ಕುರುಗೋಡು: ಕೋಳೂರಿನಲ್ಲಿ ಮೂರು ದಿನಗಳ ಹಿಂದೆ ಯುವಕನೊಬ್ಬನ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳನ್ನು ಬಳಸಿದ ವಿರುದ್ಧ ಪಿಎಸ್ ಐ ಮಣಿಕಂಠ ಅವರ ವಿರುದ್ಧ ಗ್ರಾಮದ ಮುಖಂಡರು ಕುರುಗೋಡು ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು. ಈ ನಡುವೆ ಸರಕಾರ ಪಿ ಎಸ್ ಐ ಮಣಿಕಂಠ ಅವರನ್ನು ಬಳ್ಳಾರಿಗೆ ವರ್ಗಾವಣೆ ಮಾಡಿದೆ.
ಮಾಜಿ ಶಾಸಕ ಸುರೇಶ್ ಬಾಬು ಜನ್ಮದಿನದ ಅಂಗವಾಗಿ ಹಾಕಲಾಗಿದ್ದ ಬ್ಯಾನರ ನ್ನು ಕೆಲ ದುಷ್ಕರ್ಮಿಗಳು ಹರಿದಿದ್ದರು, ಅದರಲ್ಲಿ ಈರಣ್ಣ ಎಂಬ ಯುವಕ ಇದ್ದಾನೆ ಎಂದು ಶಂಕಿಸಿ ಪಿಎಸ್ಐ ಮಣಿಕಂಠ ಜನರ ಮಧ್ಯದಲ್ಲೇ ಹಿಗ್ಗಾಮುಗ್ಗಾ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಪಿ ಎಸ್ ಐ ಮಾತುಗಳಿಂದ ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ತಂದಂತಾಗಿದೆ. ಅಲ್ಲದೆ ತೆಲೆ ತಗ್ಗಿಸುವ ಪದಗಳನ್ನು ಬಳಕೆ ಮಾಡಿದ್ದಾರೆ. ಇಂತಹ ಮಾತುಗಳು ಮಾತನಾಡುವುದಕ್ಕೆ ಯಾರು ಅವಕಾಶ ಕೊಟ್ಟಿದ್ದಾರೆ. ಇವರೇನು ಅಧಿಕಾರಿಗಳಾ ಅಥವಾ ಗೂಂಡಾಗಳಾ ಎಂದು ಪ್ರತಿಭಟನಾ ಕಾರರು ಪ್ರಶ್ನಿಸಿದರು. ಇದಲ್ಲದೆ ಪಿ ಎಸ್ ಐ ಮಣಿಕಂಠ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮಣಿಕಂಠ ಅವರು ದರ್ಪ ತೋರಿರುವುದು ಸರಿಯಲ್ಲ ಅವರ ಮೇಲೆ ಪ್ರಕರಣ ದಾಖಲಿಸಿ ಸೇವೆಯಿಂದ ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು.
ಈಗಾಗಲೇ ಕುರುಗೋಡು ಠಾಣೆಯಲ್ಲಿ ಸೇವೆ ಸಲ್ಲಿಸಿದ ಕೃಷ್ಣಮೂರ್ತಿ, ಮೌನೇಶ್ ರಾಥೋಡ್, ಇವರು ಕೂಡ ಜನ ಸಾಮಾನ್ಯರ ಮೇಲೆ ಹಲ್ಲೆ ಮಾಡಿ ಕೇಸ್ ಹಾಕಿಸಿಕೊಂಡು ಬೇರೆ ಕಡೆ ಹೋಗಿದ್ದಾರೆ ಇದಲ್ಲದೆ ಮತ್ತೆ ಇದೆ ಮೂರನೇ ಬಾರಿ ಮಣಿಕಂಠ ಸೇರಿ ಇವರಿಗೇನು ಮೇಲಾಧಿಕಾರಿಗಳು ಇಲ್ವವೇ? ತಮ್ಮದೇಯಾದ ಅವಮಾನಿಯ ದರ್ಪ ಗಳನ್ನು ತೋರುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.