Advertisement

ಕನ್ನಡ ಧ್ವಜವನ್ನು ಅಪಮಾನ ಮಾಡಿರುವವರನ್ನು ಖಂಡಿಸುತ್ತೇನೆ: ಆರಗ ಜ್ಞಾನೇಂದ್ರ

01:48 PM Jun 16, 2022 | Team Udayavani |

ತೀರ್ಥಹಳ್ಳಿ : ಕನ್ನಡ ಧ್ವಜವನ್ನು ಅಪಮಾನ ಮಾಡಿರುವವರನ್ನು ಖಂಡಿಸುತ್ತೇನೆ. ಈ ರೀತಿ ಪ್ರತಿಭಟನೆಯಲ್ಲಿ ಕನ್ನಡ ಬಾವುಟ ವನ್ನು ತೆಗೆದುಕೊಂಡು ಹೋಗಲು ಶಕ್ತಿ ಇಲ್ಲದಿದ್ದರೆ ಮತ್ತು ಜನ ಇಲ್ಲದಿದ್ದರೆ ಬಾವುಟವನ್ನು ಯಾಕೆ ತೆಗೆದುಕೊಂಡು ಹೋಗಬೇಕು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಪ್ರತಿಭಟನಾ ಪಾದಯಾತ್ರೆಯಲ್ಲಿ ಕನ್ನಡ ಧ್ವಜವನ್ನು ನೆಲಕ್ಕೆ ಬೀಳಿಸಿ ಅವಮಾನ ಮಾಡಿರುವ ಕುರಿತು ದೂರವಾಣಿ ಮೂಲಕ ಮಾತನಾಡಿದ ಸಚಿವರು, ಇದು ಅನವಶ್ಯಕ ರಾಜಕೀಯ ನೆಡೆ. ರಾಜಕೀಯ ಹುನ್ನಾರಕ್ಕೋಸ್ಕರ ಮಾಡಿದ ಪ್ರತಿಭಟನೆ ಇದಾಗಿದೆ. ಹೋರಾಟಕ್ಕೂ ಕನ್ನಡದ ಪಠ್ಯಕ್ಕೂ ಸಂಬಂಧವೇ ಇಲ್ಲ. ಕನ್ನಡದ ಪಠ್ಯ ಪುಸ್ತಕವೆಲ್ಲವೂ ಚೆನ್ನಾಗಿಯೇ ಬಂದಿವೆ. ಈಗಾಗಲೇ ಅದರ ಬಗ್ಗೆ ವಿವರ ವಾಗಿ ಶಿಕ್ಷಣ ಸಚಿವರು ವಿವರಣೆ ಕೊಟ್ಟಿದ್ದಾರೆ ಎಂದರು.

ಇದನ್ನೂ ಓದಿ : ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಖಾತೆ ತೆರೆದ ಕಾಂಗ್ರೆಸ್; ಮಧು ಮಾದೇಗೌಡಗೆ ಜಯ

ಅನಾವಶ್ಯಕವಾಗಿ ಮೆರವಣಿಗೆ ಮಾಡಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನಾಡಗೀತೆ ವಿಡಂಬನೆ ಮಾಡಿದ್ದಾರೆ ಎಂದೆಲ್ಲ ಹೇಳುತ್ತಿದ್ದಾರೆ. ಇವರಿಗೆ ಚುನಾವಣೆ ಬಂದಾಗ ಮಾತ್ರ ನಾಡಗೀತೆ, ಕುವೆಂಪು ಅವರ ನೆನಪಾಗುತ್ತಾರ? ಇವರು ಶಿಕ್ಷಣ ಮಂತ್ರಿಯಾಗಿದ್ದಾಗ ಕುವೆಂಪು ಅವರಿಗೆ ಎಷ್ಟು ಗೌರವ ಕೊಟ್ಟಿದ್ದಾರೆ ಎಂದು ಗೊತ್ತಿದೆ. ಆವರಿದ್ದಾಗ ಕುವೆಂಪು ಬಗ್ಗೆ ಏಳು ಪಾಠ ಇತ್ತು ಈಗ ಹತ್ತು ಪಾಠ ಇದೆ. ಕುವೆಂಪು ಅವರಿಗೆ ಅವಮಾನ ಮಾಡಿದ್ಯಾರು ಅಂತ ಜನರಿಗೆ ಗೊತ್ತು ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next