗೆ ಮಾಡಬೇಕು ಎಂದರು.

ರಸಗೊಬ್ಬರದ ಪೊಟ್ಯಾಶ್‌ ಚೀಲಕ್ಕೆ ಹೆಚ್ಚುವರಿಯಾಗಿ 830 ರೂ.ರಿಂದ 1700ರೂ ವರೆಗೆ ಬೆಲೆ ಎರಿಕೆಯಾಗಿದೆ. ಡಿಎಪಿ ಬೆಲೆ ರೂ.1050ರಿಂದ 1450ರೂಗೆ ಬೆಲೆ ಏರಿಕೆಯಾಗಿದೆ. ಇದು ಕಬ್ಬು ಬೆಳೆಗಾರರಿಗೆ ಮಾಡಿದ ಅನ್ಯಾಯ. ಕೂಡಲೇ ದರ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರಕಾರ ಸಕ್ಕರೆ ಉದ್ದಿಮೆದಾರರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಕಳೆದ ಒಂದು ತಿಂಗಳಿಂದ ಜಿಲ್ಲಾ ಧಿಕಾರಿ ಕಚೇರಿ, ತಾಲೂಕು ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರಕಾರಕ್ಕೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರೂ, ಜಿಲ್ಲಾಡಳಿತ ಮತ್ತು ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

Advertisement

ಸುದ್ದಿಗೋಷ್ಠಿಯಲ್ಲಿ ಬಸವರಾಜ ಅಂಕಲಗಿ, ರಮೇಶ ಹೂಗಾರ, ಶರಣು ಬಿಲ್ಲಾಡ, ನಾಗೇಂದ್ರಪ್ಪ ದೇಶಮುಖ, ಶಾಂತವೀರ ಕಲಬುರಗಿ, ನರಹರಿ ಪಾಟೀಲ್‌, ರಾಜಶೇಖರ ಪೆದ್ದಿ, ಕರಬಸಪ್ಪ ಇತರರಿದ್ದರು.

ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರಕಾರ ಉದ್ಯಮಿಗಳ ರೂ.9.60 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಇದನ್ನು ಸದನದಲ್ಲಿ ಭಾರಿ ಸಾಧನೆ ಎನ್ನುವಂತೆ ಹೇಳಿಕೊಂಡಿದೆ. ಕೊರೊನಾ ಲಾಕ್‌ಡೌನ್‌ ಸಮಸ್ಯೆಯಿಂದ ಬಳಲಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾನೆ. ಅವನ ಸಾಲ ಕೇವಲ 5.50 ಲಕ್ಷ ಕೋಟಿ ಇದನ್ನು ಮನ್ನಾ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ. ಇದು ನಮ್ಮ ಜನರಿಗೆ ಅರ್ಥವಾಗುತ್ತಿಲ್ಲವೇ? ರೈತ ಅನ್ನ ಬೆಳೆದರೆ ಮಾತ್ರವೇ ಉಣ್ಣಲು ಸಾಧ್ಯವಲ್ಲವೇ? -ಜಗದೀಶ ಪಾಟೀಲ್‌ ರಾಜಾಪುರ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next