Advertisement

ಉಗ್ರರ ದಾಳಿ ಖಂಡಿಸಿ ವಕೀಲರ ಪ್ರತಿಭಟನೆ

11:03 AM Feb 17, 2019 | Team Udayavani |

ಕಡೂರು: ಜಮ್ಮು-ಕಾಶ್ಮೀರದ ಪುಲ್ವಾಮಾ ಬಳಿ ಸಿಆರ್‌ ಪಿಎಫ್‌ ಯೋಧರಿದ್ದ ಬಸ್‌ ಮೇಲೆ ದಾಳಿ ನಡೆಸಿ 44 ಯೋಧರ ಸಾವಿಗೆ ಕಾರಣರಾದವರನ್ನು ಕೂಡಲೆ ಬಂಧಿಸಿ, ಉಗ್ರಗಾಮಿಗಳಿಗೆ ಒತ್ತೇಜನ ನೀಡುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಒತ್ತಾಯಿಸಿ ತಾಲೂಕು ವಕೀಲರ ಸಂಘವು ಕಲಾಪಗಳನ್ನು ಬಹಿಷ್ಕರಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ಕೆಎಲ್‌ವಿ ವೃತ್ತದಲ್ಲಿ ಶನಿವಾರ ಮಾನವ ಸರಪಳಿ ನಿರ್ಮಿಸಿ ಕ್ಯಾಂಡಲ್‌ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು. ಪೈಶಾಚಿಕ ಕೃತ್ಯ ಖಂಡಿಸಿದ ವಕೀಲರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೈನಿಕರ ರಕ್ಷಣೆ ಮತ್ತು ಹೆಚ್ಚಿನ ಅಧಿಕಾರ ನೀಡಬೇಕೆಂದು ಅಗ್ರಹಿಸಿದರು. ವಕೀಲರ ಸಂಘದ ಅಧ್ಯಕ್ಷ ಡಿ.ಎನ್‌.ಪ್ರಕಾಶ ಮಾತನಾಡಿ, ಇದೊಂದು ಆತ್ಯಂತ ದುರದೃಷ್ಟಕರ ಘಟನೆ. ನೂರಾರು ಕೋಟಿ ಜನರ ರಕ್ಷಿಸುವ ಸೈನಿಕರು ತಮ್ಮ ಜೀವವನ್ನು ಒತ್ತೆ ಇಟ್ಟು ಕಾರ್ಯನಿರ್ವಹಿಸುತ್ತಾರೆ. ಪಾಕಿಸ್ತಾನವು ಪದೇ ಪದೇ ತಂಟೆಗೆ ಬರುತ್ತದೆ. ಇದಕ್ಕೆ ಇತಿಶ್ರೀ ಹಾಡಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಕೀಲರು ಸಂಗ್ರಹಿಸಿದ್ದ 50 ಸಾವಿರ ರೂ.ಗಳನ್ನುಮಂಡ್ಯ ಜಿಲ್ಲೆಯ ಹುತಾತ್ಮ ಯೋಧ ಗುರು ಅವರ ಕುಟುಂಬಕ್ಕೆ ನೀಡಲಾಗುವುದು ಎಂದು ತಿಳಿಸಿದರು.
 
ವಕೀಲರು ಕೆಎಲ್‌ವಿ ವೃತ್ತದಿಂದ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಶೇಷಪ್ಪ, ಕಾರ್ಯದರ್ಶಿ ದಾದ ಕಲಂದರ್‌, ಪಿ.ಬಿ. ಶ್ರೀನಿವಾಸ, ಎಂ, ಸೋಮಶೇಖರ್‌, ಹಿರಿಯ ವಕೀಲರಾದ ಅಣ್ಣಪ್ಪ, ಜಯಣ್ಣ, ಗಿರೀಶ್‌, ರಾಜು, ರಾಜಶೇಖರ್‌ ಮಹಿಳಾ ವಕೀಲರು, ಯುವ ವಕೀಲರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next