Advertisement

ತ್ರಿಪುರಾ ಘಟನೆ ಖಂಡಿಸಿ ಪ್ರತಿಭಟನೆ

01:48 PM Nov 13, 2021 | Team Udayavani |

ವಾಡಿ: ತ್ರಿಪುರಾದಲ್ಲಿ ಮುಸ್ಲಿಂ ಜನಾಂಗದ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಮುಸ್ಲಿಂ ಯುನೈಟೆಡ್‌ ಫ್ರಂಟ್‌ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್‌ ಮಾಡಿ, ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌ ವೃತ್ತದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

Advertisement

ತ್ರಿಪುರಾ ರಾಜ್ಯದಲ್ಲಿ ಮುಸ್ಲಿಮರ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ನಡೆದಿವೆ. ಮುಸ್ಲಿಂ ಮಹಿಳೆಯರ ಮೇಲೆ ಹಲ್ಲೆಗಳು ನಡೆದಿವೆ. ಈ ಹಲ್ಲೆ, ದಾಳಿಗೆ ಕಾರಣವಾದವರ ಮೇಲೆ ಎಫ್‌ಐಆರ್‌ ದಾಖಲಿಸಿಕೊಂಡು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಹಲ್ಲೆ ಮತ್ತು ದೌರ್ಜನ್ಯಕ್ಕೆ ಒಳಗಾದ ಮುಸ್ಲಿಂ ಕುಟುಂಬಗಳಿಗೆ ಅಲ್ಲಿನ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಸಮುದಾಯಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿ ನಾಲವಾರ ನಾಡಕಚೇರಿ ಉಪ ತಹಶೀಲ್ದಾರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಮುಸ್ಲಿಂ ಸಮಾಜದ ಮುಖಂಡರಾದ ರಹೆಮಾನ ಖುರೇಶಿ, ಅಶ್ರಫ್‌ ಖಾನ್‌, ಅಬ್ದುಲ್‌ ಖದೀರ, ಮಹ್ಮದ್‌ ಅಕ್ರಂ, ಶೇಖ ಅಲ್ತಾಫ್‌, ಇರ್ಫಾನ ಪಟೇಲ, ನಾಸೀರ ಹುಸೇನ, ಮಹ್ಮದ್‌ ಗೌಸ್‌, ರಾಜಾ ಪಟೇಲ, ಝಹೂರ್‌ ಖಾನ್‌, ಅಬ್ದುಲ್‌ ಗನಿ, ರಿಯಾಜ್‌ ಪಟೇಲ, ಶಬ್ಬಿರ್‌ ಅಹ್ಮದ್‌, ಮಝರ್‌ ಹುಸೇನ, ಫತೆಖಾನ್‌, ರಫೀಕ್‌ ಖುರೇಶಿ, ಅಬ್ದುಲ್‌ ಮೂಬಿನ್‌, ಇದ್ರೀಸ್‌ ಸೌದಾಗರ್‌, ವಾಜೀದ್‌ ಖಾನ್‌, ಸಯ್ಯದ್‌ ಅಮ್ಜದ್‌, ಇಕ್ಬಾಲ್‌ ಅಹ್ಮದ್‌, ಮುಕ್ರುಂ ಪಟೇಲ್‌ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next