Advertisement

ಮುಂದುವರಿದ ಉಪವಾಸ ಸತ್ಯಾಗ್ರಹ

05:01 PM Oct 14, 2020 | Suhan S |

ಸುರಪುರ: ಆಸ್ತಿ ದಾಖಲೆ ನೀಡುವಲ್ಲಿ ಕಂದಾಯ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ರಂಗಂಪೇಟೆಯ ಅಮರಣ್ಣ ಸಜ್ಜನ್‌ಕುಟುಂಬದವರು ತಹಶೀಲ್ದಾರ್‌ಕಚೇರಿ ಎದುರು ಆರಂಭಿಸಿರುವ ಉಪವಾಸ ಸತ್ಯಾಗ್ರಹ 10ನೇ ದಿನಕ್ಕೆ ಮುಂದುವರಿದಿದೆ.

Advertisement

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾ ಧಿಕಾರಿಗಳು, ಕಾರ್ಯಕರ್ತರುಮಂಗಳವಾರ ಪ್ರತಿಭಟನೆ ಬೆಂಬಲಿಸಿಮತ್ತಷ್ಟು ಬಲ ತುಂಬಿದರು. ಕಚೇರಿ ಎದುರು ಕೂಡಬೇಡಿ. ವಾಹನನಿಲಗಡೆ ಮತ್ತು ಕಚೇರಿಗೆ ಬರುವವರಿಗೆತೊಂದರೆಯಾಗುತ್ತದೆ. ಬೇರೆಡೆಕುಳಿತುಕೊಳ್ಳಿ ಎಂದು ತಹಶೀಲ್ದಾರ್‌ಹೇಳಿದ್ದು ಪ್ರತಿಭಟನಾಕಾರರನ್ನುಕೆರಳುವಂತೆ ಮಾಡಿತು.ಈ ವೇಳೆ ಪ್ರತಿಭಟನಾಕಾರರುಮತ್ತು ತಹಶೀಲ್ದಾರ್‌ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸೂಕ್ತದಾಖಲಾತಿ ನೀಡುವವರೆಗೂ ಸ್ಥಳದಿಂದಒಂದಿಚ್ಚು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ ಮಾತನಾಡಿ, ಆಸ್ತಿ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಆಸ್ತಿಗೆ ಸಂಬಂಧಿಸಿದದಾಖಲೆ ನೀಡುವಂತೆ ಸಜ್ಜನ್‌ ಕುಟುಂಬದವರು ವರ್ಷದಿಂದ ಮನವಿ ಮಾಡುತ್ತಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ದಾಖಲೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಮಹಾದೇವಿ ಬೇವಿನಾಳಮಠ ಮಾತನಾಡಿ, ಎಸಿ, ಡಿಸಿ ಮತ್ತುಪ್ರಾದೇಶಿಕ ಆಯುಕ್ತರಿಗೂ ಈ ಕುರಿತು ಮನವಿ ಮಾಡಿದ್ದಾರೆ. ದಾಖಲೆಕೊಡುವಂತೆ ಅವರೂ ಆದೇಶಿಸಿದ್ದಾರೆ.ಆದರೆ ಕಂದಾಯ ಇಲಾಖೆಯವರುಯಾವುದೋ ಒತ್ತಡಕ್ಕೆ ಮಣಿದು ದಾಖಲೆನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.

ತಾಲೂಕು ಅಧ್ಯಕ್ಷ ಹಣಮಂತ್ರಾಯಮಡಿವಾಳರ ಮಾತನಾಡಿ, ಸಜ್ಜನ್‌ ಕುಟುಂಬದ ಪ್ರತಿಭಟನೆಗೆ ರೈತ ಸಂಘದ ಬೆಂಬಲವಿದೆ. ಇನ್ನೆರಡು ದಿನಗಳಲ್ಲಿ ದಾಖಲೆ ನೀಡದಿದ್ದರೆ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.ಕಟುಂಬದಲ್ಲಿ 9 ಜನರಿದ್ದು ಪ್ರತಿ ದಿನ ಮೂರು ಜನರಂತೆ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿದ್ದೇವೆ.ಕಳೆದ ಸೋಮವಾರದಿಂದಪ್ರತಿಭಟನೆ ನಡೆಯುತ್ತಿದೆ. ಆರೋಗ್ಯ ಇಲಾಖೆಯವರು ಪ್ರತಿ ದಿನ ಆರೋಗ್ಯ ತಪಾಸಣೆ ಮಾಡುತ್ತಾರೆ. ಪೊಲೀಸರು ರಕ್ಷಣೆ ನೀಡಿದ್ದಾರೆ.

Advertisement

ಆದರೆ ಕಂದಾಯ ಇಲಾಖೆಯವರು ಪ್ರತಿಭಟನೆಗೆ ಸ್ಪಂದಿಸುತ್ತಿಲ್ಲ. ಪ್ರತಿಭಟನೆಕೈ ಬಿಡುವಂತೆ ಒತ್ತಡ ಹೇರುತ್ತಿದ್ದಾರೆ. ದಾಖಲೆ ಸಿಗುವವರೆಗೆ ಸತ್ಯಾಗ್ರಹ ಹಿಂಪಡೆಯುವುದಿಲ್ಲ ಎಂದು ಸಜ್ಜನ್‌ ಕಟುಂಬದ ಹಿರಿಯ ಅಮರಣ್ಣ ಸಜ್ಜನ್‌ ತಿಳಿಸಿದರು.

ಈ ವೇಳೆ ಸಜ್ಜನ್‌ ಕುಟುಂಬದ ರವಿಕುಮಾರ, ಜಗದೀಶ, ಅಶೋಕ ಸೇರಿದಂತೆ ರೈತ ಸಂಘದ ಪದಾಕಾಧಿರಿಗಳು, ಮಹಿಳಾ ಘಟಕದ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next