Advertisement
ಸ್ಥಳಕ್ಕೆ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ, ಸಚಿವ ಶ್ರೀರಾಮುಲು, ಶಾಸಕ ತುಕಾರಾಂ ಸೇರಿದಂತೆ ಅನೇಕ ನಾಯಕರುಗಳು ಭೇಟಿ ನೀಡಿ ಭರವಸೆ ನೀಡಿ ಹೋಗಿದ್ದಾರೆ.
Related Articles
Advertisement
ಸರ್ಕಾರ ಕೂಡಲೇ ಕಾರ್ಖಾನೆಗಳನ್ನು ಸ್ಥಾಪಿಸಬೇಕು ಇಲ್ಲವೇ ನಮ್ಮ ಜಮೀನುಗಳನ್ನು ವಾಪಸ್ಸು ನೀಡಬೇಕು. ಅಲ್ಲಿಯವರೆಗೆ ಮಾಸಿಕ 25 ಸಾವಿರ ಉದ್ಯೋಗ ಭತ್ಯೆ ನೀಡಬೇಕೆಂದು ಸರ್ಕಾರಕ್ಕೆ ಮತ್ತು ಕಂಪನಿಗಳಿಗೆ ಒತ್ತಾಯ ಕೂಡ ಮಾಡುತ್ತಿದ್ದಾರೆ.
ಅಲ್ಲದೆ ಜಮೀನುಗಳ ರೈತರಿಗೆ ಕಾರ್ಖಾನೆ ಗಳಲ್ಲಿ ಉದ್ಯೋಗ ನೀಡುತ್ತೇವೆ ಎಂದು ಹೇಳಿ ಕಡಿಮೆ ವೆಚ್ಚದಲ್ಲಿ ಕಂಪನಿ ಮಾಲೀಕರು ರೈತರ ಜಮೀನು ಗಳನ್ನು ವಶಪಡಿಸಿಕೊಂಡು 13 ವರ್ಷಗಳು ಕಳೆದರೂ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಕಂಪನಿಗಳು ಬಂದ್ ಆಗಿರುವುದರಿಂದ ರೈತರ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ, ಇದನ್ನೇ ನಂಬಿಕೊಂಡ ರೈತರು ಬೀದಿಗೆ ಬಂದಿದ್ದಾರೆ. ಒಂದು ಒತ್ತು ಊಟಕ್ಕೂ ಇಲ್ಲದೆ ಪರದಾಡುತ್ತಿದ್ದಾರೆ. ಇನ್ನೂ ಕೆಲ ರೈತರು ಇದರಿಂದ ಮೋಸ ಹೋಗಿ ಜೀವನ ನಿರ್ವಹಣೆಗೆ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿ ಜೀವನ ಮಾಡುವಂತ ಪರಿಸ್ಥಿತಿ ಬಂದೋಗಿದೆ. ಇದರ ಬಗ್ಗೆ ಅನೇಕ ವರ್ಷ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿದರು ಸರಕಾರ ಸ್ಪಂದಿಸಿದೆ ಮತ್ತು ಮಾಲೀಕರು ಇತ್ತಕಡೆ ತಲೆ ಹಾಕದೆ ಮೌನವಾಗಿದ್ದರೆ ಎಂದು ಆಕ್ರೋಶ ಹೊರಹಾಕಿದ್ದರು.
ಸುಮಾರು 60 ದಿನದಿಂದ ಪ್ರತಿಭಟನೆ ಮಾಡಿದರು ಇದಕ್ಕೆ ಯಾರು ಕೂಡ ಇತ್ತಕಡೆ ತಲೆ ಹಾಕದೆ ಇರುವುದು ದುರಂತವಾಗಿತ್ತು.
ಇದಕ್ಕೆ ಸಂಬಂದಿಸಿದ ಇಲಾಖೆ ಅಧಿಕಾರಿಗಳು, ಹಿರಿಯ ಅಧಿಕಾರಿಗಳು ಬಂದು ಸೂಕ್ತ ಭರವಸೆ ನೀಡುವವರಿಗೂ ಪ್ರತಿಭಟನೆ ಮಾತ್ರ ಹಿಂಪಡಿಯುವುದಿಲ್ಲ ಎಂದು ಎಚ್ಚರಿಕೆ ಕೂಡ ನೀಡಿದ್ದರು.
ಸದ್ಯ ಈಗ ಪ್ರತಿಭಟನೆಯ ಮುಖಂಡರು ಹಾಗೂ ಸಂತ್ರಸ್ತರು ವಿಧಾನಸೌಧದ ಬಾಗಿಲು ತಟ್ಟಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಸಂಘಟನೆ ಮುಖಂಡರು ಹಾಗೂ ಸಂತ್ರಸ್ತರು ಬೆಂಗಳೂರು ವಿಧಾನಸೌದಕ್ಕೆ ತೆರಳಿ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸಚಿವರುಗಳು ಸಂಬಂದಿಸಿದ ಅಧಿಕಾರಿಗಳು ಸೂಕ್ತ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ನೋಟಿಸ್ ಜಾರಿ ಮಾಡಿ ರೈತರ ಮತ್ತು ಸರಕಾರಿ ಜಮೀನು ಗಳನ್ನು ನೀಡಿದರು ಯಾಕೆ ಕಾರ್ಖಾನೆ ಗಳು ಸ್ಥಾಪನೆ ಗೊಂಡಿಲ್ಲ ಎಂಬುವುದರ ಬಗ್ಗೆ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಸರಕಾರದ ನಿಯಮವಳಿ ಪ್ರಕಾರ ಪ್ರತಿ ಎಕರೆಗೆ 30 ಲಕ್ಷದ 20 ಸಾವಿರ ನಿಗದಿ ಮಾಡಲಾಗಿದೆ ಆದರೆ ರೈತರು ಕೇವಲ 8ರಿಂದ 9 ಲಕ್ಷದ ವರೆಗೆ ಮಾರಾಟ ಮಾಡಿರುವುದು ಸರಕಾರದ ನಿಯಮ ಉಲ್ಲಂಘನೆ ಮಾಡಿದಂತಾಗಿದೆ. ಸದ್ಯ ನಿಮಗೆ ಅಲ್ಪ ನ್ಯಾಯ ದೊರಕಬೇಕಾದರೆ ಇದರ ಮದ್ಯೆ ನ್ಯಾಯಲಯ ಪ್ರವೇಶಿಸಿದರೆ ಹೊಸ ದರದ ಬೆಲೆ ನಿಮಗೆ ಸಿಗಬಹುದು ಇದನ್ನು ಬಿಟ್ಟರೆ ಭೂಮಿ ಮರು ಪಡಿಯುವುದಕ್ಕೆ ಮತ್ತು ನೂತನ ಹೊಸ ದರ ವನ್ನು ಮಾಡುವುದಕ್ಕೆ ಅವಕಾಶ ಸಿಗುವುದು ಕಷ್ಟ ಹಾಗೆ ಇದರ ಬಗ್ಗೆ ಸಂಬಂದಿಸಿದ ಅಧಿಕಾರಿಗಳ ಮತ್ತು ಹಿರಿಯ ಅಧಿಕಾರಿಗಳ ಅತ್ತಿರ ಮಾತನಾಡಿ ನಿಮಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.