Advertisement

ಚಿಕ್ಕೋಡಿ: ಸತೀಶ ಜಾರಕಿಹೊಳಿ ಹೇಳಿಕೆ ಖಂಡಿಸಿ ನಿಪ್ಪಾಣಿಯಲ್ಲಿ ಬೃಹತ್ ಪ್ರತಿಭಟನೆ

05:15 PM Nov 08, 2022 | Team Udayavani |

ಚಿಕ್ಕೋಡಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ಖಂಡಿಸಿ ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ನಿಪ್ಪಾಣಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಸತೀಶ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದರು.

Advertisement

ನಿಪ್ಪಾಣಿ ನಗರದ ಬಸ್ ನಿಲ್ದಾಣದಿಂದ ತಹಶೀಲ್ದಾರ ಕಚೇರಿಯವರಿಗೆ ಪ್ರತಿಭಟನಾಕಾರರು ಬೃಹತ್ ಮೆರವಣಿಗೆ ನಡೆಸಿ ಸತೀಶ ಜಾರಕಿಹೊಳಿ ಅವರಿಗೆ ದಿಕ್ಕಾರ ಕೂಗಿ ಹಿಂದೂ ಧರ್ಮಕ್ಕೆ ಜೈ ಅಂದರು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ದೇಶದ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಜನರಿಗೆ ತಪ್ಪು ಹೇಳಿಕೆ ಖಂಡನೀಯ. ಜನರಿಗೆ ತಪ್ಪು ಸಂದೇಶ ಕೊಟ್ಟು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಅಂತಹ ಹೇಳಿಕೆ ಯಾರು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು.

ಅಪ್ಪಟ ಹಿಂದೂ ಸಾಮ್ರಾಟ ನಾಡಿನಲ್ಲಿ ಹಿಂದೂ ಶಬ್ದಕ್ಕೆ ಅಪಮಾನ ಮಾಡಿರುವುದು ಎಷ್ಟು ಸರಿ. ಅದು ನಿಪ್ಪಾಣಿಯಲ್ಲಿ ಹಿಂದೂ ಬಗ್ಗೆ ಮಾತನಾಡಿರುವುದು ಈ ಭಾಗದ ಜನರನ್ನು ಕೆರಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಾ. ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನವನ್ನು ನಾವೆಲ್ಲರೂ ಅನುಸರಿಸುತ್ತಿದ್ದೇವೆ. ಬಸವೇಶ್ವರ ವಚನಗಳು ಮತ್ತು ಶಿವಾಜಿ ಮಹಾರಾಜರು ನೆಲೆಸಿದ್ದ ಭೂಮಿ ಕರ್ನಾಟಕ. ಏಕತೆ ಬಿಂಬಿಸುವ ಏಕೈಕ ರಾಷ್ಟ್ರ ಭಾರತ. ಈ ದೇಶದಲ್ಲಿ ಜಾತಿ-ಬೇಧ ಇಲ್ಲ. ಆದರೆ ಸತೀಶ ಜಾರಕಿಹೊಳಿ ಅವರ ಹಿಂದೂ ಧರ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ಯಾರು ಸಹಿಸುವುದಿಲ್ಲ. ನಿಪ್ಪಾಣಿಯಲ್ಲಿ ಮಾಡಿರುವ ಕಾರ್ಯಕ್ರಮ ಸ್ವಾಗತಿಸುತ್ತೇವೆ. ಆದರೆ ಹಿಂದೂ ಧರ್ಮದ ಬಗ್ಗೆ ಮಾತನಾಡಿರುವುದು ನಾವು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಶಿವಾಜಿ ಮತ್ತು ಸಂಭಾಜಿ ಮಹಾರಾಜರ ಬಗ್ಗೆ ಮಾತನಾಡಬೇಕಾದರೆ ಅವರ ಪೂರ್ವಾಪರ ಇತಿಹಾಸ ತಿಳಿದು ಮಾತನಾಡಬೇಕು. ಜನರಿಗೆ ಒಳ್ಳೆಯ ಸಂದೇಶ ಕೊಡುವುದು ಬಿಟ್ಟು ಜನರಲ್ಲಿ ತಪ್ಪು ಸಂದೇಶ ನೀಡಿರುವುದು ಖಂಡನೀಯ ಎಂದರು.

ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡಿದ ಸತೀಶ ಜಾರಕಿಹೊಳಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ, ನಗರಸಭೆ ಅಧ್ಯಕ್ಷ ಜಯವಂತ ಬಾಟಲೆ, ಉಪಾಧ್ಯಕ್ಷ ನೀತಾ ಬಾಗಡೆ, ಬಿಜೆಪಿ ನಗರ ಘಟಕ ಅಧ್ಯಕ್ಷ ಪ್ರಣವ ಮಾನವಿ, ಗ್ರಾಮೀಣ ಘಟಕದ ಅಧ್ಯಕ್ಷ ಪವನ ಪಾಟೀಲ, ಭಂಡಾ ಘೋರ್ಪಡೆ, ಅಬಿಜೀತ ಮುದುಕುಡೆ, ಕಾವೇರಿ ಮಿರ್ಜೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next